SMAT: 5 ವಿಕೆಟ್ ಕಿತ್ತು ಮುಂಬೈಗೆ ಆಘಾತ ನೀಡಿದ ಪುದುಚೇರಿಯ 41ರ ಹರೆಯದ ಸಾಂತ ಮೂರ್ತಿ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡ ಆಘಾತವನ್ನು ಅನುಭವಿಸಿದೆ. ಭಾನುವಾರ ಪುದುಚೇರಿ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಪುದುಚೇರಿ ಆಘಾತವನ್ನು ನೀಡಿತ್ತು. ಈ ಪಂದ್ಯದಲ್ಲಿ ಎದುರಾಳಿ ಪುದುಚೇರಿಗೆ ಆರು ವಿಕೆಟ್‌ಗಳಿಂದ ಮುಂಬೈ ತಂಡ ಶರಣಾಗಿದೆ.
ಪುದುಚೇರಿ ತಂಡದ ಈ ಗೆಲುವಿಗೆ ಪ್ರಮುಖ ಕಾರಣ ಬಲಗೈ ಮಧ್ಯಮ ವೇಗಿ ಸಾಂತಮೂರ್ತಿ. ಮುಂಬೈ ತಂಡದ ಪ್ರಮುಖ ಐದು ವಿಕೆಟ್ ಕೀಳುವ ಮೂಲಕ ಸಾಂತಮೂರ್ತಿ ದೊಡ್ಡ ಆಘಾತವನ್ನು ನೀಡಿದರು. ಈ ಅದ್ಭುತ ಪ್ರದರ್ಶನಕ್ಕೆ ಕಂಗೆಟ್ಟ ಮುಂಬೈ ಕೇವಲ 94 ರನ್ ಗಳಿಸಲಷ್ಟೇ ಶಕ್ತವಾಯಿತು.
ಈಗ 41ರ ಹರೆಯದಲ್ಲಿರುವ ಸಾಂತಮೂರ್ತಿ ಕಳೆದ ವರ್ಷವಷ್ಟೇ ತಮ್ಮ 40ನೇ ವಯಸ್ಸಿನಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಮುಂಬೈ ವಿರುದ್ಧ ಅವರು ನೀಡಿದ ಪ್ರದರ್ಶನ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯಾಗಿ ಪರಿಣಮಿಸಿದೆ.
ಟಿ20 ಕ್ರಿಕೆಟ್‌ನಲ್ಲಿ 5 ವಿಕೆಟ್‌ಗಳ ಗೊಂಚಲನ್ನು ಪಡೆದ ಹಿರಿಯ ಆಟಗಾರ ಎಂಬ ದಾಖಲೆಗೆ ಸಾಂತ ಕುಮಾರ್ ಪಾತ್ರರಾಗಿದ್ದಾರೆ. ಈ ದಾಖಲೆ ಮಾಡುವ ಸಂದರ್ಭದಲ್ಲಿ ಅವರು 41 ವರ್ಷ 129 ದಿನ. ನಾಲ್ಕು ಓವರ್‌ಗಳ ಬೌಲಿಂಗ್ ಸಂದರ್ಭದಲ್ಲಿ ಸಾಂತಮೂರ್ತಿ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿತಾದರು.
ಸಾಂತಮೂರ್ತಿ ಅವರ ಈ ಅದ್ಭುತವಾದ ಬೌಲಿಂಗ್ ಸಾಹಸದಿಂದ ಪುದುಚೇರಿ ಸುಲಭವಾದ ಗುರಿಯನ್ನು ಪಡೆಯಿತು. 95 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪುದುಚೇರಿ ಇನ್ನೂ ಒಂದು ಓವರ್ ಉಳಿದಿರುವಂತೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications