ಮುಷ್ತಾಕ್ ಅಲಿ: ರಾಹುಲ್-ಪಡಿಕ್ಕಲ್-ಅಭಿಮನ್ಯು ಅಬ್ಬರ, ಫೈನಲ್‌ಗೆ ಕರ್ನಾಟಕ

ಸೂರತ್, ನವೆಂಬರ್ 29: ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್, ಅಭಿಮನ್ಯು ಮಿಥುನ್ ಮಾರಕ ಬೌಲಿಂಗ್ ನೆರವಿನಿಂದ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್-1ರಲ್ಲಿ ಹರ್ಯಾಣ ವಿರುದ್ಧ ಕರ್ನಾಟಕ ತಂಡ 8 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಈ ಜಯದೊಂದಿಗೆ ಕರ್ನಾಟಕ ಸೈನಲ್‌ಗೆ ಪ್ರವೇಶಿಸಿದೆ.
ಸೂರತ್‌ನ ಲಾಲಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 29) ನಡೆದ ಪಂದ್ಯದಲ್ಲಿ ರಾಹುಲ್-ಪಡಿಕ್ಕಲ್ ಸ್ಫೋಟಕ ಅರ್ಧ ಶತಕದಾಟ ಬ್ಯಾಟಿಂಗ್ ವಿಭಾಗದಲ್ಲಿ ನೆರವಾದರೆ, ಹರ್ಯಾಣ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಅವರ ಹ್ಯಾಟ್ರಿಕ್ ಸಹಿತ 5 ವಿಕೆಟ್ ಸಾಧನೆ, ಕರ್ನಾಟಕ ತಂಡವನ್ನು ಬೌಲಿಂಗ್ ವಿಭಾಗದಲ್ಲಿ ಬೆಂಬಲಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರ್ಯಾಣ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಚೈತನ್ಯ ವಿಷ್ನೋಯ್ 55 (35 ಎಸೆತ), ಹರ್ಷಲ್ ಪಟೇಲ್ 34 (20 ಎಸೆತ), ಹಿಮಾಂಶು ರಾಣಾ 61 (34), ರಾಹುಲ್ ತೆವಾಟಿಯಾ 32 ರನ್‌ನೊಂದಿಗೆ ಹರ್ಯಾಣ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 194 ರನ್ ಮಾಡಿತು.
ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡದಿಂದ ಕೆಎಲ್ ರಾಹುಲ್ 66 (31 ಎಸೆತ), ದೇವದತ್ ಪಡಿಕ್ಕಲ್ 87 (42 ಎಸೆತ), ಮಯಾಂಕ್ ಅಗರ್ವಾಲ್ 30 (14 ಎಸೆತ), ನಾಯಕ ಮನೀಷ್ ಪಾಂಡೆ 3 ರನ್ ಸೇರಿಸಿದರು. ರಾಜ್ಯ ತಂಡ 15 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 195 ರನ್ ಮಾಡಿತು.
ಹರ್ಯಾಣ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್, ಹಿಮಾಂಶು ರಾಣಾ (19.1ನೇ ಓವರ್), ರಾಹುಲ್ ತೆವಾಟಿಯಾ (19.2), ಸುಮಿತ್ ಕುಮಾರ್ (19.3), ಅಮಿತ್ ಮಿಶ್ರಾ (19.4), ಜಯದೇವ್ ಉನಾದ್ಕತ್ (19.6) ವಿಕೆಟ್ ಉರುಳಿಸಿ ಓವರ್‌ನಲ್ಲಿ ಸತತ 4 ವಿಕೆಟ್, ಒಟ್ಟು 5 ದಾಖಲೆ ನಿರ್ಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications