ಬಿಗ್ ಬ್ಯಾಷ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ: ದೊಡ್ಡ ಅಪ್‌ಡೇಟ್ ನೀಡಿದ ಸಿಡ್ನಿ ಸಿಕ್ಸರ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಐಪಿಎಲ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಆರ್‌ಸಿಬಿ ತಂಡದ ಪರ ಕಣಕ್ಕೆ ಇಳಿಯುತ್ತಿರುವ ವಿರಾಟ್, ಅಭಿಮಾನಿಗಳಿಗೆ ಮುದ ನೀಡಿದ್ದಾರೆ. ಇದೇ ವೇಳೆ ಇವರ ಬ್ಯಾಟಿಂಗ್‌ನ್ನು ಹತ್ತಿರದಿಂದ ನೋಡುವ ಆಸೆ ಹಲವು ವಿದೇಶಿ ಅಭಿಮಾನಿಗಳಿಗೂ ಇದ್ದೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 1 ರಂದು ದೊಡ್ಡ ಸುದ್ದಿ ಹೊರ ಬಿದ್ದಿದೆ.
ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಯಾವೊಬ್ಬ ಆಟಗಾರ ವಿದೇಶಿ ಲೀಗ್‌ನಲ್ಲಿ ಭಾಗವಹಿಸುತ್ತಿಲ್ಲ. ಆದರೆ ಸಿಡ್ನಿ ಸಿಕ್ಸರ್ ಆ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಏಪ್ರಿಲ್ 1 ರಂದು ಈ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಅಲ್ಲದೆ ವಿರಾಟ್ ಅವರೊಂದಿಗೆ ಸಿಡ್ನಿ ತಂಡ ಎರಡು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ತಿಳಿಸಿದೆ. ಈ ಬಗ್ಗೆ ಸಿಡ್ನಿ ತಂಡ ತನ್ನ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದೆ.

ಏನಿದು ಅಸಲಿಯತ್ತು?
ಈ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಕಂಗಾಲಾಗಿದ್ದಾರೆ. ಅಲ್ಲದೆ ಇದರ ಅಸಲಿಯತ್ತು ತಿಳಿಯಲು ಮುಂದಾಗಿದ್ದಾರೆ. ಸಿಡ್ನಿ ಸಿಕ್ಸರ್ ವಿರಾಟ್ ಕೊಹ್ಲಿ ಬಗ್ಗೆ ಟ್ವೀಟ್ ಮಾಡಿದ ಬೆನ್ನಲ್ಲೆ ಮತ್ತೊಂದು ಟ್ವೀಟ್ ಮಾಡಿದೆ. ಆ ಟ್ವೀಟ್‌ನಲ್ಲಿ ಏಪ್ರಿಲ್ 1 ಮೂರ್ಖರ ದಿನವಾಗಿದೆ. ನಾವು ಮಾಡಿದ್ದು ತಮಾಷೆಗೆ ಎಂದು ಬಹಿರಂಗ ಪಡಿಸಿದೆ.
ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ದೂರ ಸರೆದಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ವಿರಾಟ್, ರೋಹಿತ್, ಜಡೇಜಾ ಅಂತಾರಾಷ್ಟ್ರೀಯ ಟಿ20 ಫಾರ್ಮೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಈಗ ಈ ಮೂವರು ಆಟಗಾರರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಸದ್ಯ ವಿರಾಟ್ ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲೆಬು. ಇವರು ಐಪಿಎಲ್‌ನಲ್ಲಿ 8094 ರನ್ ಸಿಡಿಸಿದ್ದು, 8 ಶತಕ ಹಾಗೂ 56 ಅರ್ಧಶತಕವನ್ನು ಬಾರಿಸಿದ್ದಾರೆ.
ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡುವುದಿಲ್ಲ. ಅವರು ನಿವೃತ್ತರಾಗುವವರೆಗೂ ಅವರು ಯಾವುದೇ ಲೀಗ್‌ನಲ್ಲಿ ಭಾಗವಹಿಸುವಂತೆ ಇಲ್ಲ.
ಆರ್‌ಸಿಬಿ ಭರ್ಜರಿ ಆರಂಭ
ಆರ್‌ಸಿಬಿ ಸದ್ಯ ಬೊಂಬಾಟ ಫಾರ್ಮ್‌ನಲ್ಲಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲಿದೆ. ಐಪಿಎಲ್‌ನ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಜಯ ಸಾಧಿಸಿರುವ ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಈ ವೇಳೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ವಿರುದ್ಧ 59 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದ್ದ ವಿರಾಟ್, ಚೆನ್ನೈ ವಿರುದ್ಧ ಪಂದ್ಯದಲ್ಲಿ 31 ರನ್ ಸಿಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications