ಸೈಯ್ಯದ್ ಮುಷ್ತಾಕ್ ಅಲಿ: ಪಾಂಡೆ ಸ್ಫೋಟಕ ಶತಕಕ್ಕೆ ಶರಣಾದ ಸರ್ವೀಸಸ್!

ವಿಜಯನಗರಂ, ನವೆಂಬರ್ 12: ನಾಯಕ ಮನೀಷ್ ಪಾಂಡೆ ಸ್ಫೋಟಕ ಶತಕ, ದೇವದತ್ ಪಡಿಕ್ಕಲ್ ಅಬ್ಬರದ ಅರ್ಧ ಶತಕದ ನೆರವಿನೊಂದಿಗೆ ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಮಂಗಳವಾರ (ನವೆಂಬರ್ 12) ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ನಾಲ್ಕನೇ ಸುತ್ತಿನ ಗ್ರೂಪ್ 'ಎ' ಪಂದ್ಯದಲ್ಲಿ ಸರ್ವೀಸಸ್ ವಿರುದ್ಧ ಕರ್ನಾಟಕ ತಂಡ 80 ರನ್ ಭರ್ಜರಿ ಜಯ ಗಳಿಸಿದೆ.
ವಿಜಯನಗರಂನ ಡಾ. ಪಿವಿಜಿ ರಾಜು ಎಸಿಎ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಪಾಂಡೆ 54 ಎಸೆತಗಳಿಗೆ 129 ರನ್, ಪಡಿಕ್ಕಲ್ 43 ಎಸೆತಗಳಿಗೆ 75 ರನ್ ಸಿಡಿಸಿ ಬ್ಯಾಟಿಂಗ್ ವಿಭಾಗದಲ್ಲಿ ಬೆಂಬಲಿಸಿದರೆ, ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದು ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ, ರೋಹನ್ ಕದಮ್ 4, ದೇವದತ್ ಪಡಿಕ್ಕಲ್ 75, ಮನೀಷ್ ಪಾಂಡೆ 129, ಕೃಷ್ಣಪ್ಪ ಗೌತಮ್ 23, ಪ್ರವೀಣ್ ದೂಬೆ 9 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 250 ರನ್ ಮಾಡಿತ್ತು.
ಗುರಿ ಬೆಂಬತ್ತಿದ ಸರ್ವೀಸಸ್ ತಂಡವನ್ನು ಶ್ರೇಯಸ್ ಗೋಪಾಲ್ ಕಾಡಿದರು. ಕೇವಲ 19 ರನ್‌ಗೆ ಗೋಪಾಲ್ 5 ವಿಕೆಟ್ ಮುರಿದಿದ್ದರಿಂದ ಸರ್ವೀಸಸ್ 20 ಓವರ್‌ಗೆ 7 ವಿಕೆಟ್ ಕಳೆದು 170 ರನ್ ಪೇರಿಸಲಷ್ಟೇ ಶಕ್ತವಾಯ್ತು. ಸರ್ವೀಸಸ್ ಇನ್ನಿಂಗ್ಸ್‌ನಲ್ಲಿ ರವಿ ಚೌಹಾಣ್ 54, ಅನ್‌ಶೂಲ್ ಗುಪ್ತಾ 29, ರಜತ್ ಪಲಿವಾಲ್ 46 ರನ್ ಕೊಡುಗೆಯೇ ಹೆಚ್ಚೆನಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications