Ind Vs Eng: ಅತಿಯಾದ ಆತ್ಮವಿಶ್ವಾವೇ ಮುಳುವಾಯ್ತ? ಟೀಂ ಇಂಡಿಯಾ ಎಡವಿದ್ದೆಲ್ಲಿ?

ಸೂಪರ್ 12 ಹಂತದಲ್ಲಿ ಅಮೋಘ ಪ್ರದರ್ಶನದ ಮೂಲಕ ಗ್ರೂಪ್ 2ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಗಳಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತಕ್ಕೆ ಇಂಗ್ಲೆಂಡ್ ಆಘಾತ ನೀಡಿದೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಹೀನಾಯವಾಗಿ ಸೋಲುವ ಮೂಲಕ ಈ ಬಾರಿಯ ವಿಶ್ವಕಪ್ ಕನಸು ಭಗ್ನಗೊಂಡಿದೆ.
ಈ ಬಾರಿಯ ಟಿ20 ವಿಶ್ವಕಪ್ ಆರಂಭವಾದಾಗಿನಿಂದಲೂ ಟೀಂ ಇಂಡಿಯಾದಲ್ಲಿ ಕೆಲವು ಕೊರತೆಗಳು ಇದ್ದವು. ಆದರೂ ಭಾರತ ಗೆಲುವು ಕಾಣುತ್ತಿದ್ದರಿಂದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್‌ಮೆಂಟ್ ತಂಡದ ದೌರ್ಬಲ್ಯಗಳ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳಲಿಲ್ಲ. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಇದು ದೊಡ್ಡ ತಲೆನೋವಾಯಿತು.
ಅದರಲ್ಲೂ, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ ತಂಡದ ಪ್ಲೇಯಿಂಗ್ XI ಆಯ್ಕೆಯಲ್ಲಿ ಸೋತಿದ್ದು, ಪ್ರಮುಖ ಆಟಗಾರರು ಕೈಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಇಂಗ್ಲೆಂಡ್ ವಿರುದ್ಧದ ಸೋಲು, ಭಾರತ ತಂಡದ ಬೌಲಿಂಗ್ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿದೆ. ಏಷ್ಯಾಕಪ್‌ನಲ್ಲಿ ಭಾರತ ಸೋಲಲು ಇದೇ ಅಂಶ ಕಾರಣವಾಗಿತ್ತು. ಟಿ20 ವಿಶ್ವಕಪ್‌ನಲ್ಲೂ ಅದೇ ಘಟನೆ ಮರುಕಳಿಸಿದೆ. ಭಾರತದ ಸೋಲಿಗೆ ಈ ಕೆಳಕಂಡ ಅಂಶಗಳೇ ಕಾರಣವಾಗಿವೆ.

ಮಹತ್ವದ ಪಂದ್ಯಗಳಲ್ಲಿ ರಾಹುಲ್ ಕಳಪೆ ಆಟ
ಭಾರತದ ಆಟಂಭಿಕ ಆಟಗಾರ ಕೆಎಲ್ ರಾಹುಲ್ ಮುಖ್ಯ ಪಂದ್ಯಗಳಲ್ಲಿ ತಮ್ಮ ಕಳಪೆ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದಾರೆ. ಹೌದು, ಕೆಎಲ್ ರಾಹುಲ್ ಐಸಿಸಿ ಟೂರ್ನಿಗಳಲ್ಲಿ ಪ್ರಮುಖ ಪಂದ್ಯಗಳಲ್ಲಿ, ಬಲಿಷ್ಠ ತಂಡಗಳ ವಿರುದ್ಧ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಕೂಡ ಅವರು ಅದನ್ನು ಮುಂದುವರೆಸಿದರು.
5 ಎಸೆತಗಳಲ್ಲಿ ಕೇವಲ 5 ರನ್ ಸಿಡಿಸಿ ಔಟಾಗುವ ಮೂಲಕ ಭಾರತ ತಂಡದ ಮೇಲೆ ಆರಂಭದಲ್ಲೇ ಒತ್ತಡ ಹೇರಿದರು. ಟಿ20 ವಿಶ್ವಕಪ್ 2022ರ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲೂ ರಾಹುಲ್ ಹೀಗೆ ಆರಂಭದಲ್ಲಿ ವಿಕೆಟ್ ಕೈಚೆಲ್ಲಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಅವರು ವಿಫಲರಾಗಿದ್ದರು. ಜಿಂಬಾಬ್ವೆ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಗಳಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: 4000 ರನ್ ಪೂರೈಸಿದ ಮೊದಲ ಪ್ಲೇಯರ್

ಚಹಾಲ್ ಆಡಿಸದೇ ತಪ್ಪು ಮಾಡಿದ್ರಾ?
ಯುಜುವೇಂದ್ರ ಚಹಾಲ್ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಆದರೆ ಈ ಬಾರಿ ವಿಶ್ವಕಪ್‌ನಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಕೂಡ ಆಡಲಿಲ್ಲ. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಚಹಾಲ್ ಉತ್ತಮ ದಾಖಲೆ ಹೊಂದಿದ್ದಾರೆ. ಪಂತ್, ದೀಪಕ್ ಹೂಡಾರನ್ನು ಆಡಿಸಿದ ಭಾರತ ತಂಡದ ಮ್ಯಾನೇಜ್‌ಮೆಂಟ್ ಚಹಾಲ್ ವಿಚಾರದಲ್ಲಿ ಮಾತ್ರ ಅಸಡ್ಡೆ ತೋರಿತು.
ಅಶ್ವಿನ್, ಅಕ್ಷರ್ ಪಟೇಲ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಗೆಲುವಿನ ಅಲೆಯಲ್ಲಿದ್ದ ಭಾರತ ಚಹಾಲ್‌ರನ್ನು ಕಡೆಗಣಿಸಿದ್ದು, ಸೆಮಿಫೈನಲ್‌ನಲ್ಲಿ ತಂಡಕ್ಕೆ ಮುಳುವಾಗಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ಇಂಗ್ಲೆಂಡ್ ವಿರುದ್ಧ ಚಹಾಲ್‌ರನ್ನು ಆಡಿಸುವಂತೆ ಕೇಳಿಕೊಂಡಿದ್ದರು.

ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ವೈಫಲ್ಯ
ಭಾರತದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕನಾಗಿ ಒಂದೂ ಪಂದ್ಯಗಳಲ್ಲಿ ಕೂಡ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲಿಲ್ಲ. ಒಂದು ಕಡೆ ಕೆಎಲ್ ರಾಹುಲ್ ಸತತವಾಗಿ ವೈಫಲ್ಯ ಅನುಭವಿಸಿದರೆ, ರೋಹಿತ್ ಕೂಡ ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಮೇಲೆ ಒತ್ತಡ ಹೇರಿದರು.
ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ 28 ಎಸೆತಗಳಲ್ಲಿ 27 ರನ್ ಗಳಿಸಿ ಔಟಾಗುವ ಮೂಲಕ ಮಧ್ಯಮ ಕ್ರಮಾಂಕದ ಬ್ಯಾಟರ್ ಮೇಲೆ ಒತ್ತಡ ಹೇರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications