ಟಿ10 ಲೀಗ್: ರಜಪೂತ್ಸ್ ವಿರುದ್ಧ ಮರಾಠಾ ಅರೇಬಿಯನ್ಸ್‌ಗೆ ಸುಲಭ ಜಯ

ಶಾರ್ಜಾ, ನವೆಂಬರ್ 28: ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 27) ನಡೆದ ಟಿ10 ಲೀಗ್ 15ನೇ ಪಂದ್ಯದಲ್ಲಿ ರತಪೂತ್ಸ್ ವಿರುದ್ಧ ಮರಾಠಾ ಅರೇಬಿಯನ್ಸ್ ತಂಡ 10 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಇದು ಟೂರ್ನಿಯಲ್ಲಿ ಮರಾಠಾ ಅರೇಬಿಯನ್ಸ್‌ಗೆ ಲಭಿಸುತ್ತಿರುವ ಚೊಚ್ಚಲ ಜಯ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬ್ರೆಂಡನ್ ಮೆಕಲಮ್ ನಾಯಕತ್ವದ ರಜಪೂತ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಬೆನ್ ಡಂಕ್ 15 ರನ್ ಗಳಿಸಿದ್ದೇ ರನ್ ಎನಿಸಿತು. ಹೀಗಾಗಿ 10 ಓವರ್ ನಲ್ಲಿ ರಜಪೂತ್ಸ್ 7 ವಿಕೆಟ್ ಕಳೆದು ಕೇವಲ 63 ರನ್ ಪೇರಿಸಿತು.
ರಜಪೂತ್ಸ್ ನೀಡಿದ್ದ 64 ರನ್ ಗುರಿ ಬೆನ್ನತ್ತಿದ್ದ ಡ್ವೇನ್ ಬ್ರಾವೋ ನಾಯಕತ್ವದ ಮರಾಠಾ ಅರೇಬಿಯನ್ಸ್ ಪರ ಆರಂಭಿಕ ಆಟಗಾರರಾದ ಹಝರತುಲ್ಲಾ ಜಾಝೈ 29 ರನ್ ಮತ್ತು ಅಲೆಕ್ಸ್ ಹೇಲ್ಸ್ 27 ರನ್ ಪೇರಿಸಿ ಪಂದ್ಯ ಮುಗಿಸಿದರು. ಅರೇಬಿಯನ್ಸ್ ತಂಡ ಕೇವಲ 5 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 64 ರನ್ ಪೇರಿಸಿತು.
Story first published: Wednesday, November 28, 2018, 0:44 [IST]
Other articles published on Nov 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications