For Quick Alerts
ALLOW NOTIFICATIONS  
For Daily Alerts
 

Sydney test: ಕನ್ನಡಿಗ ಪ್ರಸಿದ್ಧ, ಸಿರಾಜ್‌ಗೆ 3 ವಿಕೆಟ್‌: ಆಸ್ಟ್ರೇಲಿಯಾ 181ಕ್ಕೆ ಆಲೌಟ್‌, ಭಾರತಕ್ಕೆ 4 ರನ್‌ ಮುನ್ನಡೆ

ಬಾರ್ಡರ್‌ ಗವಾಸ್ಕರ್‌ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಟೀಮ್ ಇಂಡಿಯಾ, ಸಿಡ್ನಿ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಐದನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ಅಬ್ಬರಿಸಿದೆ. ಬೌಲರ್‌ಗಳು ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿತು. ಟೀಮ್ ಇಂಡಿಯಾದ ಕರಾರುವಕ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಆಸೀಸ್ ಸ್ಟಾರ್ ಬ್ಯಾಟರ್‌ಗಳು ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 4 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದೆ.

ಭಾರತ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ 185 ರನ್‌ಗಳಿಗೆ ಆಲೌಟ್ ಆಗಿತ್ತು. ಶನಿವಾರ 1 ವಿಕೆಟ್‌ಗೆ 9 ರನ್‌ಗಳಿಂದ ಆಟ ಆರಂಭಿಸಿದ ಆಸ್ಟ್ರೇಲಿಯಾ 181 ರನ್‌ಗಳಿಗೆ ಅಲೌಟ್ ಆಯಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 51 ಓವರ್‌ಗಳನ್ನು ಮಾತ್ರ ಆಡಿತು.

Sydney test Kannadiga Prasidh Siraj Take 3 wickets Australia 181 all out India lead by 4 runs

ಸ್ಟಾರ್‌ಗಳ ವೈಫಲ್ಯ

ಆಸ್ಟ್ರೇಲಿಯಾದ ತಂಡದ ಯಾವೊಬ್ಬ ಬ್ಯಾಟರ್‌ ಕ್ರೀಸ್‌ನಲ್ಲಿ ತಳವೂರಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರಂಭಿಕ ಆಟಗಾರ ಸ್ಯಾಮ್‌ ಕಾನ್‌ಸ್ಟಾಸ್‌ 22 ರನ್‌ ಗಳಿಗೆ ಔಟ್ ಆದರು. ಮಾರ್ನಸ್‌ ಲಂಬುಶೇನ್‌ 2 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಬಹುವಾಗಿ ಕಾಡಿದ್ದ ಟ್ರಾವಿಸ್‌ ಹೆಡ್‌, ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಮಂಕಾದರು. ಇವರು 4 ರನ್‌ ಬಾರಿಸಿದ್ದಾಗ ಮೊಹಮ್ಮದ್ ಸಿರಾಜ್‌ ತೋಡಿದ ಖೆಡ್ಡಾಗೆ ಬಲಿಯಾಗಿ ರಾಹುಲ್‌ಗೆ ಕ್ಯಾಚ್ ನೀಡಿದರು.

ಆಸ್ಟ್ರೇಲಿಯಾದ ಭರವಸೆಯ ಬ್ಯಾಟರ್ ಸ್ಟೀವ್ ಸ್ಮಿತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 57 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್‌ ಸಹಾಯದಿಂದ 33 ರನ್‌ ಸಿಡಿಸಿದರು. ಐದನೇ ವಿಕೆಟ್‌ಗೆ ಸ್ಮಿತ್ ಹಾಗೂ ಬ್ಯೂ ವೆಬ್‌ಸ್ಟಾರ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 92 ಎಸೆತಗಳಲ್ಲಿ 57 ರನ್‌ ಸಿಡಿಸಿ ತಂಡಕ್ಕೆ ಆಧಾರವದರು.

ವೆಬ್‌ಸ್ಟಾರ್‌ ಅರ್ಧಶತಕ

ಆಸ್ಟ್ರೇಲಿಯಾದ ಪರ ಪದಾರ್ಪಣೆ ಪಂದ್ಯವನ್ನು ಆಡಿದ ಬ್ಯೂ ವೆಬ್‌ಸ್ಟಾರ್ ತಂಡಕ್ಕೆ ಆಧಾರವಾದರು. 31 ವರ್ಷದ ಆಟಗಾರ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಇವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಇವರು 105 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 57 ರನ್‌ ಬಾರಿಸಿ ಕನ್ನಡಿಗ ಪ್ರಸಿದ್ಧ ಕೃಷ್ಣಾ ಅವರಿಗೆ ವಿಕೆಟ್‌ ಒಪ್ಪಿಸಿದರು.

ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 21, ಪ್ಯಾಟ್ ಕಮಿನ್ಸ್ 10 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

Sydney test Kannadiga Prasidh Siraj Take 3 wickets Australia 181 all out India lead by 4 runs

ಪ್ರಸಿದ್ಧ ಅಬ್ಬರ

ಬಹು ತಿಂಗಳುಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಿರುವ ಪ್ರಸಿದ್ಧ ಕೃಷ್ಣ ಅಬ್ಬರಿಸಿದರು. ಇವರು 42 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಇನ್ನು ಮೊಹಮ್ಮದ್ ಸಿರಾಜ್ 51 ರನ್‌ಗೆ 3 ವಿಕೆಟ್‌ ಪಡೆದರು. ಉಳಿದಂತೆ ಜಸ್ಪ್ರಿತ್ ಬುಮ್ರಾ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ತಲಾ ಎರಡು ವಿಕೆಟ್‌ ಪಡೆದರು.

ಗೆಲುವಿನ ಒತ್ತಡ

ಭಾರತ ಐದನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಈ ಮೂಲಕ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆ ಜಸ್ಪ್ರಿತ್ ಬುಮ್ರಾ ಬಳಗದ್ದಾಗಿದೆ. ಅಲ್ಲದೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Story first published: Saturday, January 4, 2025, 9:54 [IST]
Other articles published on Jan 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+