T20 Blast 2023 Final: ಮಿಂಚಿದ ಕಿವೀಸ್ ಜೋಡಿ; ಎಸ್ಸೆಕ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆದ ಸೋಮರ್‌ಸೆಟ್
ಶನಿವಾರ, ಜುಲೈ 16ರಂದು ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೀಷ್ ಕ್ರಿಕೆಟ್‌ನ 2023ರ ಟಿ20 ಬ್ಲಾಸ್ಟ್ ಫೈನಲ್ ಪಂದ್ಯದಲ್ಲಿ ಸೋಮರ್‌ಸೆಟ್ ತಂಡವು ಎಸ್ಸೆಕ್ಸ್ ತಂಡವನ್ನು 14 ರನ್‌ಗಳಿಂದ ಸೋಲಿಸಿ ನೂತನ ಚಾಂಪಿಯನ್ ಎನಿಸಿಕೊಂಡಿತು.
ಈ ವೇಳೆ ನ್ಯೂಜಿಲೆಂಡ್‌ನ ಬೌಲಿಂಗ್ ಜೋಡಿಯಾದ ಮ್ಯಾಟ್ ಹೆನ್ರಿ ಮತ್ತು ಇಶ್ ಸೋಧಿ ತಮ್ಮ ನಡುವೆ ಏಳು ವಿಕೆಟ್‌ಗಳನ್ನು ಹಂಚಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಸೋಮರ್‌ಸೆಟ್ ತಂಡ ನಿಗದಿತ 20 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಇದು ಸಣ್ಣ ಮೊತ್ತವೇ ಆಗಿತ್ತು. ಆದರೆ, 146 ರನ್‌ಗಳ ಗುರಿ ಬೆನ್ನಟ್ಟಿದ ಎಸ್ಸೆಕ್ಸ್ ತಂಡ 18.3 ಓವರ್‌ಗಳಲ್ಲಿ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 14 ರನ್‌ಗಳಿಂದ ಸೋಲು ಅನುಭವಿಸಿತು.
ಸೋಮರ್‌ಸೆಟ್ ತಂಡದ ವೇಗಿ ಮ್ಯಾಟ್ ಹೆನ್ರಿ 3.3 ಓವರ್‌ಗಳಲ್ಲಿ 24 ರನ್ ನೀಡಿ 4 ಪಡೆದು ಮಿಂಚಿದರೆ, ಲೆಗ್ ಸ್ಪಿನ್ನರ್ ಇಶ್ ಸೋಧಿ ತಮ್ಮ 4 ಓವರ್‌ಗಳಲ್ಲಿ 22 ರನ್ ನೀಡಿ 3 ಕಬಳಿಸಿದರು. ಎಸ್ಸೆಕ್ಸ್ 131 ರನ್ ಗಳಿಸಿ, ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಸರ್ವಪತನ ಕಂಡಿತು.
ಸೋಮರ್‌ಸೆಟ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಟಾಮ್ ಬ್ಯಾಂಟನ್ 20 ರನ್, ಕೊಹ್ಲರ್-ಕ್ಯಾಡ್ಮೋರ್ 19 ರನ್, ಸೀನ್ ಡಿಕ್ಸನ್ 53 ರನ್‌ಗಳ ನೆರವಿನಿಂದ ಸೋಮರ್‌ಸೆಟ್ ತಂಡ 140ರ ಗಡಿ ದಾಟಿತ್ತು.
146 ರನ್‌ಗಳ ಗುರಿಯನ್ನು ಎಸ್ಸೆಕ್ಸ್‌ನ ಆರಂಭಿಕರಾದ ಆಡಮ್ ರೋಸಿಂಗ್‌ಟನ್ ಮತ್ತು ಡ್ಯಾನ್ ಲಾರೆನ್ಸ್ ವೇಗದ ಆರಂಭ ಒದಗಿಸಿದರು. ಮ್ಯಾಟ್ ಹೆನ್ರಿ ಅವರು ಆರಂಭಿಕರಿಬ್ಬರು ಮತ್ತು ಮೈಕೆಲ್ ಪೆಪ್ಪರ್‌ರನ್ನು ಔಟ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಆಘಾತ ನೀಡಿದರು.
