ಪಡಿಕ್ಕಲ್ ಅರ್ಧಶತಕ, ಝಾರ್ಖಂಡ್ ವಿರುದ್ಧ ರೋಚಕ ಪಂದ್ಯ ಗೆದ್ದ ಕರ್ನಾಟಕ!

ಸೂರತ್, ನವೆಂಬರ್ 22: ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಕರ್ನಾಟಕ ತಂಡಕ್ಕೆ ಗೆಲುವು ತಂದಿದೆ. ಸೂರತ್‌ನಲ್ಲಿ ಶುಕ್ರವಾರ (ನವೆಂಬರ್ 22) ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ಸೂಪರ್ ಲೀಗ್, ಗ್ರೂಪ್ 'ಬಿ' ಪಂದ್ಯದಲ್ಲಿ ಝಾಖಂಡ್ ವಿರುದ್ಧ ಕರ್ನಾಟಕ ತಂಡ 13 ರನ್ ರೋಚಕ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ, ಕೆಎಲ್ ರಾಹುಲ್ 36, ದೇವದತ್ ಪಡಿಕ್ಕಲ್ 63 (30 ಎಸೆತ), ಮನೀಷ್ ಪಾಂಡೆ 16, ಕರುಣ್ ನಾಯರ್ 19, ಪವನ್ ದೇಶಪಾಂಡೆ 14, ಪ್ರವೀಣ್ ದೂಬೆ 10, ಜಗದೀಶ್ ಸುಚಿತ್ 11 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 189 ರನ್ ಬಾರಿಸಿತು.
ಗುರಿ ಬೆನ್ನತ್ತಿದ ಝಾರ್ಖಂಡ್, ಆನಂದ್ ಸಿಂಗ್ 41, ಉತ್ಕರ್ಷ್ ಸಿಂಗ್ 11, ವಿರಾಟ್ ಸಿಂಗ್ 76 (44 ಎಸೆತ), ಕುಮಾರ್ ಡಿಯೋಬ್ರಾತ್ 13, ಸುಮಿತ್ ಕುಮಾರ್ 23 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 176 ರನ್‌ಗೆ ಶರಣಾಯಿತು.
ಅಸಲಿಗೆ ಅಂತಿಮ ಓವರ್‌ನಲ್ಲಿ ಝಾರ್ಖಂಡ್ ಗೆಲ್ಲಲು 24 ರನ್‌ಗಳ ಅವಶ್ಯಕತೆಯಿತ್ತು. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ವಿರಾಟ್ ಸಿಂಗ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದರು. ಆದರೆ ಅಂತಿಮವಾಗಿ ಖಾರ್ಝಂಡ್‌ಗೆ ರನ್ ಗುರಿ ತಲುಪಲಾಗಲಿಲ್ಲ. ಪವನ್ ದೇಶಪಾಂಡೆ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications