For Quick Alerts
ALLOW NOTIFICATIONS  
For Daily Alerts
 

ಇಟ್ಟಿಗೆಯನ್ನೇ ಗ್ಲೌಸ್‌ ಆಗಿ ಮಾಡಿಕೊಂಡ ಕರ್ನಾಟಕದ ಈ ಬಾಲಕ ಸ್ಟಾರ್ ವಿಕೆಟ್‌ ಕೀಪರ್ ಆದದ್ದೇಗೆ?

By ನಾಗೇಶ್

ಶಾಲೆಯಲ್ಲಿ ಎಲ್ಲ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಪೋರ. ಸಮಯ ಸಿಕ್ಕಾಗ ಹಾಕಿ, ಫುಟ್ಬಾಲ್‌ ಅಂಗಳದಲ್ಲಿ ತನ್ನ ಛಾಪು ಮೂಡಿಸಿದ ಚತುರ. ಬಳಿಕ ಕ್ರಿಕೆಟ್‌ ಮೈದಾನದಲ್ಲಿ ಬೆವರು ಹರಿಸುತ್ತಿದ್ದ ಬಾಲಕ. ಒಂದೊಮ್ಮೆ ಬೆಂಗಳೂರಿನ ಜಯಮಹಲ್‌ ಬಡಾವಣೆಯಲ್ಲಿ ಕ್ರಿಕೆಟ್‌ ಆಡುವಾಗ ವಿಕೆಟ್‌ ಕೀಪಿಂಗ್ ಮಾಡಲು ಯಾರು ಸಿಗಲಿಲ್ಲ. ಆಗ ಈ ಚಿಕ್ಕ ಬಾಲಕನನ್ನು ಕರೆದು ವಿಕೆಟ್ ಕೀಪಿಂಗ್ ಮಾಡುವಂತೆ ಸೂಚಿಸಲಾಯಿತು.

ಕಾರ್ಕ್ ಬಾಲ್ ಆಗಿದ್ದರಿಂದ ವಿಕೆಟ್‌ ಕೀಪಿಂಗ್ ಮಾಡುವುದು ಸುಲಭ ಆಗಿರಲಿಲ್ಲ. ಆದರೆ, ಚಿಕ್ಕ ಬಾಲಕ ಅಲ್ಲಿಯೆ ಪಕ್ಕದಲ್ಲಿ ಕಟ್ಟಡ ನಿರ್ಮಿಸಲು ಇಟ್ಟಿದ್ದ ಇಟ್ಟಿಗೆಯನ್ನೇ ಗ್ಲೌಸ್‌ ಅನ್ನಾಗಿ ಪರಿವರ್ತಿಸಿಕೊಂಡ. ಆಗ ಈತನ ಜೊತೆಗೆ ಆಡುವ ಜನರಿಗೆ ಏನು ಗೊತ್ತಿತ್ತು, ಇವನೇ ಟೀಮ್ ಇಂಡಿಯಾದ ಏಕದಿನ ವಿಶ್ವಕಪ್‌ ವಿಜೇತ ತಂಡದ ಸ್ಟಾರ್ ವಿಕೆಟ್‌ ಕೀಪರ್ ಆಗುತ್ತಾನೆ ಎಂದು. ಹೌದು ಜಯಮಹಲ್‌ನ ಬೀದಿಗಳಲ್ಲಿ ಆಡಿದ ಬಾಲಕ ಬೇರೆ ಯಾರು ಅಲ್ಲ ವಿಶ್ವ ಕಂಡ ಶ್ರೇಷ್ಠ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾದ ಸೈಯದ್ ಕಿರ್ಮಾನಿ.

 Syed Kirmani: Indias Cricket Icon Behind the Stumps

ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆದು ನಿಂತ ಆಟಗಾರ. ಹಂತ ಹಂತವಾಗಿ ದೇಶೀಯ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ಲೇಯರ್‌. ವೇಗದ ಬೌಲರ್‌ಗಳಿಗೆ ವಿಕೆಟ್‌ ಗಳಿಂದ ದೂರ ಹಾಗೂ ಸ್ಪಿನ್ ಬೌಲರ್‌ಗಳಿಗೆ ವಿಕೆಟ್‌ ಹತ್ತಿರ ನಿಂತು ಕೀಪಿಂಗ್‌ ಮಾಡುತ್ತಿದ್ದರು ಕಿರ್ಮಾನಿ. ಇದೇ ದಾಟಿಯನ್ನು ಇಗಿನ ವಿಕೆಟ್‌ ಕೀಪರ್‌ಗಳು ಮೈಗೂಡಿಸಿಕೊಂಡಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ ನಲ್ಲಿ ಪರಿಣಿತಿ ಹೊಂದಿದ್ದ ಸೈಯದ್ ಕಿರ್ಮಾನಿ ಕರ್ನಾಟಕದ ಹೆಮ್ಮೆಯ ಆಟಗಾರ. ಅಲ್ಲದೆ ಭಾರತ 1983ರಲ್ಲಿ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1983 ರ ವಿಶ್ವಕಪ್ ಹೀರೋ

