Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಸ್‌ ಗೇಲ್ ಬ್ಯಾಟಿಂಗ್ ಆರ್ಭಟಕ್ಕೆ ಶರಣಾದ ಮರಾಠಾ ಅರೇಬಿಯನ್ಸ್!

T10 League 2021: Chris Gayle smashes 12-ball half-century

ಅಬುಧಾಬಿ: ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ಅಬ್ಬರ ಮತ್ತೆ ಕಾಣಸಿಕ್ಕಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್‌ ಗೇಲ್ ಅತೀ ವೇಗದ ಅರ್ಧಶತಕ ಚಚ್ಚಿದ್ದಾರೆ. ಟೀಮ್ ಅಬುಧಾಬಿ ತಂಡದ ಗೇಲ್ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಮರಾಠಾ ಅರೇಬಿಯನ್ಸ್ ಶರಣಾಗಿದೆ.

ಬುಧವಾರ (ಫೆಬ್ರವರಿ 3) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಟಿ10 ಲೀಗ್ 20ನೇ ಸೂಪರ್‌ಲೀಗ್ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 22 ಎಸೆತಗಳಲ್ಲಿ ಅಜೇಯ 84 ರನ್ ಚಚ್ಚಿದ್ದಾರೆ. ಅಲ್ಲದೆ ಕೇವಲ 12 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ತನ್ನ ಹೆಸರಿನಲ್ಲೇ ಇರುವ ಅತೀ ವೇಗ ಅರ್ಧ ಶತಕ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮರಾಠಾ ಅರೇಬಿಯನ್ಸ್, ಅಲಿಶನ್ ಶರಾಫು 33, ಮುಕ್ತರ್ ಅಲಿ 14, ಲಾರಿ ಇವಾನ್ಸ್ 8, ಶೋಯೆಬ್ ಮಲಿಕ್ ಅಜೇಯ 15 ರನ್‌ನೊಂದಿಗೆ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದು 97 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಅಬುಧಾಬಿ ತಂಡ, ಕ್ರಿಸ್ ಗೇಲ್ ಅಜೇಯ 84, ಪೌಲ್ ಸ್ಟಿರ್ಲಿಂಗ್ 11, ಜೋ ಕ್ಲಾರ್ಕ್ 5 ರನ್‌ನೊಂದಿಗೆ 5.3 ಓವರ್‌ಗೆ 1 ವಿಕೆಟ್ ಕಳೆದು ಭರ್ತಿ 100 ರನ್ ಗಳಿಸಿತು.

ಮರಾಠಾ ಅರೇಬಿಯನ್ಸ್ ಇನ್ನಿಂಗ್ಸ್‌ನಲ್ಲಿ ಜೇಮೀ ಓವರ್ಟನ್ 1, ನವೀನ್ ಉಲ್ ಹಕ್ 1, ಓಬೆಡ್ ಮೆಕಾಯ್ 2 ವಿಕೆಟ್ ಪಡೆದರೆ, ಅಬುಧಾಬಿ ಇನ್ನಿಂಗ್ಸ್‌ನಲ್ಲಿ ಮೊಸಾದ್ದೇಕ್ ಹೊಸೇನ್ 1 ವಿಕೆಟ್‌ ಉರುಳಿಸಿದರು. ಅಬ್ಬರದಾಟವಾಡಿದ ಕ್ರಿಸ್ ಗೇಲ್ ಪಂದ್ಯಶ್ರೇಷ್ಠರೆನಿಸಿದರು.

Story first published: Thursday, February 4, 2021, 9:03 [IST]
Other articles published on Feb 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+