Jasprit Bumrah: ಸಿಡ್ನಿ ಟೆಸ್ಟ್ ಮಧ್ಯೆ ಟೀಮ್ ಇಂಡಿಯಾ ಕೆಟ್ಟ ಸುದ್ದಿ: ವಿರಾಟ್ ಕೊಹ್ಲಿ ನಾಯಕ
ಟೀಮ್ ಇಂಡಿಯಾ ಸಿಡ್ನಿ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಭಾರತ ತಂಡದ ಬೌಲರ್‌ಗಳು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಮುನ್ನಡೆಗೆ ಕಾರಣರಾಗಿದ್ದಾರೆ. ಈ ನಡುವೆ ಟೀಮ್ ಇಂಡಿಯಾ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಸುದ್ದಿಯೊಂದು ಬಂದಿದೆ. ಈ ಸುದ್ದಿ ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ. ಈಗ ಬಂದಿರುವ ಸುದ್ದಿ ಅಭಿಮಾನಿಯ ಹೃದಯ ಬಡಿತ ಹೆಚ್ಚಾಗಿದೆ.
ಈ ಸರಣಿಯ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬೌಲರ್ ಜಸ್ಪ್ರೀತ್ ಬುಮ್ರಾ. ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಬುಮ್ರಾ ಕೊಂಚ ಗಾಯಕ್ಕೆ ತುತ್ತಾದಂತೆ ಕಂಡು ಬಂದಿತು. ಬಳಿಕ ಇವರನ್ನು ಸಹಾಯಕ ಸಿಬ್ಬಂದಿಗಳು ಮೈದಾನದಿಂದ ಆಸ್ಟ್ರತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಇವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತದೆ. ಬುಮ್ರಾ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಭರ್ಜರಿ ಪಾರ್ಮ್‌ನಲ್ಲಿರುವ ಜಸ್ಪ್ರಿತ್ ಬುಮ್ರಾ ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ನಾಯಕತ್ವ ಹಾಗೂ ಬೌಲಿಂಗ್ ನಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಸಿಡ್ನಿಯಲ್ಲಿ ಬುಮ್ರಾ ಅವಶ್ಯಕತೆ ತುಂಬ ಇದೆ. ಈ ಸರಣಿಯಲ್ಲಿ ಬುಮ್ರಾ ಒಟ್ಟು 32 ವಿಕೆಟ್ ಕಬಳಿಸಿದ್ದಾರೆ. ಈ ಸರಣಿಯಲ್ಲಿ ಉಭಯ ತಂಡಗಳ ಪರ ಯಾವೊಬ್ಬ ಬೌಲರ್ ಈ ರೀತಿಯ ಪ್ರದರ್ಶನ ನೀಡಿಲ್ಲ. ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಿಂದ ದೂರ ಉಳಿದಿದ್ದರಿಂದ, ಬುಮ್ರಾ ನಾಯಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಗಾಯದ ಬಗೆಗಿನ ಸುದ್ದಿಯನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.
ಕೊಹ್ಲಿ ನಾಯಕ
ರನ್ ಬರ ಅನುಭವಿಸುತ್ತಿರುವ ರೋಹಿತ್ ಶರ್ಮಾ ತಾವೇ ಈ ಟೆಸ್ಟ್ ನಿಂದ ದೂರ ಸರಿದಿದ್ದಾರೆ. ಹೀಗಿದ್ದಾಗ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿ ಜಸ್ಪ್ರಿತ್ ಬುಮ್ರಾ ಅವರ ಹೆಗಲಿಗೆ ಬಿದ್ದಿದೆ. ಬುಮ್ರಾ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಬುಮ್ರಾ ನಾಯಕರಾಗಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದರು. ಹೀಗಾಗಿ ಇವರ ಹೆಗಲಿಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಆದರೆ ಬುಮ್ರಾ ಗಾಯಕ್ಕೆ ತುತ್ತಾಗಿದ್ದರಿಂದ ಅವರು ಮೈದಾನಕ್ಕೆ ಮರಳುವವರೆಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಬುಮ್ರಾಗೆ ಯಾವ ರೀತಿಯ ಗಾಯವಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications