Syed Mushtaq Ali Trophy: ದೆಹಲಿ ವಿರುದ್ಧ ಕರ್ನಾಟಕಕ್ಕೆ ಸೋಲು: ಪ್ರಿಯಾಂಶ್ ಮಿಂಚು
ಭರವಸೆಯ ಆಟಗಾರ ದೇವದತ್ ಪಡೀಕ್ಕಲ್ ಹಾಗೂ ಆರ್ ಸ್ಮರಣ್ ಅವರು ಬಾರಿಸಿದ ಅರ್ಧಶತಕದ ಹೊರತಾಗಿಯೂ ಕರ್ನಾಟಕ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 45 ರನ್‌ಗಳಿಂದ ದೆಹಲಿ ವಿರುದ್ಧ ಸೋಲು ಕಂಡಿದೆ. ಈ ಗೆಲುವಿನ ಮೂಲಕ ದೆಹಲಿ ತಂಡದ ಡಿ ಗುಂಪಿನ ಪಂದ್ಯದಲ್ಲಿ 3ನೆ ಗೆಲುವನ್ನು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಆರಂಭ ಕಳಪೆಯಾಗಿತ್ತು.ಆರಂಭಿ ಯಶ್ ಧುಲ್ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರಾದ ಪ್ರಿಯಾಂಶ್ ಅರ್ಯ, ಹಾಗೂ ಆಯುಷ್ ಬದೋನಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸುಮಾರು 10 ಓವರ್ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ನೀಡಿತು. ಈ ವೇಳೆ 2 ಬೌಂಡರಿ, 6 ಸಿಕ್ಸರ್ ಬಾರಿಸಿದ್ದ ಪ್ರಿಯಾಂಶ್ ಆರ್ಯ 62 ರನ್ ಬಾರಿಸಿ ಔಟ್ ಆದರು.

ಆಯುಷ್ ಬದೋನಿ ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು 35 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಔಟ್ ಆದರು. ನಾಯಕ ನಿತೀಶ್ ರಾಣಾ 28 ಎಸೆತಗಳಲ್ಲಿ ಅಜಯ 46 ರನ್ ಬಾರಿಸಿದರೆ, ತೇಜಸ್ವಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅರ್ಧಶತಕ ಸಿಡಿಸಿದರು. ಇವರು 278ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಅಂತಿಮವಾಗಿ ದೆಹಲಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 232 ರನ್ ಕಲೆ ಹಾಕಿತು.
ದೇವದತ್, ಸ್ಮರಣ್ ಅರ್ಧಶತಕ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕದ ಆರಂಭ ಕಳಪೆಯಾಗಿತ್ತು. ಬಿಆರ್ ಶರತ್ (6), ಮಯಾಂಕ್ ಅಗರ್‌ವಾಲ್ (9), ಕರುಣ್ ನಾಯರ್ (2) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು 3 ವಿಕೆಟ್ ನಷ್ಟಕ್ಕೆ 48 ರನ್ ಬಾರಿಸಿದರು. ದೇವದತ ಪಡೀಕ್ಕಲ್ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಔಟ್ ಆದು. ನಾಲ್ಕನೇ ವಿಕೆಟ್‌ಗೆ ದೇವದತ್ ಪಡೀಕ್ಕಲ್ ಹಾಗೂ ಸ್ಮರಣ್ ಜೊತೆಗೂಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಸ್ಮರಣ್ 38 ಎಸೆತಗಳಲ್ಲಿ 72 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಕರ್ನಾಟಕ 19.3 ಓವರ್‌ಗಳಲ್ಲಿ 187 ರನ್ ಸಿಡಿಸಿ ಔಟ್ ಆಯಿತು.
ಕೇರಳಕ್ಕೆ ಭರ್ಜರಿ ಜಯ
ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಕೇರಳ ಹಾಗೂ ಮುಂಬೈ ತಂಡಗಳ ಕಾದಾಟ ನಡೆಸಿದವು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಕೇರಳ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 178 ರನ್ ಸಿಡಿಸಿದರು. ಕೇರಳ ತಂಡದ ಪರ ಸಂಜು ಸ್ಯಾಮ್ಸನ್ 28 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಮಿಂಚಿದರು. ಮುಂಬೈ ಗುರಿಯನ್ನು ಬೆನ್ನಟ್ಟಿ 19.4 ಓವರ್‌ಗಳಲ್ಲಿ 163 ರನ್ ಸೇರಿಸಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications