Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ10 ಲೀಗ್ 2018: ಕೇರಳ ನೈಟ್ಸ್ ಸೋಲಿಸಿದ ನಾರ್ತರ್ನ್ ವಾರಿಯರ್ಸ್

T10 League 2018: Northern Warriors won by 8 wickets

ಶಾರ್ಜಾ, ನವೆಂಬರ್ 30: ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ10 ಲೀಗ್ 19ನೇ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಕೇರಳ ನೈಟ್ಸ್ ತಂಡವನ್ನು ಡ್ಯಾರೆನ್ ಸಮಿ ನಾಯಕತ್ವದ ನಾರ್ತರ್ನ್ ವಾರಿಯರ್ಸ್ ತಂಡ 8 ವಿಕೆಟ್ ನಿಂದ ಸೋಲಿಸಿದೆ.

ಕೇರಳ ನೈಟ್ಸ್ ಪರ ಪಾಲ್ ಸ್ಟಿರ್ಲಿಂಗ್ ಅವರ ಅರ್ಧ ಶತಕ (60 ರನ್) ವ್ಯರ್ಥವೆನಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೇರಳ ನೈಟ್ಸ್ ಗೆ ಸ್ಟಿರ್ಲಿಂಗ್ ಬಿಟ್ಟರೆ ಕ್ರಿಸ್ ಗೇಲ್ 14, ಇಯಾನ್ ಮಾರ್ಗನ್ 17 ರನ್ ಸೇರಿಸಿದರು. ಕೇರಳ 10 ಓವರ್ ಗೆ 2 ವಿಕೆಟ್ ಕಳೆದು 101 ರನ್ ಪೇರಿಸಿತು.

102 ರನ್ ಗುರಿ ಬೆನ್ನತ್ತಿದ ನಾರ್ತರ್ನ್ ವಾರಿಯರ್ಸ್‌ಗೆ ನಿಕೋಲಸ್ ಪೂರನ್ ರನ್ ಬಲ ತುಂಬಿದರು. ಪೂರನ್ 18 ಎಸೆತಗಳಿಗೆ 43 ರನ್ ಗಳಿಸಿದರು. ಆ್ಯಂಡ್ರೆ ರಸೆಲ್ 29 ರನ್ ನೆರವಿನೊಂದಿಗೆ ನಾರ್ತರ್ನ್ ವಾರಿಯರ್ಸ್ 7.2 ಓವರ್‌ಗೆ 2 ವಿಕೆಟ್ ಕಳೆದು 105 ರನ್ ಕಲೆ ಹಾಕಿತು.

Story first published: Friday, November 30, 2018, 16:59 [IST]
Other articles published on Nov 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+