ಮೈದಾನದಲ್ಲಿ ಅಪಘಾತ: ಆಟಗಾರರು ಪರಸ್ಪರ ಡಿಕ್ಕಿ, ಕ್ರಿಕೆಟರ್ಸ್ ಶಾಕ್
ಲಂಡನ್, ಜೂ.15: ಇಲ್ಲಿನ ಕ್ಯಾಸೆಲ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದಿದ್ದ ನ್ಯಾಟ್ ವೆಸ್ಟ್ ಟಿ20 ಕ್ರಿಕೆಟ್ ಪಂದ್ಯದ ವೇಳೆ ಇಬ್ಬರು ಆಟಗಾರರು ಫೀಲ್ಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಸರೆ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಮೋಯಿಸೆಸ್ ಹೆನ್ರಿಕ್ಯೂಸ್ ಹಾಗೂ ಇಂಗ್ಲೆಂಡಿನ ರೊರಿ ಬರ್ನ್ಸ್ ಇಬ್ಬರ ಭೀಕರವಾಗಿ ಡಿಕ್ಕಿ ಹೊಡೆದುಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಪಂದ್ಯವೊಂದರಲ್ಲಿ ಸಸೆಕ್ಸ್ ವಿರುದ್ಧ ಆಡುವಾಗ ಸರೆಯ ಈ ಇಬ್ಬರು ಆಟಗಾರರು ಕ್ಯಾಚ್ ಹಿಡಿಯಲು ಹೋದಾಗ ಈ ಅಪಘಾತ ಸಂಭವಿಸಿದೆ.
ತಕ್ಷಣವೇ ಮೈದಾನಕ್ಕೆ ಆಂಬ್ಯುಲೆನ್ಸ್ ಕರೆಸಿಕೊಳ್ಳಲಾಗಿದ್ದು, ಇಬ್ಬರು ಆಟಗಾರರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಹೆನ್ರಿ ದವಡೆಗೆ ತೀವ್ರ ಪೆಟ್ಟಾಗಿದ್ದು ಎಕ್ಸ್ ರೇ ತೆಗೆಸಲಾಗಿದೆ ಎಂದು ಸರೆ ಕೌಂಟಿ ಕ್ಲಬ್ ಟ್ವೀಟ್ ಮಾಡಿದೆ. ಈ ಘಟನೆ ಬಗ್ಗೆ ಪಂದ್ಯದಲ್ಲಿ ಆಡುತ್ತಿದ್ದ ಮಹೇಲ ಜಯವರ್ದನೆ, ಕೆವಿನ್ ಪೀಟರ್ಸನ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ನಲ್ಲೂ ಆಡಿದ್ದ ಹೆನ್ರಿ
ಐಪಿಎಲ್ 8ರಲ್ಲಿ ಸನ್ ರೈಸರ್ಸ್ ಪರ ಆಡಿರುವ ಹೆನ್ಸಿ ಅವರು ಈ ಟಿ20 ಪಂದ್ಯದಲ್ಲಿ ಸರೆ ಪರ 4 ಓವರ್ ಗಳಲ್ಲಿ 3/23 ಪಡೆದುಕೊಂಡಿದ್ದರು. ಆಸ್ಟ್ರೇಲಿಯಾ ಪರ 3 ಟೆಸ್ಟ್, 6 ಏಕದಿನ ಪಂದ್ಯ ಹಾಗೂ 4 ಟಿ20 ಆಡಿದ್ದಾರೆ.

ಕೆವಿನ್ ಹಾಗೂ ಮಹೇಲ ಕೂಡಾ ಅಡುತ್ತಿದ್ದರು
ಶ್ರೀಲಂಕಾದ ಮಾಜಿ ನಾಯಕ ಇದೇ ಪಂದ್ಯದಲ್ಲಿ ಸಸೆಕ್ಸ್ ಪರ 43 ರನ್ ಗಳಿಸಿದ್ದರು. ಕೆವಿನ್ ಪೀಟರ್ಸನ್ ಅವರು ಸರೆ ಪರ ಅಡುತ್ತಿದ್ದರು. ಸಸೆಕ್ಸ್ ತಂಡ 18.4 ಓವರ್ ಗಳಲ್ಲಿ 141/7 ಸ್ಕೋರ್ ಮಾಡಿದ್ದಾಗ ಈ ಘಟನೆ ಸಂಭವಿಸಿತು.
ಮೈದಾನಕ್ಕೆ ತಕ್ಷಣವೇ ಬಂದ ಆಂಬ್ಯುಲೆನ್ಸ್
ಮೈದಾನಕ್ಕೆ ತಕ್ಷಣವೇ ಮೂರು ಆಂಬ್ಯುಲೆನ್ಸ್ ಬಂದಿದ್ದರಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
ಘಟನೆ ನಂತರ ಪಂದ್ಯ ನಿಲ್ಲಿಸಲಾಯಿತು
ಘಟನೆ ನಂತರ ಪಂದ್ಯ ನಿಲ್ಲಿಸಲಾಯಿತು, ಇತರೆ ಆಟಗಾರರು ನೆರವಿಗೆ ಧಾವಿಸಿದರು.
ಆಟಗಾರರ ದೇಹ ಪರಿಸ್ಥಿತಿ ಬಗ್ಗೆ ವಿವರ
ಆಟಗಾರರ ದೇಹ ಪರಿಸ್ಥಿತಿ ಬಗ್ಗೆ ವಿವರ ನೀಡುತ್ತಿರುವ ಸರೆ ಕ್ಲಬ್
ಆಟಗಾರರ ಬಗ್ಗೆ ಕುಮಾರ್ ಕಳವಳ
ಆಟಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications