ಕೊನೆಗೂ ತಾಯ್ನಾಡಿಗೆ ವಿಮಾನ ಹತ್ತಿದ ಚಾಂಪಿಯನ್ ಭಾರತ; ವಿಕ್ಟರಿ ಪರೇಡ್ ಎಲ್ಲಿ, ಯಾವಾಗ?
ಜುಲೈ 3 ಬುಧವಾರ, ಐಸಿಸಿ ಪುರುಷರ ಟು20 ವಿಶ್ವಕಪ್ ಗೆದ್ದ ಭಾರತ ತಂಡವು ತವರಿಗೆ ಮರಳಲು ಸಜ್ಜಾಗಿದೆ. ಬೆರಿಲ್ ಚಂಡಮಾರುತದಿಂದಾಗಿ ಮೂರು ದಿನಗಳ ಕಾಲ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಆಟಗಾರರು ಅಂತಿಮವಾಗಿ ದೆಹಲಿಗೆ ಆಗಮಿಸಲಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರ ನವದೆಹಲಿ ವಿಮಾನ ನಿಲ್ದಾಣ ತಲುಪಲಿದೆ. ಚಾಂಪಿಯನ್ ಭಾರತ ತಂಡವು ಬುಧವಾರ ಬೆಳಿಗ್ಗೆ 6 ಗಂಟೆಗೆ ಬಾರ್ಬಡೋಸ್‌ನಿಂದ ತನ್ನ ಸಹಾಯಕ ಸಿಬ್ಬಂದಿ, ಹಲವಾರು ಬಿಸಿಸಿಐ ಅಧಿಕಾರಿಗಳು, ಆಟಗಾರರ ಕುಟುಂಬಗಳು ಮತ್ತು 22 ಭಾರತೀಯ ಪತ್ರಕರ್ತರೊಂದಿಗೆ ಹೊರಟಿದೆ.

ರೋಹಿತ್ ಶರ್ಮಾ, ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಅವರು ಟಿ 20 ವಿಶ್ವಕಪ್ ಟ್ರೋಫಿಯನ್ನು ಹಿಡಿದಿರುವ ಫೋಟೋದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಾಯ್ನಾಡಿಗೆ ಮರಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಟೀಮ್ ಇಂಡಿಯಾ ಆಟಗಾರರನ್ನು ಸ್ವಾಗತಿಗಳು ಇಡೀ ದೇಶವೇ ಕಾದು ಕುಳಿತಿದೆ.
ವಿಕ್ಟರಿ ಪರೇಡ್ ಎಲ್ಲಿ, ಯಾವಾಗ?
ಗುರುವಾರ ನವದೆಹಲಿ ತಲುಪಲಿರುವ ಭಾರತ ತಂಡವು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಪ್ರಧಾನಿಯವರನ್ನು ಭೇಟಿ ಮಾಡಿದ ತಕ್ಷಣ ಟೀಮ್ ಇಂಡಿಯಾ ಮುಂಬೈಗೆ ತೆರಳಲಿದೆ.
ಮುಂಬೈನಲ್ಲಿ, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗಲಿದೆ. ಇದಾದ ವಿಕ್ಟರಿ ಪರೇಡ್ ನಡೆಸಲು ಬಿಸಿಸಿಐ ಓಪನ್-ಟಾಪ್ ಬಸ್ ವ್ಯವಸ್ಥೆ ಮಾಡಿದೆ. ವಿಕ್ಟರಿ ಪರೇಡ್ ಗುರುವಾರ ಸಂಜೆ 4 ಗಂಟೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಭಾನುವಾರ ಒಂದು ದಿನ ಬಾರ್ಬಡೋಸ್‌ನಲ್ಲಿ ವಾಸ್ತವ್ಯ ಹೂಡಿದ್ದ ಭಾರತ ತಂಡವು ಅಲ್ಲಿಂದ ಸೋಮವಾರ ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ (ರಾತ್ರಿ 8:30 IST) ನಿರ್ಗಮಿಸಲು ರೆಡಿಯಾಗಿತ್ತು. ಆದರೆ ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡ ತವರಿಗೆ ಮರಳುವುದು ವಿಳಂಬವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications