Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sydney Test: ಭಾರತದ ಗೆಲುವಿನ ಆಸೆಗೆ ತಣ್ಣೀರು ಎರಚುತ್ತಾ ವರುಣ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಹಾಗೂ ಬಾರ್ಡರ್‌ ಗವಾಸ್ಕರ್‌ ಸರಣಿಯ ಕೊನೆಯ ಟೆಸ್ಟ್‌ ಸಿಡ್ನಿಯಲ್ಲಿ ನಡೆಯಲಿದೆ. ಈ ಟೆಸ್ಟ್‌ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಟ್ರೋಫಿಯ ಮೇಲೆ ತನ್ನ ಕೈ ಸಹ ಇಡಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ಈ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಪ್ರವೇಶಿಸುವ ಕನಸನ್ನು ಸಹ ಜೀವಂತವಾಗಿರಿಸಿಕೊಳ್ಳುವ ಕನಸು ಕಣುತ್ತಿದೆ.

ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಟೀಮ್ ಇಂಡಿಯಾ, ಹೀನಾಯ ಸೋಲು ಕಂಡಿತು. ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಜಯ ಸಾಧಿಸಿದೆ. ಟೀಮ್ ಇಂಡಿಯಾ ಐದನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿಯಲ್ಲಿ ಸಮಬಲ ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಒಂದು ವೇಳೆ ಟೀಮ್ ಇಂಡಿಯಾ ಕೊನೆಯ ಟೆಸ್ಟ್‌ ಗೆದ್ದು, ಆಸೀಸ್‌ ಶ್ರೀಲಂಕಾ ಪ್ರವಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೇ ಇದ್ದಾಗಲೂ ಟೀಮ್ ಇಂಡಿಯಾ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸಬಹುದು.

Sydney Test Rain Threat Looms Over India s Quest for Series Win and WTC Final Spot

ಗೆಲುವಿನ ಆಸೆಗೆ ಬಿಳುತ್ತಾ ಬ್ರೇಕ್?

ಭಾರತ ತಂಡ ಬಲಿಷ್ಠ ತಂಡವನ್ನು ಕಟ್ಟಿ ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕು ಎಂಬ ಪ್ಲ್ಯಾನ್ ಮಾಡಿಕೊಡಿದೆ. ಆದರೆ ಟೀಮ್ ಇಂಡಿಯಾ ಗೆಲುವಿಗೆ ಆ ಒಂದು ವಿಷಯ ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಸಿಡ್ನಿ ಟೆಸ್ಟ್‌ನಲ್ಲಿನ ಹವಾಮಾನವು ಭಾರತ ತಂಡಕ್ಕೆ ದೊಡ್ಡ ಸವಾಲನ್ನು ಸೃಷ್ಟಿಸುತ್ತದೆ. ಜನವರಿ 3 ರಿಂದ ಸಿಡ್ನಿ ಟೆಸ್ಟ್ ಆರಂಭವಾಗಲಿದೆ. ಈ ವೇಳೆ ಟೆಸ್ಟ್‌ ಪಂದ್ಯದ ಮೊದಲ ಮೂರು ದಿನಗಳು ಮಳೆ ಅಷ್ಟಾಗಿ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನಾಲ್ಕನೇ ಹಾಗೂ ಐದನೇ ದಿನದಾಟಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ ಜನವರಿ 2ರಂದು ಸಿಡ್ನಿಯಲ್ಲಿ ಶೇ.57ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಮುಂದೆ ನಾಲ್ಕು ದಿನ ವರುಣ್‌ ತನ್ನ ಆರ್ಭಟವನ್ನು ತಣ್ಣಗೆ ಮಾಡುತ್ತಾನೆ. ಟೆಸ್ಟ್ ನ ಕೊನೆಯ ದಿನ ಅಂದರೆ ಜನವರಿ 7 ರಂದು ಶೇ.80 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಗೆಲುವಿನ ಆಸೆಗೆ ವರುಣ ಬ್ರೇಕ್ ಹಾಕುತ್ತಾನೋ, ವರ ನೀಡುತ್ತಾನೋ ಕಾದು ನೋಡಬೇಕಿದೆ.

Sydney Test Rain Threat Looms Over India s Quest for Series Win and WTC Final Spot

ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪ್ರವೇಶಿಸಿದೆ. ಆದರೆ ಎರಡನೇ ತಂಡ ಯಾವುದು ಎಂಬ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲ. ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ತಂಡಗಳು ಸಹ ಫೈನಲ್‌ ಸ್ಲಾಟ್‌ ಮೇಲೆ ಕಣ್ಣು ನೆಟ್ಟಿವೆ. ಸದ್ಯ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

Story first published: Wednesday, January 1, 2025, 11:10 [IST]
Other articles published on Jan 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+