ಟಿ10 ಲೀಗ್: ರೋಮನ್ ಅರ್ಧ ಶತಕ, ನಾರ್ತರ್ನ್ ವಾರಿಯರ್ಸ್ ಚಾಂಪಿಯನ್

ಶಾರ್ಜಾ, ಡಿಸೆಂಬರ್ 3: ಶಾರ್ಜಾ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಟಿ10 ಲೀಗ್ ಫೈನಲ್ ಪಂದ್ಯದಲ್ಲಿ ಪಾಖ್ತೂನ್ಸ್ ವಿರುದ್ಧ ಡ್ಯಾರೆನ್ ಸಮಿ ನಾಯಕತ್ವದ ನಾರ್ತರ್ನ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪ್ರಶಸ್ತಿ ಪಂದ್ಯದಲ್ಲಿ ವಾರಿಯರ್ಸ್, ಪಾಖ್ತೂನ್ಸ್ ತಂಡವನ್ನು 22 ರನ್ ನಿಂದ ಸೋಲಿಸಿತು.
ಟಾಸ್ ಗೆದ್ದ ಶಾಹಿದ್ ಅಫ್ರಿದಿ ಮುಂದಾಳತ್ವದ ಪಾಖ್ತೂನ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ನಾರ್ತರ್ನ್ ವಾರಿಯರ್ಸ್ ಪರ ರೋಮನ್ ಪೊವೆಲ್ ಮತ್ತು ಆ್ಯಂಡ್ರೆ ರಸೆಲ್ ಉತ್ತಮ ರನ್ ಕಲೆ ಹಾಕಿದರು. ಪೊವೆಲ್ 25 ಎಸೆತಗಳಿಗೆ 61 ರನ್ ಚಚ್ಚಿದರೆ, ರಸೆಲ್ 38 ರನ್ ಕೊಡುಗೆ ನೀಡಿದರು.
ವಾರಿಯರ್ಸ್ 10 ಓವರ್ ನಲ್ಲಿ 3 ವಿಕೆಟ್ ಕಳೆದು 140 ರನ್ ಪೇರಿಸಿ ಎದುರಾಳಿಗೆ 141 ರನ್ ಗುರಿ ನೀಡಿತು. ಪಾಖ್ತೂನ್ಸ್ ತಂಡದಿಂದ ಅಂಥ ಅಬ್ಬರದ ಬ್ಯಾಟಿಂಗ್ ಕಾಣಲಿಲ್ಲ. ಆ್ಯಂಡ್ರೆ ಫ್ಲೆಚರ್ 18 ಎಸೆತಕ್ಕೆ 37, ಶಫಿಕುಲ್ಲಾ ಶಾಫಿಕ್ 26 ರನ್ ಪೇರಿಸಿದ್ದೇ ಹೆಚ್ಚೆನಿಸಿತು.
ಪಾಖ್ತೂನ್ಸ್ ತಂಡ 10 ಓವರ್ ನಲ್ಲಿ 7 ವಿಕೆಟ್ ಕಳೆದು 118 ರನ್ ಪೇರಿಸಲಷ್ಟೇ ಶಕ್ತವಾಯಿತು. ಪಾಖ್ತೂನ್ಸ್ ಪ್ರತಿನಿಧಿಸಿದ್ದ ದಕ್ಷಿಣ ಆಫ್ರಿಕಾ ಆಟಗಾರ ಹಾರ್ಡಸ್ ವೆಲ್ಜೊಯೆನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ವಾರಿಯರ್ಸ್ ತಂಡದ ರೋಮನ್ ಪೊವೆಲ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications