For Quick Alerts
ALLOW NOTIFICATIONS  
For Daily Alerts
 

21 ಸಿಕ್ಸರ್‌, 282 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ಆರ್‌ಸಿಬಿ ಕೈ ಬಿಟ್ಟ ಸ್ವಸ್ತಿಕ್ ಚಿಕಾರ

ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಾರ್ಚ್ 28 ರಿಂದ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ವೇಳೆ ಆರ್‌ಸಿಬಿ ತಂಡ ಕೈ ಬಿಟ್ಟ ಆಟಗಾರ ಒಬ್ಬ ಆರ್ಭಟ ನಡೆಸಿ ಗಮನ ಸೆಳೆದಿದ್ದಾರೆ.

ಈ ಬಾರಿಯ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಕೆಲವು ಆಟಗಾರರನ್ನು ಕೈ ಬಿಟ್ಟಿತ್ತು. ಅದರಲ್ಲಿ 20 ವರ್ಷದ ಸ್ವಸ್ತಿಕ್ ಚಿಕಾರ ಸಹ ಒಬ್ಬರು. ಎಲ್ಲರೂ ಇವರನ್ನು ಆರ್‌ಸಿಬಿ ಮತ್ತೆ ಹರಾಜಿನಲ್ಲಿ ಕೊಳ್ಳಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆರ್‌ಸಿಬಿ ಹರಾಜಿನಲ್ಲಿ ಈ ಯುವ ಆಟಗಾರನಿಗೆ ಮಣೆ ಹಾಕಲಿಲ್ಲ. ಬೆಂಗಳೂರು ತಂಡ ಅಷ್ಟೇ ಅಲ್ಲ ಐಪಿಎಲ್‌ ಫ್ರಾಂಚೈಸಿ ತಂಡಗಳು ಸಹ ಈ ಆಟಗಾರರನ್ನು ಖರೀದಿಸುವಲ್ಲಿ ಆಸಕ್ತಿ ತೋರಲಿಲ್ಲ. ಆದರೆ ಈಗ ದೇಶೀಯ ಲೀಗ್‌ನಲ್ಲಿ ಈ ಭರವಸೆಯ ಆಟಗಾರ ಆಡಿದ ಬ್ಯಾಟಿಂಗ್ ಧಾಟಿ ಕಂಡು ಎಲ್ಲ ಫ್ರಾಂಚೈಸಿಗಳು ಕೈ ಕೈ ಹಿಚಿಕೊಳ್ಳುತ್ತಿದ್ದಾರೆ.

Swastik Chikara

ಸದ್ಯ ಅಯೋಧ್ಯಾ ಪ್ರೀಮಿಯರ್ ಲೀಗ್‌ ನಡೆಯುತ್ತಿದೆ. ಈ ಲೀಗ್‌ನಲ್ಲಿ ಸ್ವಸ್ತಿಕ್ ಚಿಕಾರ್ ಗೋಮ್ಟಿ ಥಂಡರ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಭಾನುವಾರ (ಮಾರ್ಚ್ 22) ಗೋಮ್ಟಿ ಥಂಡರ್ ಹಾಗೂ ಹಿಂಡನ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಬ್ಯಾಟ್ ಮಾಡಿದ ಸ್ವಸ್ತಿಕ್ ಯಾರೂ ಊಹಿಸಲು ಆಗದ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಇವರು ಈ ಲೀಗ್‌ನಲ್ಲಿ ಜಸ್ಟ್‌ 69 ಎಸೆತಗಳಲ್ಲಿ 21 ಸಿಕ್ಸರ್‌ಗಳು ಮತ್ತು 11 ಬೌಂಡರಿ ನೆರವಿನಿಂದ 195 ರನ್‌ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 282.61 ಆಗಿತ್ತು. ಈ ಅಮೋಘ ಇನಿಂಗ್ಸ್‌ ಪರಿಣಾಮ ಗೋಮ್ಟಿ ಥಂಡರ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 307 ಸೇರಿಸಿತು.

ಐಪಿಎಲ್‌ನಲ್ಲಿ ಹರಾಜಾಗಾದ ಸ್ವಸ್ತಿಕ್‌

ಐಪಿಎಲ್‌ ಮಿನಿ ಹರಾಜಿನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸ್ವಸ್ತಿಕ್ ಚಿಕಾರ್‌ 30 ಲಕ್ಷ ಮೂಲ ಬೆಲೆಯೊಂದಿಗೆ ಕಣಕ್ಕೆ ಇಳಿದರು. ಆದರೆ ಇವರನ್ನು ಕೊಳ್ಳಲು ಯಾವುದೇ ತಂಡಗಳು ಆಸಕ್ತಿ ತೋರಲಿಲ್ಲ. ಇವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಿದ್ದರು. ಆದರೆ ಇವರಿಗೆ ಆಡುವ ಯಾವುದೇ ಅವಕಾಶ ಸಿಗಲಿಲ್ಲ. ಇನ್ನು 18ನೇ ಆವೃತ್ತಿಯ ಐಪಿಎಲ್‌ನಲ್ಲೂ ಸ್ವಸ್ತಿಕ್‌ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದರು. ಈ ಆವೃತ್ತಿಯಲ್ಲೂ ಇವರಿಗೆ ಬ್ಯಾಟ್ ಮಾಡುವ ಯಾವುದೇ ಅವಕಾಶ ಸಿಗಲಿಲ್ಲ. ಆದರೆ ಈಗ ಸ್ವಸ್ತಿಕ್ ಮಾಡಿದ ಬ್ಯಾಟಿಂಗ್ ಕಂಡು ಎಲ್ಲ ತಂಡಗಳು ಒಮ್ಮೆ ಇವರ ಬಗ್ಗೆ ಯೋಚಿಸುವಂತೆ ಆಗಿದೆ.

Story first published: Sunday, March 22, 2026, 17:23 [IST]
Other articles published on Mar 22, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+