Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SMAT 2024: ಮೈದಾನ ಪ್ರವೇಶಿಸಲಿದ್ದಾರೆ ಟೀಮ್ ಇಂಡಿಯಾ ಸ್ಟಾರ್ಸ್: ಕರ್ನಾಟಕ, ಉತ್ತರಾಖಂಡ ಫೈಟ್‌

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪರ್ತ್‌ನ ಮೊದಲ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿವೆ. ಬಾರ್ಡರ್ ಗವಾಸ್ಕರ್ ಸರಣಿಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ, ಶನಿವಾರ (ನವೆಂಬರ್‌ 23) ಮೈದಾನ ಪ್ರವೇಶಿಸಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ, ಶ್ರೇಯಸ್‌ ಅಯ್ಯರ್‌, ಬಾರ್ಡರ್‌ ಗವಾಸ್ಕರ್‌ ಸರಣಿಯ ಮುಂದಿನ ಪಂದ್ಯಗಳಿಗೆ ತಂಡ ಸೇರುವ ಕನಸು ಕಾಣುತ್ತಿರುವ ಮೊಹಮ್ಮದ್ ಶಮಿ ಮೈದಾನ ಪ್ರವೇಶಿಸಲಿದ್ದಾರೆ. ಇಂದು ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ಕಾದಾಟ ನಡೆಸಲಿವೆ.

ಸೈಯದ್ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಲಿದ್ದಾರೆ. ಈ ಆಟಗಾರರು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಐಪಿಎಲ್‌ 2025 ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಆಟಗಾರರಿಗೆ ಈ ಪಂದ್ಯಾವಳಿ ಬಹಳ ಮುಖ್ಯವಾಗುತ್ತದೆ. ರಾಜ್‌ಕೋಟ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಪಂಜಾಬ್ ಮತ್ತು ಬೆಂಗಾಲ್ ನಡುವೆ ಮೊದಲ ಪಂದ್ಯ ನಡೆಯಲಿದೆ.

Syed Mushtaq Ali Trophy 2024 Full Groups Schedule and Streaming Details

38 ತಂಡಗಳು 5 ಗುಂಪುಗಳಲ್ಲಿ

ಸೈಯದ್ ಮುಷ್ತಾಕ್‌ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 38 ತಂಡಗಳು 5 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಕರ್ನಾಟಕ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ತಂಡ ಬರೋಡಾ, ಗುಜರಾತ್, ತಮಿಳುನಾಡು, ಉತ್ತರಾಖಂಡ, ಸೌರಾಷ್ಟ್ರ, ಸಿಕ್ಕಿಂ, ತ್ರಿಪುರ ವಿರುದ್ಧ ಕಾದಾಟ ನಡೆಸಲಿದೆ. ಎ ಗುಂಪಿನಲ್ಲಿ ಬಂಗಾಳ, ಪಂಜಾಬ್, ಬಿಹಾರ, ರಾಜಸ್ಥಾನ, ಹೈದರಾಬಾದ್, ಮೇಘಾಲಯ, ಮಧ್ಯಪ್ರದೇಶ, ಮಿಜೋರಾಂ ತಂಡಗಳು ಸ್ಥಾನ ಪಡೆದಿವೆ.

ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಸಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಡಿ ಗುಂಪಿನಲ್ಲಿ ಅಸ್ಸಾಂ, ರೈಲ್ವೇಸ್, ಚಂಡೀಗಢ, ಪುದುಚೇರಿ, ವಿದರ್ಭ, ಒಡಿಶಾ, ಛತ್ತೀಸ್‌ಗಢ ಸ್ಥಾನ ಪಡೆದಿವೆ. ಗೋವಾ, ಮುಂಬೈ, ಕೇರಳ, ಸರ್ವಿಸಸ್, ಮಹಾರಾಷ್ಟ್ರ, ನಾಗಾಲ್ಯಾಂಡ್, ಆಂಧ್ರ ಇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಮುಂದಾಳತ್ವದ ಮುಂಬೈ ತಂಡ, ಗೋವಾ ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಯಾವಾಗ ಎಲ್ಲಿ ಆರಂಭ?

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳು ನವೆಂಬರ್ 23 ರಿಂದ ಪ್ರಾರಂಭವಾಗಲಿವೆ. ನಾಕೌಟ್ ಪಂದ್ಯಗಳು ಡಿಸೆಂಬರ್ 3 ರಿಂದ ನಡೆಯಲಿದ್ದು, ಫೈನಲ್ ಪಂದ್ಯ ಡಿಸೆಂಬರ್ 15 ರಂದು ನಡೆಯಲಿದೆ. ಮೊದಲ ಪಂದ್ಯ 9 ಗಂಟೆಗೆ ನಡೆದರೆ, ಮಧ್ಯಾಹ್ನ 1.30ಗೆ ಮತ್ತೊಂದು ಹಾಗೂ ಕೊನೆಯ ಪಂದ್ಯ ಸಂಜೆ 4:30ಕ್ಕೆ ನಡೆಯಲಿದೆ. ಸ್ಪೋರ್ಟ್ಸ್ 18ನಲ್ಲಿ ಈ ಪಂದ್ಯಗಳ ನೇರ ಪ್ರಸಾರ ನೋಡಬಹುದು.

Story first published: Saturday, November 23, 2024, 7:50 [IST]
Other articles published on Nov 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+