ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಲೀಗ್ ನಡೆಯುತ್ತಿದ್ದು ಕುತೂಹಲಕಾರಿ ಸೆಣೆಸಾಟಗಳು ಅಭಿಮಾನಿಗಳನ್ನು ಮನರಂಜಿಸುತ್ತಿದೆ. ಈ ಟೂರ್ನಿಯಲ್ಲಿ ಶನಿವಾರ ನಡೆದ ನಾಟಿಂಗ್‌ಹ್ಯಾಮ್‌ಶೈರ್ ಹಾಗೂ ವಾರ್ವಿರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿಯೇ ತಂಡದ ಆಟಗಾರ ಶಾಹೀನ್ ಶಾ ಅಫ್ರಿದಿ ಅಮೋಘ ಬೌಲಿಂಗ್ ದಾಳಿ ನಡೆಸಿದ್ದಾರೆ. ಈ ಆರಂಭಿಕ ಓವರ್‌ನಲ್ಲಿಯೇ ಶಾಹೀನ್ ಅಫ್ರಿದಿ ನಾಲ್ವರು ಆಟಗಾರನ್ನು ಔಟ್ ಮಾಡಿ ದಾಖಲೆ ಬರೆದಿದ್ದಾರೆ.
ಇನ್ನಿಂಗ್ಸ್‌ನ ಮೊದಲ ಲೀಗಲ್ ಎಸೆತದಲ್ಲಿ ಶಾಹಿನ್ ಅಫ್ರಿದಿ ಅಲೆಕ್ಸ್ ಡೆವೈಸ್ ಅವರನ್ನು ಎಲ್‌ಬಿಡ್ಲ್ಯು ಬಲೆಗೆ ಬೀಳಿಸಿದರೆ ಎರಡನೇ ಎಸೆತದಲ್ಲಿ ಕ್ರಿಸ್ ಬೆಂಜಮಿನ್ ಬೌಲ್ಡ್ ಆಗಿ ವಿಕೆಟ್ ಕಳೆದುಕೊಂಡರು. ನಂತರ ಅದೇ ಓವರ್‌ನ ಐದನೇ ಎಸೆತದಲ್ಲಿ ಡ್ಯಾನ್ ಮೌಸ್ಲಿ ಒಲಿ ಸ್ಟೋನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ ಕೊನೆಯ ಎಸೆತದಲ್ಲಿ ಎಡ ಬರ್ನಾರ್ಡ್ ಬೌಲ್ಡ್ ಆಗಿದ್ದಾರೆ. ಈ ಮೂಲಕ ಟಿ20 ಬ್ಲಾಸ್ಟ್ ಇತಿಹಾಸದಲ್ಲಿ ಶಾಹೀನ್ ಶಾ ಅಫ್ರಿದಿ ಹೊಸ ದಾಖಲೆ ಬರೆದಿದ್ದಾರೆ.

ಇನ್ನು ಶಾಹೀನ್ ಶಾ ಅಪ್ರಿದಿ ಅವರ ಈ ದಾಖಲೆಯ ಬೌಲಿಂಗ್‌ನ ಹೊರತಾಗಿಯೂ ಈ ಪಂದ್ಯದಲ್ಲಿ ನಾಟಿಂಗ್‌ಹ್ಯಾಮ್ ಶೈರ್ ತಂಡ ವಾರ್ವಿಕ್‌ಶೈರ್ ವಿರುದ್ಧ 2 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ವಾರ್ವಿಕ್‌ಶೈರ್‌ನ ಆರಂಭಿಕ ಆಟಗಾರ ರಾಬರ್ಡ್ ಯಾಟ್ಸ್ 65 ರನ್‌ಗಳಿಸಿದ್ದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನಾಟಿಂಗ್‌ಹ್ಯಾಮ್ ಶೈರ್ ತಂಡ ನಿಗದಿತ 20 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 168 ರನ್‌ಗಳನ್ನು ಗಳಿಸಿತ್ತು. ತಂಡದ ನಾಯಕ ಟಾಮ್ ಮೂರ್ಸ್ 73 ರನ್‌ಗಳನ್ನು ಬಾರಿಸಿ ಮಿಂಚಿದ್ದರು. ಉಳಿದಂತೆ ನಾಟಿಂಗ್‌ಹ್ಯಾಮ್ ಶೈರ್ ಪರವಾಗಿ ಉತ್ತಮ ಪ್ರದರ್ಶನ ಬಾರದ ಕಾರಣ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಶಕ್ತವಾಯಿತು.
ನಾಟಿಂಗ್‌ಹ್ಯಾಮ್ ಶೈರ್ ಪ್ಲೇಯಿಂಗ್ XI: ಜೋ ಕ್ಲಾರ್ಕ್, ಅಲೆಕ್ಸ್ ಹೇಲ್ಸ್, ಲಿಂಡನ್ ಜೇಮ್ಸ್, ಮ್ಯಾಥ್ಯೂ ಮಾಂಟ್ಗೊಮೆರಿ, ಟಾಮ್ ಮೂರ್ಸ್ (ವಿಕೆಟ್ ಕೀಪರ್), ಇಮಾದ್ ವಾಸಿಮ್, ಸ್ಟೀವನ್ ಮುಲ್ಲಾನಿ (ನಾಯಕ), ಶಾಹೀನ್ ಅಫ್ರಿದಿ, ಮ್ಯಾಥ್ಯೂ ಕಾರ್ಟರ್, ಓಲಿ ಸ್ಟೋನ್, ಜೇಕ್ ಬಾಲ್
ಬೆಂಚ್: ಹಸೀಬ್ ಹಮೀದ್, ಕ್ಯಾಲ್ವಿನ್ ಹ್ಯಾರಿಸನ್, ಕಾಲಿನ್ ಮುನ್ರೋ, ಸಮಿತ್ ಪಟೇಲ್, ಕಾನರ್ ಮೆಕೆರ್, ಜ್ಯಾಕ್ ಬ್ರೂಕ್ಸ್
ವಾರ್ವಿಕ್ ಶೈರ್ ಪ್ಲೇಯಿಂಗ್ XI: ಅಲೆಕ್ಸ್ ಡೇವಿಸ್ (ನಾಯಕ & ವಿಕೆಟ್ ಕೀಪರ್), ರಾಬರ್ಟ್ ಯೇಟ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಡಾನ್ ಮೌಸ್ಲಿ, ಕ್ರಿಸ್ ಬೆಂಜಮಿನ್, ಜಾಕೋಬ್ ಬೆಥೆಲ್, ಎಡ್ ಬರ್ನಾರ್ಡ್, ಹಸನ್ ಅಲಿ, ಹೆನ್ರಿ ಬ್ರೂಕ್ಸ್, ಜೇಕ್ ಲಿಂಟೊಟ್, ಆಲಿವರ್ ಹ್ಯಾನನ್-ಡಾಲ್ಬಿ
ಬೆಂಚ್: ಕ್ರಿಸ್ ವೋಕ್ಸ್, ಡ್ಯಾನಿ ಬ್ರಿಗ್ಸ್, ಸ್ಯಾಮ್ ಹೈನ್, ಕ್ರೇಗ್ ಮೈಲ್ಸ್