ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸದ್ದಿಲ್ಲದೆ ಟಿ20 ದಾಖಲೆ ಬರೆದ ವಿಕೆಟ್ ಕೀಪರ್ ಧೋನಿ!

By Mahesh
T20: Dhoni sets record for most catches by wicketkeeper

ಜೋಹಾನ್ಸ್ ಬರ್ಗ್, ಫೆಬ್ರವರಿ 19: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಟ್ವೆಂಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಕ್ಯಾಚ್ ಹಿಡಿದ ಸಾಧನೆ ಮಾಡಿದ್ದಾರೆ.

ಶ್ರೀಲಂಕಾದ ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆಯನ್ನು ಧೋನಿ ಅವರು ಸರಿಗಟ್ಟಿದರು. ಸಂಗಕ್ಕಾರ ಅವರು ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಮಾಡಿದ್ದರು. ಧೋನಿ ಅವರು ಈ ದಾಖಲೆಯನ್ನು ಮುರಿದಿದ್ದಾರೆ.

ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಗೆಲುವಿಗೆ ಪ್ರಮುಖವಾಗಿ ಕಾರಣರಾದ ಐದು ವಿಕೆಟ್ ಪಡೆದು ಪಂದ್ಯ ಪುರುಷೋತ್ತಮರೆನಿಸಿದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಅರ್ಧ ಶತಕ ಸಿಡಿಸಿದ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಆದರೆ, ಮಾಜಿ ನಾಯಕ ಎಂಎಸ್ ಧೋನಿ ಅವರು ಹೊಸ ದಾಖಲೆ ಬರೆದರೂ ಹೆಚ್ಚಿನ ಸಂಭ್ರಮಪಡಲಿಲ್ಲ..

ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆ

ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆ

ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಅವರು 254 ಪಂದ್ಯಗಳಿಂದ 133 ಕ್ಯಾಚ್ ಪಡೆದು ವಿಶ್ವದಾಖಲೆ ಬರೆದಿದ್ದರು. ಧೋನಿ ಅವರು ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ ಕ್ಯಾಚ್ ಹಿಡಿಯುವ ಮೂಲಕ ಈ ದಾಖಲೆ ಸರಿಗಟ್ಟಿದರು. ಧೋನಿ ಅವರು 275 ಪಂದ್ಯಗಳಿಂದ 134 ಕ್ಯಾಚ್ ಹಿಡಿದ್ದಾರೆ.

ಅತಿ ಹೆಚ್ಚು ಪಡೆದಿರುವ ವಿಕೆಟ್ ಕೀಪರ್ಸ್

ಅತಿ ಹೆಚ್ಚು ಪಡೆದಿರುವ ವಿಕೆಟ್ ಕೀಪರ್ಸ್

ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಡೆದಿರುವ ವಿಕೆಟ್ ಕೀಪರ್ಸ್ ಗಳು-
* ಧೋನಿ (275 ಪಂದ್ಯ, 134),
* ಕುಮಾರ ಸಂಗಕ್ಕಾರ (254ಪಂದ್ಯ, 133)
* ದಿನೇಶ್‌ ಕಾರ್ತಿಕ್‌ (227 ಪಂದ್ಯ 123 ಕ್ಯಾಚ್),
* ಕಮ್ರಾನ್ ಅಕ್ಮಲ್‌ (211 ಪಂದ್ಯ, 115 ಕ್ಯಾಚ್‌),
* ದಿನೇಶ್‌ ರಾಮ್ದಿನ್( 168 ಪಂದ್ಯ, 108 ಕ್ಯಾಚ್‌) ನಂತರದ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 600 ಕ್ಯಾಚ್​ ಪಡೆಯುವ ಮೂಲಕ ಈ ಸಾಧನೆ ಮಾಡಿದ 3ನೇ ವಿಕೆಟ್​ ಕೀಪರ್​ ಎನಿಸಿಕೊಂಡಿದ್ದರು. ಸೆಂಚುರಿಯನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 6ನೇ ಏಕದಿನ ಪಂದ್ಯದಲ್ಲಿ ಹಶೀಮ್​ ಆಮ್ಲಾ ನೀಡಿದ ಕ್ಯಾಚ್​ ಪಡೆಯುವ ಮೂಲಕ ಸಾಧನೆ ಮಾಡಿದ್ದರು.

ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್ ಗಳು

ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್ ಗಳು

* ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಚರ್​ 952ಕ್ಯಾಚ್, 42 ಸ್ಟಂಪಿಂಗ್ ಒಟ್ಟು ಸೇರಿ 998 ವಿಕೆಟ್ ಗಳು
* ಆಸ್ಟ್ರೇಲಿಯಾದ ಮಾಜಿ ವಿಕೆಟ್​ ಕೀಪರ್​ ಆಡಮ್​ ಗಿಲ್​ ಕ್ರಿಸ್ಟ್ 813 ಕ್ಯಾಚ್, 92ಸ್ಟಂಪಿಂಗ್ ಸೇರಿ ಒಟ್ಟು 905 ವಿಕೆಟ್ ಗಳಿಸಿದ್ದಾರೆ.

* ಭಾರತದ ಎಂಎಸ್ ಧೋನಿ - 601 ಕ್ಯಾಚ್, 174 ಸ್ಟಂಪಿಂಗ್, ಒಟ್ಟು 775 ಕ್ಯಾಚ್.

ಮೂವರು ಕೂಡಾ ಒಂದು ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

Story first published: Monday, February 19, 2018, 18:15 [IST]
Other articles published on Feb 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X