ತ್ವರಿತಗತಿ ಟಿ20 ಶತಕ ಸಿಡಿಸಿದ ರಿಷಬ್ ಪಂತ್!
ನವದೆಹಲಿ, ಜನವರಿ 14: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಉತ್ತರ ವಲಯ ಟಿ20 ಪಂದ್ಯದಲ್ಲಿ ದೆಹಲಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಅತ್ಯಂತ ತ್ವರಿತಗತಿಯಲ್ಲಿ ಟಿ20 ಶತಕ ಗಳಿಸಿದ ದಾಖಲೆಯನ್ನು ರಿಷಬ್ ಪಂತ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹಿಮಾಚಲಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸಿದ್ದಲ್ಲದೆ ಕೊನೆಗೆ 38 ಎಸೆತಗಳಲ್ಲಿ ಪಂತ್ ಅಜೇಯ 116ರನ್ (8 ಬೌಂಡರಿ, 12 ಸಿಕ್ಸರ್) ಶತಕದ ನೆರವಿನಿಂದ ದೆಹಲಿ ತಂಡ 11.4 ಓವರ್ ಗಳಲ್ಲಿ 144ರನ್ ಗುರಿ ಮುಟ್ಟಿ ಸುಲಭ ಜಯ ದಾಖಲಿಸಿತು.

ಭಾರತೀಯ ದಾಖಲೆ: ರೋಹಿತ್ ಶರ್ಮ ಅವರು ಶ್ರೀಲಂಕಾ ವಿರುದ್ಧ ಇಂದೋರ್ ನಲಿ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಿಷಬ್ ಪಂತ್ ಮುರಿದಿದ್ದಾರೆ. ಆದರೆ, ತ್ವರಿತಗತಿ ಶತಕ ಗಳಿಕೆ ಇನ್ನೂ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಹೆಸರಿನಲ್ಲಿದೆ.
2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಕ್ರಿಸ್ ಗೇಲ್ ಅವರು ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ನೂರು ರನ್ ಗಡಿ ದಾಟಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯ ಉತ್ತರ ವಲಯದಲ್ಲಿ ದೆಹಲಿ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದಿದ್ದು, ಕೊನೆ ಲೀಗ್ ಪಂದ್ಯವನ್ನು ಮಂಗಳವಾರದಂದು ಸರ್ವೀಸಸ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications