ಟಿ10 ಲೀಗ್: ರಜಪೂತ್ಸ್ ಸುಲಭವಾಗಿ ಸೋಲಿಸಿದ ಅಫ್ರಿದಿಯ ಪಾಖ್ತೂನ್ಸ್ ಬಳಗ

ಶಾರ್ಜಾ, ನವೆಂಬರ್ 23: ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 23) ನಡೆದ ಟಿ10 ಲೀಗ್ ಟೂರ್ನಿಯ 6ನೇ ಪಂದ್ಯದಲ್ಲಿ ಪಾಕಿಸ್ತಾನ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಾಯಕತ್ವದ ಪಾಖ್ತೂನ್ಸ್ ತಂಡ ರಜಪೂತ್ಸ್ ತಂಡವನ್ನು 9 ವಿಕೆಟ್ ನಿಂದ ಸುಲಭವಾಗಿ ಸೋಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಜಪೂತ್ಸ್ ತಂಡಕ್ಕೆ ನಾಯಕ ಬ್ರೆಂಡನ್ ಮೆಕಲಮ್ ಬೆಂಬಲ ಮಾತ್ರ ಗಮನಾರ್ಹವೆನಿಸಿತು. ಮೆಕಲಮ್ 58 ರನ್ ಕಲೆ ಹಾಕಿದರು. ಇನ್ನು ರಿಲೀ ರಾಸ್ಸೌವ್ 25, ಲಾರೀ ಇವಾನ್ಸ್ 27 ರನ್ ನೊಂದಿಗೆ ರಜಪೂತ್ಸ್ 10 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 121 ರನ್ ಪೇರಿಸಿತು.
ರಜಪೂತ್ಸ್ ನೀಡಿದ 122 ರನ್ ಗುರಿ ಬೆನ್ನುಬಿದ್ದ ಪಾಖ್ತೂನ್ಸ್ ತಂಡಕ್ಕೆ ಆರಂಭಿಕ ಆಟಗಾರ ಕ್ಯಾಮೆರಾನ್ ಡೆಲ್ಪೋರ್ಟ್ 22, ಆಂಡ್ರೆ ಫ್ಲೆಚರ್ ಭರ್ಜರಿ 68 ರನ್, ಶಫಿಕುಲ್ಲಾ ಶಾಫಿಕ್ 28 ರನ್ ಸೇರಿಸಿದರು. ಪಾಖ್ತೂನ್ಸ್ 9.4 ಓವರ್ ನಲ್ಲಿ 1 ವಿಕೆಟ್ ಕಳೆದು 126 ರನ್ ನೊಂದಿಗೆ ಗೆಲುವನ್ನಾಚರಿಸಿತು.
Story first published: Friday, November 23, 2018, 22:11 [IST]
Other articles published on Nov 23, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications