Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕ

Syed Mushtaq Ali Trophy: Karnataka cruise to fourth win

ಕಟಕ್, ಫೆಬ್ರವರಿ 25: ಕಟಕ್‌ನ ಡ್ರೀಮ್ಸ್ ಗ್ರೌಂಡ್‌ನಲ್ಲಿ ಸೋಮವಾರ (ಫೆಬ್ರವರಿ 25) ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕರ್ನಾಟಕ vs ಮಿಜೋರಾಂ ನಡುವಿನ 4ನೇ ಸುತ್ತಿನ ಗ್ರೂಪ್ ಡಿ ಟಿ20 ಪಂದ್ಯದಲ್ಲಿ ಕರ್ನಾಟಕ ತಂಡ 137 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಕರುಣ್ ನಾಯರ್ ಮತ್ತು ರೋಶನ್ ಕದಮ್ ಸ್ಫೋಟಕ ಅರ್ಧಶತಕದಿಂದ ರಾಜ್ಯ ತಂಡ ಸುಲಭ ಗೆಲುವು ದಾಖಲಿಸಿತು (ಸಾಂದರ್ಭಿಕ ಚಿತ್ರ).

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ರೋಶನ್ 78, ಮಯಾಂಕ್ ಅಗರ್ವಾಲ್ 20, ಕರುಣ್ 71, ನಾಯಕ ಮನೀಶ್ ಪಾಂಡೆ ಅಜೇಯ 33 ರನ್ ಸೇರಿಸಿದರು. ಕರ್ನಾಟಕ 20 ಓವರ್‌ಗೆ 4 ವಿಕೆಟ್ ಕಳೆದು 242 ರನ್ ಗಳಿಸಿತು.

ಚೇಸಿಂಗ್‌ಗೆ ಇಳಿದ ಮಿಜೋರಾಂನಿಂದ ಆರಂಭಿಕ ಆಟಗಾರ, ನಾಯಕ ತರುವಾರ್ ಕೊಹ್ಲಿ 36, ಅಖಿಲ್ ರಜಪೂತ್ 41 ರನ್ ಮಾತ್ರ ಗಮನಾರ್ಹವೆನಿಸಿತು. ಇತ್ತ ಕರ್ನಾಟಕ ಮಾರಕ ಬೌಲಿಂಗ್‌ ಕೂಡ ಪ್ರದರ್ಶಿಸಿದ್ದರಿಂದ ಮಿಜೋರಾಂ 20 ಓವರ್‌ಗೆ 6 ವಿಕೆಟ್ ನಷ್ಟದೊಂದಿಗೆ 105 ರನ್ ಗಳಿಸಿ ಶರಣಾಯಿತು.

ಮಿಜೋರಾಂ ಇನ್ನಿಂಗ್ಸ್‌ನಲ್ಲಿ ರಾಜ್ಯದ ಶ್ರೇಯಸ್ ಗೋಪಾಲ್ ಕೇವಲ 8 ರನ್ನಿಗೆ 4 ವಿಕೆಟ್ ಕೆಡವಿ ಮಿಂಚಿದರು. ಈ ಗೆಲುವಿನೊಂದಿಗೆ ಕರ್ನಾಟಕ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳನ್ನು ಕಂಡಂತಾಗಿದೆ. ಗ್ರೂಪ್‌ ಡಿ ಅಂಕಪಟ್ಟಿಯಲ್ಲಿ ಕರ್ನಾಟಕ ಒಟ್ಟು 16 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

Story first published: Monday, February 25, 2019, 19:55 [IST]
Other articles published on Feb 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+