
ಶಾರ್ಜಾ, ನವೆಂಬರ್ 22: ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ (ನವೆಂಬರ್ 22) ಟಿ10 ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ನಾರ್ತರ್ನ್ ವಾರಿಯರ್ಸ್ ವಿರುದ್ಧ ಬೆಂಗಾಲ್ ಟೈಗರ್ಸ್ 36 ರನ್ ಗೆಲುವನ್ನಾಚರಿಸಿದೆ. ಟೈಗರ್ಸ್ ಪರ ಇಂಗ್ಲೆಂಡ್ ಬಿರುಸಿನ ದಾಂಡಿಗ ಜೇಸನ್ ರಾಯ್ ಅರ್ಧ ಶತಕ (60 ರನ್) ಬಾರಿಸಿ ಗೆಲುವಿಗೆ ಕಾರಣರಾದರು.
ಟಾಸ್ ಗೆದ್ದ ನಾರ್ತರ್ನ್ ವಾರಿಯರ್ಸ್ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಬೆಂಗಾಲ್ ಟೈಗರ್ಸ್ ತಂಡಕ್ಕೆ ಆರಂಭಿಕ ಆಟಗಾರ ಜೇಸನ್ ಭರ್ಜರಿ ಆರಂಭ ನೀಡಿದರು. 29 ಎಸೆತಗಳನ್ನು ಎದುರಿಸಿದ ರಾಯ್ ಅಜೇಯ 60 ರನ್ ಚಚ್ಚಿದರು. ಈ ವೇಳೆ 6 ಬೌಂಡರಿ, 3 ಸಿಕ್ಸರ್ ರಾಯ್ ಬ್ಯಾಟ್‌ನಿಂದ ಸಿಡಿದವು.
ಇನ್ನು ಸುನಿಲ್ ನಾರಾಯಣ್ 15 ರನ್ ಬಾರಿಸಿ ಔಟಾದರಾದರೂ ಶೆರ್ಫೇನ್ ರುದರ್ಫೋರ್ಡ್ (47 ರನ್) ಕ್ರೀಸ್‌ಗೆ ಅಂಟಿ ನಿಂತಿದ್ದು ಟೈಗರ್ಸ್‌ಗೆ ಪ್ಲಸ್ಸಾಗಿ ಪರಿಣಮಿಸಿತು. ಬೆಂಗಾಲ್ ಟೈಗರ್ಸ್ 10 ಓವರ್‌ಗೆ 1 ವಿಕೆಟ್ ಕಳೆದು 130 ರನ್ ಕಲೆ ಹಾಕಿತು.
131 ರನ್ ಗುರಿ ಬೆನ್ನಟ್ಟಿದ ನಾರ್ತರ್ನ್ ವಾರಿಯರ್ಸ್ ಪರ ಲೆಂಡ್ಲ್ ಸಿಮ್ಮನ್ಸ್ 44 ರನ್ ಬೆಂಬಲ ಮಾತ್ರ ಗಮನಾರ್ಹವೆನಿಸಿತು. ಅದು ಬಿಟ್ಟರೆ ಡ್ವೇನ್ ಸ್ಮಿತ್ 18 ರನ್ ಸೇರಿಸಿದರು. ವಾರಿಯರ್ಸ್ ತಂಡ 10 ಓವರ್‌ನಲ್ಲಿ 7 ವಿಕೆಟ್ ಕಳೆದು 94 ರನ್ ಪೇರಿಸಿ ಶರಣಾಯಿತು.