Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ತಂದೆಯ ಕಾರು ಕಳ್ಳತನ

Suv Car Belongs To Gautam Gambhirs Father Stolen

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದರಾಗಿರುವ ಗೌತಮ್ ಗಂಭೀರ್ ಅವರ ತಂದೆಯ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ. ದೆಹಲಿಯ ರಾಜಿಂದರ್ ನಗರ ಪ್ರದೇಶದಲ್ಲಿನ ಅವರ ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಕಳ್ಳರು ಕದ್ದಿದ್ದಾರೆ.

ಶುಕ್ರವಾರ ಮುಂಜಾವಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ದೆಹಲಿ ಪಿಲೀಸರು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್ ಅವರ ಹೆಸರಿನಲ್ಲಿದ್ದ ಕಾರು ಇದಾಗಿದೆ. ಬಿಳಿ ಬಣ್ಣದ ಟೊಯೊಟಾ ಪಾರ್ಚುನರ್ ಕಳ್ಳತನವಾಗಿರುವ ಕಾರ್ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗಾಗಿ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಐಎಎನ್ಎಸ್ ಜೊತೆಗೆ ದೆಹಲಿ ಕೇಂದ್ರ ವಿಭಾಗದ ಡಿಸಿಪಿ ಸಂಜುಯ್ ಭಾಟಿಯ ದೂರವಾ ಮೂಲಕ ಈ ಪ್ರಕರಣದ ಬಗ್ಗೆ ಮಾತನಾಡಿದರು. "ನಿನ್ನೆ ಮಧ್ಯಾಹ್ನ 3:30ರ ಸುಮಾರಿಗೆ ಕಾರನ್ನು ಮನೆಯ ಮುಂಬಾಗದಲ್ಲಿ ನಿಲ್ಲಿಸಿದ್ದರು. ಬೆಳಗೆ ನೋಡಿದಾಗ ಕಾರು ಕಳ್ಳತನವಾಗಿರುವುದು ಗೊತ್ತಾಗಿದೆ. ಸದ್ಯ ಎಫ್ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆಹಾಕಲಾಗಿದ್ದು ಪರಿಶೀಲನೆ ನಡೆಸಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸ್ ದಾಖಲೆಯ ಪ್ರಕಾರ ನಾಲ್ವರು ಅಪರಿಚಿತ ವ್ಯಕ್ತಿಗಳು ಟೊಯೊಟಾ ಇನ್ನೋವಾ ಕಾರ್‌ನಲ್ಲಿ ಆಗಮಿಸಿದ್ದರು. ಸ್ಥಳಕ್ಕೆ ಬಂದ ನಾಲ್ಕು ನಿಮಿಷಗಳಲ್ಲಿ ಕಾರಿನೊಂದಿಗೆ ಪಲಾಯನ ಮಾಡುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Story first published: Friday, May 29, 2020, 17:51 [IST]
Other articles published on May 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+