For Quick Alerts
ALLOW NOTIFICATIONS  
For Daily Alerts
 

SMAT: ಕೊನೆಯ ಎಸೆತದಲ್ಲಿ ಸಿಕ್ಸ್‌ ಸಿಡಿಸಿ ಬರೋಡಾವನ್ನು ಸೆಮಿಫೈನಲ್‌ಗೇರಿಸಿದ ವಿಷ್ಣು ಸೋಲಂಕಿ

Syed Mushtaq Ali Trophy : Baroda win against Haryana Reaches semi finals

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಂತಿಮ ಘಟ್ಟವನ್ನು ತಲುಪುತ್ತಿದೆ. ಬುಧವಾರ ಹರ್ಯಾಣ ಹಾಗೂ ಬರೋಡಾ ತಂಡಗಳ ಮಧ್ಯೆ ನಡೆದ ಕ್ವಾರ್ಟರ್ ಫೈನಲ್ ಕಾದಾಟ ಅಭಿಮಾನಿಗಳಿಗೆ ರಸದೌತಣವನ್ನೇ ನೀಡಿತ್ತು. ಅಂತಿಮ ಎಸೆತದವರೆಗೂ ಸಾಗಿದ ಈ ಪಂದ್ಯದಲ್ಲಿ ಅಂತಿಮ ಮೂರು ಎಸೆತಗಳಲ್ಲಿ 16 ರನ್ ಸಿಡಿಸುವ ಮೂಲಕ ಬರೋಡಾ ತಂಡವನ್ನು ಗೆಲ್ಲಿಸಿದ ವಿಷ್ಣು ಸೋಲಂಕಿ ಹೀರೋ ಆಗಿ ಮೆರೆದರು.

ಬರೋಡಾ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲುವಿನ 18 ರನ್‌ಗಳ ಅಗತ್ಯವಿತ್ತು. ಆದರೆ ಮೊದಲ 3 ಎಸೆತಗಳಲ್ಲಿ ಬರೋಡಾ 3 ಒಂಟಿ ರನ್ ತೆಗೆಯಲು ಸಾಧ್ಯವಾಗಿತ್ತು. ಆದರೆ ಅಂತಿಮ ಮೂರು ಎಸೆತಗಳಲ್ಲಿ ಬರೋಡ ಊಹಿಸಲು ಸಾಧ್ಯವಾಗದಂತೆ ಗೆದ್ದಿತ್ತು. ಸ್ಟ್ರೈಕ್‌ನಲ್ಲಿದ್ದ ವಿಷ್ಣು ಸೋಲಂಕಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಗೆಲುವನ್ನು ಸಾರಿದರು.

ಹೆಲಿಕಾಪ್ಟರ್ ಶಾಟ್ ಹೊಡೆದು ಗೆಲುವು

ಅಂತಿಮ ಎಸೆತದಲ್ಲಿ ಬರೋಡಾ ಗೆಲ್ಲಬೇಕಾದರೆ 5 ರನ್‌ಗಳ ಅಗತ್ಯವಿತ್ತು. ಸುಮಿತ್ ಕುಮಾರ್ ಎಸೆದ ಎಸೆತವನ್ನು ವಿಷ್ಣು ಮಾಜಿ ನಾಯಕ ಎಂಎಸ್ ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆದು ಗೆಲುವನ್ನು ಸಾರಿದರು. ಈ ಮೂಲಕ ಬರೋಡಾ ತಂಡವನ್ನು ಸೆಮಿಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.

149 ರನ್‌ಗಳ ಗುರಿ ನೀಡಿದ ಹರ್ಯಾಣ

149 ರನ್‌ಗಳ ಗುರಿ ನೀಡಿದ ಹರ್ಯಾಣ

ಮೊದಲಿಗೆ ಬ್ಯಾಟಿಂಗ್ ಮಾಡಿದ ಹರ್ಯಾಣ ನಿಗದಿತ 20 ಓವರ್‌ಗಳಲ್ಲಿ 148 ರನ್ ಗಳಿಸಲು ಮಾತ್ರ ಶಕ್ತವಾಗಿತ್ತು. ಹಿಮಾನ್ಶು ರಾಣಾ 49 ರನ್ ಹಾಗೂ ಶಿವಂ ಚೌಹಾಣ್ 35 ರನ್ ಸಿಡಿಸುವ ಮೂಲಕ ಹರ್ಯಾಣ ತಂಡ ಗೌರವಯುತ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ

ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ

ಈ ಮೊತ್ತವನ್ನು ಬೆನ್ನಟ್ಟಿದ ತಂಡ ಎಚ್ಚರಿಕೆಯ ಆಡವಾಡುತ್ತಾ ಸಾಗಿತ್ತು. ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟದ ಬಳಿಕ ಸುಮಿತ್ ಪಟೇಲ್ ಅವರನ್ನು ಯುಜುವೇಂದ್ರ ಚಾಹಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ವಿಕೆಟ್‌ಗೆ ನಾಯಕ ಕೇದಾರ್ ದೇವ್‌ಧರ್ ಹಾಗೂ ವಿಷ್ಣು ಸೋಲಂಕಿ ಅರ್ಧ ಶತಕದ ಜೊತೆಯಾಟವನ್ನು ನೀಡಿದರು.

6 ಎಸೆತಕ್ಕೆ 18 ರನ್‌ಗಳ ಗುರಿ

6 ಎಸೆತಕ್ಕೆ 18 ರನ್‌ಗಳ ಗುರಿ

ಕೇದಾರ್ ದೇವ್‌ಧರ್ ಸುಮಿತ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಅಭಮನ್ಯು ರಜಪೂತ್ ಅವರನ್ನು ಸೇರಿಕೊಂಡ ಸೋಲಂಕಿ ಉತ್ತಮ ಪ್ರದರ್ಶನವನ್ನು ನೀಡಿದರು. ಆದರೆ ಅಂತಿಮ ಓವರ್‌ಗೆ 18 ರನ್ ಗಳಿಸುವ ಕಠಿಣ ಸವಾಲು ಈ ಜೋಡಿಯ ಮುಂದಿತ್ತು. ಈ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. 46 ಎಸೆತಗಳಲ್ಲಿ 71 ನ್ ಸಿಡಿಸಿದ ವಿಷ್ಣು ಸೋಲಂಕಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Story first published: Wednesday, January 27, 2021, 17:53 [IST]
Other articles published on Jan 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+