ICC T20 Rankings ಅಭಿಷೇಕ್, ವರುಣ್ ಅಗ್ರಸ್ಥಾನ ಭದ್ರ; ಇಶಾನ್, ತಿಲಕ್‌ಗೆ ಬಡ್ತಿ
ಟಿ20 ವಿಶ್ವಕಪ್ ಮಹತ್ವದ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಸ್ಥಿರ ಪ್ರದರ್ಶನ ನೀಡಿದ ಆಟಗಾರರು ಐಸಿಸಿ ನೂತನ ಟಿ20 ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಟಿ20 ಶ್ರೇಯಾಂಕದಲ್ಲಿ ಭಾರತೀಯ ಆಟಗಾರರ ಆರ್ಭಟ ಮುಂದುವರೆದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿನ ಟೀಮ್ ಇಂಡಿಯಾದ ಪ್ಲೇಯರ್‌ಗಳು ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಪಾಕಿಸ್ತಾನದ ಸ್ಟಾರ್ ಆರಂಭಿಕ ಆಟಗಾರ ಸಾಹಿಬ್‌ಜಾದ ಫರ್ಹಾನ್ ಒಂದು ಸ್ಥಾನ ಜಿಗಿತ ಕಂಡಿದ್ದಾರೆ.
ಟಿ20 ವಿಶ್ವಕಪ್‌ನ ಆರಂಭದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿ ಸತತ ಸೊನ್ನೆ ಸುತ್ತಿದ್ದ ಅಭಿಷೇಕ್ ಶರ್ಮಾ, ಸೂಪರ್ 8 ಹಂತದ ಪಂದ್ಯದಲ್ಲಿ ಕೊಂಚ ಸಮಾಧಾನ ರೀತಿಯ ಬ್ಯಾಟಿಂಗ್ ನಡೆಸುತ್ತಿದ್ದು, ಇವರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬದಲಾವಣೆ ಆಗಿಲ್ಲ. ಸದ್ಯ ಇವರು ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಪಾಕಿಸ್ತಾನ ತಂಡಕ್ಕೆ ಆಧಾರವಾಗಿದ್ದ ಆರಂಭಿಕ ಆಟಗಾರ ಸಾಹಿಬ್‌ಜಾದ ಫರ್ಹಾನ್ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದು, ಸದ್ಯ ಇವರು ಎರಡನೇ ಸ್ಥಾನ ಪಡೆದಿದ್ದಾರೆ. ಅಗ್ರಸ್ಥಾನದಲ್ಲಿರುವ ಅಭಿಷೇಕ್ ಶರ್ಮಾ ಹಾಗೂ ಪಾಕ್ ಆಟಗಾರ ನಡುವೆ 26 ಅಂಕಗಳ ಅಂತರವಿದೆ. ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸುವುದು ಅನಿವಾರ್ಯವಾಗಿದೆ. ಅಂದಾಗ ಮಾತ್ರ ಅಗ್ರ ಸ್ಥಾನ ಕಾಯ್ದುಕೊಳ್ಳಬಹುದು. ಇನ್ನು ಎರಡನೇ ಸ್ಥಾನದಲ್ಲಿದ್ದ ಫಿಲ್ ಸಾಲ್ಟ್ ಮೂರನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ.
ಟಾಪ್ 10ರಲ್ಲಿ 4 ಭಾರತೀಯ ಆಟಗಾರರು
ನಾಲ್ಕನೇ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಇಶಾನ್ ಕಿಶನ್ ಇದ್ದು, ಐದನೇ ಸ್ಥಾನದಲ್ಲಿ ಲಂಕಾ ತಂಡದ ಪತಮ್ ನಿಸ್ಸಂಕ ಇದ್ದಾರೆ. ಆರರಲ್ಲಿ ತಿಲಕ್ ವರ್ಮಾ, ಏಳನೇ ಸ್ಥಾನಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಸ್ಪೋಟಕ ಬ್ಯಾಟರ್ ಡೇವಾಲ್ಡ್ ಬ್ರೆವಿಸ್ 8, ಜೋಸ್ ಬಟ್ಲರ್ 1, ಟೀಮ್ ಸಿಫರ್ಟ್ 10ನೇ ಸ್ಥಾನದಲ್ಲಿದ್ದಾರೆ.
25ಸ್ಥಾನ ಬಡ್ತಿ ಪಡೆದ ಸಂಜು
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಇವರು ಸದ್ಯ 549 ರೇಟಿಂಗ್ ಪಾಯಿಂಟ್‌ಗಳೊಂದಿಗೆ 25 ಸ್ಥಾನ ಬಡ್ತಿ ಪಡೆದಿದ್ದು, 40ನೇ ಸ್ಥಾನದಲ್ಲಿದ್ದಾರೆ.

ಅರ್ಶದೀಪ್ ಶ್ರೇಯಾಂಕ ಏರಿಕೆ
ಟೀಮ್ ಇಂಡಿಯಾದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ 771 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರಶೀದ್ ಖಾನ್ ಇದ್ದು, ಮೂರನೇ ಸ್ಥಾನಕ್ಕೆ ಪಾಕಿಸ್ತಾನದ ಅಬ್ರಾರ್ ಅಹ್ಮದ್ ಬಡ್ತಿ ಪಡೆದಿದ್ದಾರೆ. ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ 1 ಸ್ಥಾನ ಜಿಗಿತ ಕಂಡಿದ್ದು, ಏಳನೇ ಕ್ರಮಾಂಕದಲ್ಲಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸುತ್ತಿರುವ ಅರ್ಶದೀಪ್ ಸಿಂಗ್ ಆರು ಸ್ಥಾನ ಜಿಗಿತ ಕಂಡಿದ್ದು 13ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications