For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಅಧಿಕ ರನ್‌ಗಳಿಸಿದ ಪಟ್ಟಿಯಲ್ಲಿ ಭಾರತ ದಾಖಲೆ

T20 Cricket Record: Teams with most 200-plus score in a T20I innings; Team India top the charts

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲನ್ನು ಸ್ವೀಕರಿಸಿತ್ತು. ಆದರೆ ಈ ಸವಾಲಿಗೆ ಅದ್ಭುತವಾಗಿ ಪ್ರತ್ಯುತ್ತರ ನೀಡಿದ ಭಾರತ 225 ರನ್‌ಗಳ ಗುರಿಯನ್ನು ಮುಂದಿಟ್ಟಿತು.

ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತೊಂದು ಬಾರಿ 200ಕ್ಕೂ ಅಧಿಕ ರನ್‌ಗಳನ್ನು ಗಳಿಸಿದೆ. 200ಕ್ಕೂ ಅಧಿಕ ರನ್‌ಗಳಿಸಿದ ತಂಡಗಳ ಪಟ್ಟಿಯಲ್ಲಿ ಈಗಾಗಲೇ ಮೊದಲ ಸ್ಥಾನದಲ್ಲಿರವ ಟೀಮ್ ಇಂಡಿಯಾ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿದೆ.

ಮಾರ್ಚ್ 20, 2021ರ ವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 124 ಸಂದರ್ಭಗಳಲ್ಲಿ 200ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ದಾಖಲೆಯಿದೆ. ಅತಿ ಹೆಚ್ಚು ಬಾರಿ ತಂಡಗಳು 200+ ರನ್‌ಗಳಿಸಿದ ತಂಡಗಳ ಪಟ್ಟಿ ಇಲ್ಲಿದೆ.

ಟೀಮ್ ಇಂಡಿಯಾ-18

ಟೀಮ್ ಇಂಡಿಯಾ-18

ಈಗಾಗಲೇ ಹೇಳಿದಂತೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಅಧಿಕ ರನ್‌ಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 18 ಸಂದರ್ಭಗಳಲ್ಲಿ ಭಾರತ 200ಕ್ಕೂ ಅಧಿಕ ರನ್‌ಗಳಿಸಿದೆ. 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ 200 ರನ್‌ಗಳಿಸಿದ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಭಾರತದ ಪರವಾಗಿ ಯುವರಾಜ್ ಸಿಂಗ್ ಓವರ್‌ನ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ ದಾಖಲೆ ಬರೆದಿದ್ದರು. ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 260/5 ರನ್‌ಗಳಿಸಿರುವುದು ಭಾರತ ಗಳಿಸಿದ ಬೃಹತ್ ಮೊತ್ತವಾಗಿದೆ.

ಆಸ್ಟ್ರೇಲಿಯಾ-14

ಆಸ್ಟ್ರೇಲಿಯಾ-14

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದೆ. 14 ಸಂದರ್ಭಗಳಲ್ಲಿ ಕಾಂಗರೂ ತಂಡ 200ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಕಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ಈ ಮೈಲಿಗಲ್ಲಿ ಸ್ಥಾಪಿಸಿದ ತಂಡವೆನಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಪ್ರಪ್ರಥಮ ಪಂದ್ಯದಲ್ಲಿಯೇ ಆಸಿಸ್ ಈ ಸಾಧನೆ ಮಾಡಿತ್ತು. 2005 ಫೆಬ್ರವರಿ 17 ರಂದು ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 214/5 ರನ್‌ಗಳಿಸಿತ್ತು. ನ್ಯೂಜಿಲೆಂಡ್ ತಂಡ ಈ ಪಂದ್ಯವನ್ನು 44 ರನ್‌ಗಳಿಂದ ಸೋತಿತ್ತು.