ಸೈಯದ್ ಕಿರ್ಮಾನಿ 1983ರ ವಿಶ್ವಕಪ್‌ನ ಅತ್ಯುತ್ತಮ ವಿಕೆಟ್‌ಕೀಪರ್‌ ಎಂಬ ಗೌರವಕ್ಕೆ ಪಾತ್ರರಾದ ಆಟಗಾರ. ಇದಕ್ಕೆ ಬಹುಮಾನವಾಗಿ, ಅವರಿಗೆ ಬೆಳ್ಳಿಯ ಚೆಂಡನ್ನು ಹೊಂದಿದ ಕೈಗವಸುಗಳನ್ನು ನೀಡಲಾಗಿತ್ತು. ಅದರ ಅಡಿಯಲ್ಲಿ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಬರೆಯಲಾಗಿದೆ. ಆ ವಿಶ್ವಕಪ್ ನಲ್ಲಿ, ಕಿರ್ಮಾನಿ ಅತಿ ಹೆಚ್ಚು ವಿಕೆಟ್‌ ಪಡೆದ ನಡೆಸಿದ ಎರಡನೇ ವಿಕೆಟ್ ಕೀಪರ್‌. ಕಿರ್ಮಾನಿ 8 ಪಂದ್ಯಗಳಲ್ಲಿ 12 ಕ್ಯಾಚ್‌ಗಳು ಮತ್ತು ಎರಡು ಸ್ಟಂಪಿಂಗ್‌ಗಳನ್ನು ಒಳಗೊಂಡಂತೆ ಒಟ್ಟು 14 ವಿಕೆಟ್ ಪಡೆದಿದ್ದರು.

ನೈಟ್ ವಾಚ್‌ಮನ್ ಆಗಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ

ವಿಕೆಟ್ ಕೀಪಿಂಗ್ ಜೊತೆಗೆ ಸೈಯದ್ ಕಿರ್ಮಾನಿ ಉತ್ತಮ ಬ್ಯಾಟರ್. 1979 ರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಕಿರ್ಮಾನಿ ಅವರನ್ನು ನೈಟ್ ವಾಚ್ ಮನ್‌ ಆಗಿ ಕಳುಹಿಸಲಾಯಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಿರ್ಮಾನಿ ಅಜೇಯ 101 ರನ್ ಗಳಿಸಿದರು. ಇದು ಕಿರ್ಮಾನಿ ಅವರ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕವಾಗಿದೆ. ಅಲ್ಲದೆ, ನೈಟ್ ವಾಚ್ ಮನ್ ಆಗಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಿರ್ಮಾನಿ ಪಾಕಿಸ್ತಾನ ವಿರುದ್ಧ ನಾಗ್ಪುರದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಒಂದು ವಿಕೆಟ್‌ ಸಹ ಪಡೆದಿದ್ದಾರೆ. ಆ ಟೆಸ್ಟ್‌ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಕಿರ್ಮಾನಿ ಭಾರತದ ಪರ ಎರಡು ಓವರ್‌ಗಳನ್ನು ಬೌಲ್ ಮಾಡಿದರು. ಆಫ್ ಸ್ಪಿನ್ನರ್ ಕಿರ್ಮಾನಿ ಪಾಕ್ ಆರಂಭಿಕ ಬ್ಯಾಟ್ಸ್ ಮನ್ ಅಜೀಂ ಹಫೀಜ್ ಅವರನ್ನು ಬೌಲ್ಡ್ ಮಾಡಿದರು.

ಸೈಯದ್ ಕಿರ್ಮಾನಿ 88 ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಮತ್ತು 12 ಅರ್ಧಶತಕಗಳೊಂದಿಗೆ 2759 ರನ್ ಗಳಿಸಿದ್ದಾರೆ. ವಿಕೆಟ್‌ಕೀಪರ್ ಆಗಿ, ಕಿರ್ಮಾನಿ ಟೆಸ್ಟ್‌ನಲ್ಲಿ ಒಟ್ಟು 198 ಔಟ್‌ ಮಾಡಿದ್ದಾರೆ. ಅದರಲ್ಲಿ 38 ಸ್ಟಂಪಿಂಗ್‌ಗಳು ಸೇರಿವೆ.

Story first published: Thursday, August 17, 2023, 12:32 [IST]
Other articles published on Aug 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+