ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದಂತೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕೊನೆಯವರೆಗೂ ತಮ್ಮ ಅತ್ಯುತ್ತಮ ಆಟವನ್ನು ಕಾಯ್ದಿರಿಸಿದ್ದರು.
ಪ್ರಮುಖ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನ ದಿನದಂದು, ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅಗ್ರ ಕ್ರಮಾಂಕ ಕುಸಿದಾಗ, ವಿರಾಟ್ ಕೊಹ್ಲಿ ಈ ಪಂದ್ಯಾವಳಿಯಲ್ಲಿ ಮೊದಲ ಅರ್ಧಶತಕ ಬಾರಿಸಿದರು.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ 48 ಎಸೆತಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದೇ ವೇಳೆ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಅವರ ಉಪಸ್ಥಿತಿ ನಿರ್ಣಾಯಕವಾಗಿತ್ತು. ಏಕೆಂದರೆ, ಒಂದು ತುದಿಯಲ್ಲಿ ಪ್ರಮುಖ ಬ್ಯಾಟರ್ ಔಟಾಗುತ್ತಿದ್ದರೆ, ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ನೆಲಕಚ್ಚಿಕೊಂಡು ಆಡುತ್ತಿದ್ದರು.
2024ರ ಟಿ20 ವಿಶ್ವಕಪ್‌ನ ಮೊದಲ ಏಳು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 75 ರನ್ ಗಳಿಸಿದ್ದರು. ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿ ತಮ್ಮ ಎಂದಿನ ಉತ್ತಮ ಫಾರ್ಮ್‌ಗೆ ಮರಳಿದರು.
ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ತಂಡದ ಮ್ಯಾನೇಜ್‌ಮೆಂಟ್ ಪಂದ್ಯಾವಳಿಯ ನಿರ್ಣಾಯಕ ಘಟ್ಟದಲ್ಲಿ ಅತ್ಯುತ್ತಮವಾಗಿ ಮರಳಲು ವಿರಾಟ್ ಕೊಹ್ಲಿ ಮತ್ತು ಅವರ ಅನುಭವವನ್ನು ಬೆಂಬಲಿಸಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟೋಪ್ಲೆ ಅವರ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಆದರೆ ಅದೇ ಓವರ್‌ನಲ್ಲಿ ಮತ್ತೊಂದು ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿ ವಿಕೆಟ್ ನೀಡಿದ್ದರು.
ಆದಾಗ್ಯೂ, ಶನಿವಾರದಂದು ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಮರಳಿದರು. ಮೊದಲ ಓವರ್‌ನಲ್ಲಿ ಮೂರು ಬೌಂಡರಿಗಳೊಂದಿಗೆ ಪ್ರಾರಂಭಿಸಿದರು, ಕವರ್ ಡ್ರೈವ್, ಸ್ಟ್ರೈಟ್ ಡ್ರೈವ್ ಮತ್ತು ಡೀಪ್ ಫೈನ್-ಲೆಗ್‌ಗೆ ಫ್ಲಿಕ್ ಮಾಡುವ ಮೂಲಕ ಬೌಂಡರಿ ಬಾರಿಸಿದರು.

ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ 39ನೇ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದರು. ಈ ಮೂಲಕ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳ ದಾಖಲೆಯನ್ನು ಸರಿಗಟ್ಟಿದರು.
1. ಬಾಬರ್ ಅಜಂ - 123 ಪಂದ್ಯಗಳಲ್ಲಿ 39 ಫಿಫ್ಟಿ ಪ್ಲಸ್ ಸ್ಕೋರ್
2. ವಿರಾಟ್ ಕೊಹ್ಲಿ - 126 ಪಂದ್ಯಗಳಲ್ಲಿ 39 ಫಿಫ್ಟಿ ಪ್ಲಸ್ ಸ್ಕೋರ್
3. ರೋಹಿತ್ ಶರ್ಮಾ - 159 ಪಂದ್ಯಗಳಲ್ಲಿ 37 ಫಿಫ್ಟಿ ಪ್ಲಸ್ ಸ್ಕೋರ್
4. ಮೊಹಮ್ಮದ್ ರಿಜ್ವಾನ್ - 102 ಪಂದ್ಯಗಳಲ್ಲಿ 30 ಫಿಫ್ಟಿ ಪ್ಲಸ್ ಸ್ಕೋರ್
5. ಡೇವಿಡ್ ವಾರ್ನರ್ - 110 ಪಂದ್ಯಗಳಲ್ಲಿ 29 ಫಿಫ್ಟಿ ಪ್ಲಸ್ ಸ್ಕೋರ್
ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರ. ಆದರೆ ತಮ್ಮ ಮೈಲಿಗಲ್ಲನ್ನು ತಲುಪಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು. 59 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 76 ರನ್ ಗಳಿಸಿ ಔಟಾದರು.
ಕೇವಲ 11 ಎಸೆತಗಳಲ್ಲಿ ತಮ್ಮ ಕೊನೆಯ 26 ರನ್‌ಗಳನ್ನು ಬಾರಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ಕೊನೆಯಲ್ಲಿ ಶಿವಂ ದುಬೆ ಕೂಡ ನಿರ್ಣಾಯಕ ಇನ್ನಿಂಗ್ಸ್ ಆಡಿದರು.
ಅಕ್ಷರ್ ಪಟೇಲ್ ಅವರು 31 ಎಸೆತಗಳಲ್ಲಿ ಸ್ಫೋಟಕ 47 ರನ್ ಗಳಿಸುವ ಮೂಲಕ ಭಾರತ ತಂಡದ ಆವೇಗವನ್ನು ಬದಲಾಯಿಸುವ ಮೂಲಕ ಭಾರತೀಯ ಇನ್ನಿಂಗ್ಸ್‌ನ ಸ್ಟಾರ್ ಆಗಿದ್ದರು.