ದಕ್ಷಿಣ ಆಫ್ರಿಕಾ-13

ದಕ್ಷಿಣ ಆಫ್ರಿಕಾ-13

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಇನ್ನೂರಕ್ಕೂ ಅಧಿಕ ರನ್‌ಗಳಿಸಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. 13 ಬಾರಿ ಹರಿಣಗಳು ಈ ಸಾಧನೆಯನ್ನು ಮಾಡಿದ್ದಾರೆ. 2006 ಫಬ್ರವರಿ 24ರಂದು ಆಸ್ಟ್ರೇಲಿಯಾ ತಂಡದ ವಿರುದ್ಧ ಜೋಹನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 201/4 ರನ್‌ಗಳಿಸಿ ಈ ಮೈಲಿಗಲ್ಲನ್ನು ಮೊಟ್ಟಮೊದಲ ಬಾರಿಗೆ ದಾಟಿತ್ತು. ಗ್ರೇಮ್ ಸ್ಮಿತ್ ನಾಯಕತ್ವದಲ್ಲಿ ಹರಿಣ ಪಡೆ ಕೇವಲ 2 ರನ್‌ಗಳಿಂದ ಗೆಲುವು ಸಾಧಿಸಿತ್ತು.

ನ್ಯೂಜಿಲೆಂಡ್-11

ನ್ಯೂಜಿಲೆಂಡ್-11

ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 2005ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿತ್ತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಪ್ರಪ್ರಥಮ ಪಂದ್ಯವಾಗಿತ್ತು. ಆದರೆ ನ್ಯೂಜಿಲೆಂಡ್ ತಂಡ 200+ ರನ್‌ಗಳ ಮೈಲಿಗಲ್ಲನ್ನು ದಾಟಲು 5 ವರ್ಷ ತೆಗೆದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ 2010ರ ಫೆಬ್ರವರಿ 28ರಂದು ನಡೆದ ಪಂದ್ಯದಲ್ಲಿ ಕೀವಿಸ್ 214/6 ರನ್‌ಗಳಿಸಿ ಮೊದಲ ಬಾರಿಗೆ ಈ ಮೈಲಿಗಲ್ಲು ದಾಟಿತ್ತು. ಈ ಪಂದ್ಯದಲ್ಲಿ ಆಸಿಸ್ ಕೂಡ ಇಷ್ಟೇ ರನ್‌ಗಳಿಸಿದ ಕಾರಣ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ಗೆದ್ದುಕೊಂಡಿತ್ತು. ನ್ಯೂಜಿಲೆಂಡ್ ತಂಡ 11 ಬಾರಿ 200ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದೆ.

ಇಂಗ್ಲೆಂಡ್-10

ಇಂಗ್ಲೆಂಡ್-10

ಇಂಗ್ಲೆಂಡ್ ತಂಡ ಪ್ರಥಮ ಬಾರಿಗೆ 200ರ ಗಡಿ ತಲುಪಿದ್ದು 2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ. ಅಂದು ಭಾರತ ಇಂಗ್ಲೆಂಡ್‌ಗೆ 218 ರನ್‌ಗಳ ಗುರಿಯನ್ನು ನೀಡಿತ್ತು. ಈ ಪಂದ್ಯದಲ್ಲಿ 18 ರನ್‌ಗಳಿಂದ ಇಂಗ್ಲೆಂಡ್ ಸೋಲು ಕಂಡಿತ್ತು. ಈವರೆಗೆ 10 ಬಾರಿ ಇಂಗ್ಲೆಂಡ್ ತಂಡ 200ಕ್ಕೂ ಅಧಿಕ ರನ್‌ಗಳಿಸಿದ ಸಾಧನೆಯನ್ನು ಮಾಡಿದೆ.

ಉಳಿದ ತಂಡಗಳ ಸಾಧನೆ

ಉಳಿದ ತಂಡಗಳ ಸಾಧನೆ

ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ತಲಾ 8 ಬಾರಿ 200ಕ್ಕೂ ಅಧಿಕ ರನ್‌ಗಳ ಸಾಧನೆಯನ್ನು ಮಾಡಿದ್ದರೆ, ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ತಲಾ 6 ಬಾರಿ ಈ ಸಾಧನೆ ಮಾಡಿದೆ. ಬಾಂಗ್ಲಾದೇಶ, ಕತಾರ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಈ ಮೈಲಿಗಲ್ಲನ್ನು 3 ಬಾರಿಯಷ್ಟೇ ತಲುಪಿವೆ.

Story first published: Sunday, March 21, 2021, 10:09 [IST]
Other articles published on Mar 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+