T20 WC 2024: ಭಾರತ vs ಆಸ್ಟ್ರೇಲಿಯಾ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ?; ಸೇಂಟ್ ಲೂಸಿಯಾ ಹವಾಮಾನ ವರದಿ
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್‌ನ ಡೇರೆನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಸೂಪರ್ 8ರ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಉಭಯ ತಂಡಗಳು 2024ರ ಟಿ20 ವಿಶ್ವಕಪ್‌ನಲ್ಲಿ ಪರಸ್ಪರ ಎದುರಿಸುತ್ತಿರುವಾಗ ಕಳೆದ ಕೆಲವು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಪೈಪೋಟಿ ಮತ್ತೆ ಮರುಕಳಿಸಿದೆ.

ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಂಡ ದುಃಸ್ವಪ್ನವಾಗಿದೆ ಮತ್ತು ಐಸಿಸಿ ಪಂದ್ಯಾವಳಿಗಳ ಫೈನಲ್‌ನಲ್ಲಿ ಸತತವಾಗಿ ಸೋಲಿಸಿದ್ದಾರೆ.
ಆಸ್ಟ್ರೇಲಿಯಾ ಮೊದಲು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿತು. ಆ ಬಳಿಕ ತವರಿನಲ್ಲಿ ನಡೆದ 2023ರ ವಿಶ್ವಕಪ್ ಫೈನಲ್‌ನಲ್ಲಿ 6 ವಿಕೆಟ್‌ಗಳ ಗೆಲುವಿನೊಂದಿಗೆ ಟೀಮ್ ಇಂಡಿಯಾವನ್ನು ಮಣಿಸಿತು.
ಆದಾಗ್ಯೂ, ಮುಂಬರುವ ಪಂದ್ಯಕ್ಕೆ ಬರುವ ಮುನ್ನ, ಭಾರತ ತಂಡವು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೂಪರ್ 8ರ ಹಂತದಲ್ಲಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದ ಬಳಿಕ, ಆಸ್ಟ್ರೇಲಿಯಾಕ್ಕಿಂತ ಹೆಚ್ಚು ಆರಾಮದಾಯಕ ತಂಡವಾಗಿ ಕಾಣಿಸುತ್ತಿದೆ.
ಮತ್ತೊಂದೆಡೆ, ಸೂಪರ್ 8ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 21 ರನ್‌ಗಳ ಸೋಲು ಇದೀಗ ಆಸ್ಟ್ರೇಲಿಯಾ ತಂಡವನ್ನು ಅನಿಶ್ಚಿತ ಪರಿಸ್ಥಿತಿಗೆ ತಂದಿದೆ.
ಮಿಚೆಲ್ ಮಾರ್ಷ್ ನಾಯಕತ್ವದ ಆಸೀಸ್ ತಂಡಕ್ಕೆ ಸೆಮಿಫೈನಲ್‌ಗೆ ಮುನ್ನಡೆಯಲು ಮುಂಬರುವ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅಗತ್ಯವಿದೆ. ಆದಾಗ್ಯೂ, ಪ್ರತಿಕೂಲ ಹವಾಮಾನದಿಂದ ಅವರ ಯೋಜನೆ ಹಾಳಾಗಬಹುದು.

ಸೇಂಟ್ ಲೂಸಿಯಾ ಹವಾಮಾನ ವರದಿ
ವೆದರ್.ಕಾಮ್ ಪ್ರಕಾರ, ಪ್ರಮುಖ ಪಂದ್ಯದ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಮಳೆಯ ಸಾಧ್ಯತೆಯು ಕಡಿಮೆ ಭಾಗದಲ್ಲಿ ಶೇ.15ರಷ್ಟು ಇರುತ್ತದೆ. ಪಂದ್ಯದ ಸಮಯದಲ್ಲಿ ಗುಡುಗು ಸಹಿತ ಶೇ.5ರಷ್ಟು ಲಘು ಮಳೆಯಾಗುವ ಸಾಧ್ಯತೆಗಳಿವೆ.
ಹೀಗಾಗಿ ಆಸ್ಟ್ರೇಲಿಯಾ ತಂಡವು ಪೂರ್ಣ ಪ್ರಮಾಣದ ಪಂದ್ಯವನ್ನು ನಿರೀಕ್ಷಿಸುತ್ತದೆ ಮತ್ತು ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ತಂಡದ ಗೆಲುವು ಆಸೀಸ್ ಅನ್ನು ಪಂದ್ಯಾವಳಿಯಿಂದ ಹೊರಹಾಕುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ತಂಡವು ಪಂದ್ಯಾವಳಿಯಲ್ಲಿ ಅಜೇಯ ಓಟದಲ್ಲಿತ್ತು. ತಮ್ಮ ಗುಂಪು-ಹಂತದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 36 ರನ್‌ಗಳಿಂದ ಸೋಲಿಸಿತು.
2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ವೀರೋಚಿತ ಬ್ಯಾಟಿಂಗ್ ಪ್ರದರ್ಶನದಂತೆಯೇ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಅದ್ಭುತ ಹೋರಾಟ ನೀಡಿದರು. ಅಫ್ಘಾನಿಸ್ತಾನ ತಂಡದಿಂದ ಆಘಾತಕಾರಿ ಸೋಲು ಅನುಭವಿಸವವರೆಗೂ ಬಹುತೇಕ ತಮ್ಮ ಅಜೇಯ ಗೆಲುವನ್ನು ಎದುರು ನೋಡುತ್ತಿದ್ದರು. ಆದರೆ, ಆಫ್ಘನ್ನರು ಸೇಂಟ್ ವಿನ್ಸೆಂಟ್‌ನಲ್ಲಿ ಮುಂಬೈನ ಸೋಲಿಗೆ ಸೇಡು ತೀರಿಸಿಕೊಂಡರು
ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ಭಾರತ ತಂಡದ ಸುಲಭ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಿತು. ಇದೀಗ ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್ ಫೈನಲ್‌ನ ಹೃದಯ ವಿದ್ರಾವಕ ಸೋಲಿಗೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಬಹು ನಿರೀಕ್ಷಿತ ಪಂದ್ಯದಲ್ಲಿ ಬದ್ಧ ಎದುರಾಳಿಯನ್ನು ಸೋಲಿಸಿ ಪಂದ್ಯಾವಳಿಯಿಂದ ಹೊರಹಾಕಲು ಎದುರು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications