SMAT 2021: 37 ಎಸೆತಕ್ಕೆ ಶತಕ ಸಿಡಿಸಿದ ಅಜರುದ್ಧೀನ್, ಮುಂಬೈ ವಿರುದ್ಧ ಕೇರಳಕ್ಕೆ ಭರ್ಜರಿ ಗೆಲುವು

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಕೇರಳ ಹಾಗೂ ಮುಂಬೈ ವಿರುದ್ಧದ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೇರಳದ ಯುವ ಆಟಗಾರ ಮೊಹಮ್ಮದ್ ಅಜರುದ್ಧೀನ್ ಕೇವಲ 37 ಎಸೆತಗಳಲ್ಲಿ ಭರ್ಜರಿ ಶತಕವನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಮೂಲಕ ಮುಂಬೈ ತಂಡ ತನ್ನ ತವರು ಅಂಗಳ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಭಂಗವನ್ನು ಅನುಭವಿಸಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ತಂಡ 197 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಕೇರಳ ಬಹಳ ಸಲೀಸಾಗಿ ಇನ್ನೂ 4.1 ಓವರ್‌ಗಳು ಉಳಿದಿರುವಂತೆಯೇ 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವನ್ನು ದಾಖಲಿಸಿದೆ.
ಕೇರಳ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ಅಜರುದ್ಧೀನ್ ಮೊದಲ ವಿಕೆಟ್‌ಗೆ ಅನುಭವಿ ರಾಬಿನ್ ಉತ್ತಪ್ಪ ಜೊತೆಗೆ ಮೊದಲ ವಿಕೆಟ್‌ಗೆ 129 ರನ್‌ಗಳ ಜೊತೆಯಾಟವನ್ನು ನೀಡಿದರು. ಉತ್ತಮ 33 ರನ್ ಗಳಿಸಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದರು.
ಮೊಹಮ್ಮದ್ ಅಜರುದ್ಧೀನ್ ಮುಂಬೈ ವಿರುದ್ಧಧ ಭರ್ಜರಿ ಇನ್ನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ 137 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. 11 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿದ್ದಾರೆ. ಇದು ಹಿರಿಯರ ಮಟ್ಟದಲ್ಲಿ ಕೇರಳ ತಂಡ ಎಲ್ಲಾ ಮಾದರಿಯಲ್ಲಿ ಗೆದ್ದ ಮೊದಲ ಪಂದ್ಯವಾಗಿದೆ.
ಟಾಸ್ ಸೋತು ಮೊದಲಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಆದಿತ್ಯ ತಾರೆ, ಯಶಸ್ವಿ ಜೈಸ್ವಾಲ್, ಶಿವಂ ದುಬೆ ಹಾಗೂ ಸೂರ್ಯಕುಮಾರ್ ಯಾದವ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ 196 ರನ್ ಸಿಡಿಸಿ ಬೃಹತ್ ಮೊತ್ತದ ಗುರಿಯನ್ನು ನೀಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications