Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಥಮ ದರ್ಜೆ ಕ್ರಿಕೆಟ್‌ಗೆ ಮುಹೂರ್ತ ಫಿಕ್ಸ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಚಾಲನೆ

Syed Mushtaq Ali Trophy to kick-start 2020-21 domestic season: BCCI

2020 21ನೇ ಸಾಲಿನ ದೇಶೀಯ ಕ್ರಿಕೆಟ್ ಋತು ಕೊರೊನಾ ವೈರಸ್‌ನ ಕಾರಣದಿಂದಾಗಿ ಇನ್ನೂ ಆರಂಭವಾಗಿಲ್ಲ. ಆದರೆ ಭಾನುವಾರ ಬಿಸಿಸಿಐ ದೇಶೀಯ ಕ್ರಿಕೆಟ್ ಋತುವಿಗೆ ಮುಹೂರ್ತವನ್ನು ನಿಗದಿಪಡಿಸಿದೆ. ಈ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ.

ಬಿಸಿಸಿಐ ಭಾನುವಾರ ಪ್ರಥಮದರ್ಜೆ ಕ್ರಿಕೆಟ್‌ ಋತುವಿಗೆ ದಿನಾಂಕವನ್ನು ನಿಗದಿಪಡಿಸಿದೆ. 2021ರ ಜನವರಿ 10ರಿಂದ ಆರಂಭವಾಗಿ ಜನವರಿ 21ರ ವರೆಗೆ ಈ ಟೂರ್ನಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಆರು ವಿಭಿನ್ನ ರಾಜ್ಯಗಳಲ್ಲಿ ಈ ಟೂರ್ನಿ ನಡೆಯಲಿದ್ದು ಬಯೋ ಸೆಕ್ಯೂರ್ ಬಬಲ್‌ನಲ್ಲಿ ಸಂಪೂರ್ಣ ಟೂರ್ನಿ ನಡೆಯಲಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಕ್ರಿಕೆಟ್‌ ಮಂಡಳಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈ ಮೇಲ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.

"ನಿಮ್ಮಿಂದ ಸ್ವೀಕರಿಸಿದ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ನಿಮಗೆ ನಾನು ತಿಳಿಯಪಡಿಸುವುದೇನೆಂದರೆ ಬಿಸಿಸಿಐ 2020 21ನೇ ಸಾಲಿನ ದೇಶೀಯ ಕ್ರಿಕೆಟ್ ಋತುವನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ಮೂಲಕ ಆಯೋಜಿಸಲು ತೀರ್ಮಾನಿಸಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜೈಯ್ ಶಾ ಸಂದೇಶವನ್ನು ಪ್ರತಿ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೂ ರವಾನಿಸಿದ್ದಾರೆ.

"2021ರ ಜನವರಿ 2 ಶನಿವಾರದಂದು ತಂಡಗಳು ನಿಯೋಜಿತ ಸ್ಥಳಗಳಲ್ಲಿ ಒಗ್ಗೂಡಬೇಕು. ಜನವರಿ 10ರಂದು ಬಾನುವಾರ ಟೂರ್ನಿ ಆರಂಭವಾಗಲಿದ್ದು ಜನವರಿ 31ರಂದು ಟೂರ್ನಿ ಅಂತ್ಯವಾಗಲಿದೆ ಎಂದು ಈ ಸಂದೇಶದಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈಯ್ ಶಾ ತಿಳಸಿದ್ದಾರೆ.

ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾದ ಬಳಿಕ ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯ ಬಗೆಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿವರಿಸಿದ್ದಾರೆ.

Story first published: Monday, December 14, 2020, 11:06 [IST]
Other articles published on Dec 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+