ನಂತರ ಮ್ಯಾಟ್ ಹೆನ್ರಿ ಅವರಿಗೆ ಪಾಲ್ ವಾಲ್ಟರ್ ವಿಕೆಟ್ ಒಪ್ಪಿಸುವ ಮುನ್ನ ಎಸ್ಸೆಕ್ಸ್ ತಂಡ 5 ವಿಕೆಟ್‌ಗೆ 55 ರನ್ ಗಳಿಸಿ ಹೆಣಗಾಡುತ್ತಿತ್ತು. ನಂತರ 8 ರನ್‌ಗಳಿಗೆ 6 ವಿಕೆಟ್ ಆಯಿತು.
ಕೊನೆಯಲ್ಲಿ ಡೇನಿಯಲ್ ಸ್ಯಾಮ್ಸ್ 26 ಎಸೆತಗಳಲ್ಲಿ 45 ರನ್ ಬಾರಿಸುವ ಮೂಲಕ ಎಸ್ಸೆಕ್ಸ್ ತಂಡದ ಗೆಲುವಿನ ಭರವಸೆಯನ್ನು ಹೆಚ್ಚಿಸಿದ್ದರು. ಆದರೆ, ತಂಡವನ್ನು ಗೆಲ್ಲಿಸಲು ಅವರಿಗೆ ಸರಿಯಾದ ಸಹಕಾರ ದೊರೆಯಲಿಲ್ಲ.
ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಡೇನಿಯಲ್ ಸ್ಯಾಮ್ಸ್ ಥರ್ಡ್ ಮ್ಯಾನ್ ಕಡೆಗೆ ಚೆಂಡು ಕಳಿಸಿದರು. ಅಲ್ಲಿ ಉತ್ತಮ ಡೈವಿಂಗ್ ಮೂಲಕ ಕೊಹ್ಲರ್-ಕ್ಯಾಡ್ಮೋರ್ ಉತ್ತಮ ಕ್ಯಾಚ್ ಪಡೆದರು. ಅಂತಿಮವಾಗಿ ಸೋಮರ್‌ಸೆಟ್ ತಂಡ 18 ವರ್ಷಗಳಲ್ಲಿ ತಮ್ಮ ಮೊದಲ ಟಿ20 ಬ್ಲಾಸ್ಟ್ ಪ್ರಶಸ್ತಿಯನ್ನು ಗೆದ್ದರು.
"ಇದು ತುಂಬಾ ಚೆನ್ನಾಗಿದೆ ಎಂದು ಭಾವಿಸುತ್ತೇನೆ. ನಾನು ಅನೇಕ ಬಾರಿ ಫೈನಲ್ಸ್‌ಗೆ ಹೋಗಿದ್ದೇನೆ. ಆದರೆ ಇಂದಿನ ರಾತ್ರಿ ಲೈನ್‌ನಿಂದ ಹೊರಬರಲು ಇದು ವಿಶೇಷ ಭಾವನೆಯಾಗಿದೆ," ಎಂದು ಸೋಮರ್‌ಸೆಟ್ ತಂಡದ ನಾಯಕ ಲೂಯಿಸ್ ಗ್ರೆಗೊರಿ ತಿಳಿಸಿದರು.
ಎಸೆಕ್ಸ್ ನಾಯಕ ಸೈಮನ್ ಹಾರ್ಮರ್ ಮಾತನಾಡಿ, "ದಿನದ ಕೊನೆಯಲ್ಲಿ ನಾವು ಔಟ್‌ಪ್ಲೇ ಆಗಿದ್ದೆವು. ಸೋಮರ್‌ಸೆಟ್ ತಂಡದ ಬೌಲರ್‌ಗಳು ಅಸಾಧಾರಣವಾಗಿ ಬೌಲ್ ಮಾಡಿದರು. ದುರದೃಷ್ಟವಶಾತ್ ಇಂದು ರಾತ್ರಿ ನಾವು ಸೋತೆವು,"ಎಂದು ಹೇಳಿದರು.
3.3 ಓವರ್‌ಗಳಲ್ಲಿ 24 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದ ಮ್ಯಾಟ್ ಹೆನ್ರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications