For Quick Alerts
ALLOW NOTIFICATIONS  
For Daily Alerts
 

ಟಿ ನಟರಾಜನ್ ಬಗ್ಗೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭರವಸೆಯ ಮಾತು

T Natarajans confidence is quite special, big plus for India: Harbhajan Singh

ಟೀಮ್ ಇಂಡಿಯಾ ಸೀಮಿತ ಓವರ್‌ಗಳ ತಂಡಕ್ಕೆ ಪದಾರ್ಪಣೆಯನ್ನು ಮಾಡಿದ ಟಿ ನಟರಾಜನ್‌ ಭರ್ಜರಿ ಪ್ರದರ್ಶನವನ್ನು ನೀಡಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಂತೂ ನಟರಾಜನ್ ಎರಡು ವಿಕೆಟ್ ಕಬಳಿಸುವುದರ ಜೊತೆಗೆ ರನ್‌ಗೆ ಕೂಡ ಕಡಿವಾಣ ಹಾಕಿ ಮಿಂಚಿದ್ದಾರೆ. ಈ ಪ್ರದರ್ಶನಕ್ಕೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ನಟರಾಜನ್ ಪ್ರದರ್ಶನಕ್ಕೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಟರಾಜನ್ ಅವರಲ್ಲಿರುವ ಆತ್ಮವಿಶ್ವಾಸ ವಿಶೇಷವಾದ್ದು. ಅವರ ಈ ಆತ್ಮವಿಶ್ವಾಸ ಟೀಮ್ ಇಂಡಿಯಾಗೆ ಸರಣಿಯಲ್ಲಿ ಅತಿ ದೊಡ್ಡ ಬಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

"ನಾನು ನಟರಾಜನ್ ಅವರ ಪ್ರದರ್ಶನದಿಂದ ತುಂಬಾ ಸಂತೋಷಗೊಂಡಿದ್ದೇನೆ. ಆತ ಜೀವನದಲ್ಲಿ ನಡೆದ ಬಂದ ರೀತಿ ಹಾಗೂ ಆತ ಈಗ ನೀಡುತ್ತಿರುವ ಪ್ರದರ್ಶನದ ಬಗೆ ನಿಜಕ್ಕೂ ನಂಬಲು ಅಸಾಧ್ಯ. ಇದು ನಿಮ್ಮ ಕಠಿಣ ಪರಿಶ್ರಮ ಹಾಗೂ ನಂಬಿಕೆ ಹಾಗೂ ನಿಮ್ಮ ಮೇಲೆ ನಿಮಗೆ ಆತ್ನಮವಿಶ್ವಾಸವಿದ್ದರೆ ಎಂತಾ ಸಾಧನೆಯನ್ನಾದರೂ ಮಾಡಲು ಸಾಧ್ಯವಿದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

"ಈ ಸರಣಿಯಲ್ಲಿ ಅವರು ಭಾರತದ ಅತ್ಯುತ್ತಮ ಬೌಲರ್ ಆಗಿದ್ದಾರೆ. ಈ ಸರಣಿಯ್ಲಲಿ ತಂಡದ ಮುಖ್ಯ ಆಧಾರ ಸ್ಥಂಬಗಳಲ್ಲಿ ನಟರಾಜನ್ ಕೂಡ ಒಬ್ಬರೆನಿಸಿದ್ದಾರೆ. ತಂಡಕ್ಕೆ ಅಗತ್ಯವಾಗಿದ್ದಾಗ ವಿಕೆಟ್ ಪಡೆದು ಮುನ್ನಡೆಯನ್ನು ಒದಗಿಸುತ್ತಿದ್ದಾರೆ" ಎಂದು ಹರ್ಭಜನ್ ಸಿಂಗ್ ನಟರಾಜನ್ ಹೇಳಿದ್ದಾರೆ.

"ತನ್ನಲ್ಲಿರುವ ಸಾಮರ್ಥ್ಯವನ್ನು ನಟರಾಜನ್ ವ್ಯಕ್ತಡಿಸುತ್ತಿದ್ದಾರೆ ಈ ಮೂಲಕ ತಂಡದ ಗೆಲುವಿಗೆ ನೆರವಾಗುತ್ತಿವರಲ್ಲಿ ಆದ್ದಾರೆ. ನಾನು ಟಿವಿ ಪರದೆಯಲ್ಲಿ ನೋಡುವಾ ಆತ ಸಾಕಷ್ಟು ಆತ್ಮವಿಶ್ವಾಸದಿಂದ ಕಂಡಿದ್ದಾರೆ. ಆತನಲ್ಲಿ ಹೊಡೆತವನ್ನು ತಿನ್ನುವ ಭಯವಿರಲಿಲ್ಲ. ಆ ಒಂದು ಹಂತದಲ್ಲಿ ನಿಮ್ಮಲ್ಲಿ ಎಷ್ಟು ಆತ್ಮವಿಶ್ವಾಸವಿದೆ ಎಂಬುದು ಮುಖ್ಯವಾಗುತ್ತದೆ" ಎಂದು ಹರ್ಭಜನ್ ನಟರಾಜನ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ

Story first published: Monday, December 7, 2020, 14:23 [IST]
Other articles published on Dec 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+