IND vs BAN: ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯದ ವಿವರ; ಹೆಡ್-ಟು-ಹೆಡ್, ಸಂಭಾವ್ಯ ಆಡುವ 11ರ ಬಳಗ
ಶನಿವಾರ, ಜೂನ್ 22ರಂದು ಆಂಟಿಗುವಾದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮತ್ತೊಮ್ಮೆ ಹೈ-ವೋಲ್ಟೇಜ್ ಪೈಪೋಟಿಯನ್ನು ಪುನರಾರಂಭಿಸುತ್ತವೆ.
ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮೇಲೆ ಯಾವಾಗಲೂ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ, ಬಾಂಗ್ಲಾದೇಶ ತಮ್ಮ ನೆರೆಯ ತಂಡದ ವಿರುದ್ಧ ವಿಶೇಷವಾಗಿ, ಐಸಿಸಿ ಪಂದ್ಯಾವಳಿಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಕಾಯ್ದಿರಿಸಿದೆ.

ಬೆಂಗಳೂರಿನಲ್ಲಿ ನಡೆದ 2016ರ ಟಿ20 ವಿಶ್ವಕಪ್‌ನ ನಿಕಟ ಪೈಪೋಟಿ ಅಥವಾ 2022ರಲ್ಲಿ ಅಡಿಲೇಡ್‌ನಲ್ಲಿ ನಡೆದ ಇತ್ತೀಚಿನ ಮುಖಾಮುಖಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಆದರೆ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿ ಉಳಿದಿದ್ದು, ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಪಂದ್ಯಕ್ಕೆ ಬರಲಿದೆ.
ಯುಎಸ್ಎಯಲ್ಲಿ ಆಡಿದ ಎಲ್ಲಾ ಗುಂಪು-ಹಂತದ ಪಂದ್ಯಗಳ ನಂತರ ಭಾರತ ತಂಡವು ಕೆರಿಬಿಯನ್ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಕುರಿತು ಚರ್ಚೆ ಇತ್ತು. ನ್ಯೂಯಾರ್ಕ್ ಪಿಚ್‌ಗಳು ಬೌಲರ್ ಸ್ನೇಹಿಯಾಗಿದ್ದು, ಭಾರತದ ಬ್ಯಾಟರ್‌ಗಳು ಕಠಿಣವಾಗಿ ಆಡಿದ್ದನ್ನು ನೋಡಿದ್ದೇವೆ.

ಇದೀಗ, ತಮ್ಮ ಮೊದಲ ಸೂಪರ್ 8ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪ್ರಬಲ ಗೆಲುವು ಸಾಧಿಸುವ ಮೂಲಕ ಎಲ್ಲಾ ಅನುಮಾನಗಳನ್ನು ಹೋಗಲಾಡಿಸಿದೆ.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ 181 ರನ್‌ಗಳನ್ನು ಕಲೆಹಾಕಿದ ಮಾಡಿದ ನಂತರ, ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡವನ್ನು ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೇತೃತ್ವದಲ್ಲಿ 134 ರನ್‌ಗಳಿಂದ ಆಲೌಟ್ ಮಾಡುವ ಮೂಲಕ ಭಾರತ ತನ್ನ ಆಲ್‌ರೌಂಡ್ ಪ್ರದರ್ಶನವನ್ನು ನೀಡಿತು.
ಗ್ರೂಪ್ 1ರಲ್ಲಿನ ತಮ್ಮ ಮೊದಲ ಸೂಪರ್ 8ರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿರುವ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿ ಪಂದ್ಯಕ್ಕೆ ಬರಲಿದೆ.
ನಜ್ಮುಲ್ ಹೊಸೈನ್ ಶಾಂಟೊ ನಾಯಕತ್ವದ ಬಾಂಗ್ಲಾದೇಶ ಆಟಗಾರರು ಈವರೆಗೆ ನಿರಾಶಾದಾಯಕ ಪ್ರರ್ದಶನ ನೀಡಿದ್ದಾರೆ. ಬೌಲರ್‌ಗಳು ನಿಯಂತ್ರಣದಲ್ಲಿದ್ದರೂ, ಬ್ಯಾಟರ್‌ಗಳು ಫಾರ್ಮ್ ಕಂಡುಕೊಳ್ಳಲು ವಿಫಲರಾಗಿದ್ದಾರೆ.
ಮತ್ತೊಂದೆಡೆ, ಭಾರತ ತಂಡವು ತಮ್ಮ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಬ್ಬರಿಸಲು ಮತ್ತು ಉತ್ತಮ ಇನ್ನಿಂಗ್ಸ್ ಆಡಬೇಕೆಂದು ಬಯಸುತ್ತದೆ. ಹೊಸ ಆರಂಭಿಕ ಜೋಡಿಯು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿಲ್ಲ.
ಬಾಂಗ್ಲಾದೇಶ ವಿರುದ್ಧ ಗಳಿಸುವ ರನ್‌ಗಳು ಆಸ್ಟ್ರೇಲಿಯಾ ವಿರುದ್ಧ ಸೋಮವಾರದ ಮತ್ತೊಂದು ಹೈ-ವೋಲ್ಟೇಜ್ ಮುಂಚಿತವಾಗಿ ಭಾರತದ ವಿಶ್ವಾಸವನ್ನು ಉತ್ತಮಗೊಳಿಸುತ್ತದೆ.
ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ 24 ಎಸೆತಗಳಲ್ಲಿ 24 ರನ್‌ಗಳನ್ನು ಬಾರಿಸಿದರು. ಇದರಲ್ಲಿ ಅವರು ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ 10ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದರು.
ಭಾರತ vs ಬಾಂಗ್ಲಾದೇಶ: ಹೆಡ್-ಟು-ಹೆಡ್ ದಾಖಲೆ
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಈವರೆಗೆ 13 ಬಾರಿ ಮುಖಾಮುಖಿಯಾಗಿವೆ. ಭಾರತ ತಂಡ 12 ಬಾರಿ ಗೆಲುವು ಸಾಧಿಸಿದ್ದರೆ, ಬಾಂಗ್ಲಾದೇಶ 1 ಪಂದ್ಯವನ್ನು ಗೆದ್ದಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ನಾಲ್ಕು ಬಾರಿ ಎದುರಾಗಿದ್ದು, ಬಾಂಗ್ಲಾದೇಶ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದೆ.
ಭಾರತ vs ಬಾಂಗ್ಲಾದೇಶ ಸೂಪರ್ 8: ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಬಾಂಗ್ಲಾದೇಶ: ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ, ಜಾಕರ್ ಅಲಿ, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಶಕೀಬ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications