For Quick Alerts
ALLOW NOTIFICATIONS  
For Daily Alerts
 

ದೇವದತ್ ಪಡಿಕ್ಕಲ್ ಸ್ಫೋಟಕ ಶತಕ, ಆಂಧ್ರ ವಿರುದ್ಧ ಕರ್ನಾಟಕ ಜಯಭೇರಿ

Syed Mushtaq Ali Trophy: Karnataka beat Andhra by 5 wickets

ವಿಶಾಖಪಟ್ಟಣ, ನವೆಂಬರ್ 11: ದೇವದತ್ ಪಡಿಕ್ಕಲ್ ಸ್ಫೋಟಕ ಶತಕದ ಬೆಂಬಲದೊಂದಿಗೆ ವಿಶಾಖಪಟ್ಟಣದ ಡಾ. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ರೌಂಡ್ 3, ಗ್ರೂಪ್‌ 'ಎ', ಆಂಧ್ರ vs ಕರ್ನಾಟಕ ಪಂದ್ಯದಲ್ಲಿ, ಕರ್ನಾಟಕ 5 ವಿಕೆಟ್ ಗೆಲುವನ್ನಾಚರಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಂದ್ರ ತಂಡ, ಅಶ್ವಿನ್ ಹೆಬ್ಬಾರ್ 61, ಪ್ರಶಾಂತ್‌ ಕುಮಾರ್ 79, ರಿರಿ ಭುಯಿ 21 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 184 ರನ್ ಮಾಡಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡದಿಂದ ಕೃಷ್ಣಪ್ಪ ಗೌತಮ್ 35, ದೇವದತ್ ಪಡಿಕ್ಕಲ್ 122 (60 ಎಸೆತ) ರನ್ ಸೇರಿಸಿದರು.

ರಾಜ್ಯ ತಂಡ 18.5 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 189 ರನ್ ಮಾಡಿತು. ಆಂಧ್ರ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 1, ವಿ ಕೌಶಿಕ್ 3, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರೆ, ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಆಂಧ್ರದ ನರೇನ್ ರೆಡ್ಡಿ 1, ಚೀಪುರಪಲ್ಲಿ ಸ್ಟೀಫನ್ 2, ಕೆವಿ ಸಸಿಕಾಂತ್ 1 ವಿಕೆಟ್ ಪಡೆದರು.

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಾಯಿಂಟ್‌ ಟೇಬಲ್‌ನಲ್ಲಿ ಗ್ರೂಪ್‌ 'ಎ'ಯಲ್ಲಿರುವ ಕರ್ನಾಟಕ ಕರ್ನಾಟಕ ಸದ್ಯ 3ನೇ ಸ್ಥಾನದಲ್ಲಿದೆ. ಆಡಿರುವ 3ರಲ್ಲಿ 2 ಗೆಲುವು, 1 ಸೋಲು ಕಂಡಿರುವ ಕರ್ನಾಟಕದ ಖಾತೆಯಲ್ಲಿ 8 ಪಾಯಿಂಟ್‌ ಇದೆ. ಈ ಗ್ರೂಪ್‌ನಲ್ಲಿ ಸರ್ವೀಸಸ್ ಮತ್ತು ಗೋವಾ ಮೊದಲೆರಡು ಸ್ಥಾನಗಳಲ್ಲಿವೆ.

Story first published: Monday, November 11, 2019, 23:58 [IST]
Other articles published on Nov 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+