Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 WC Semifinal: ಟೀಮ್ ಇಂಡಿಯಾ ಫೈನಲ್‌ ಪ್ರವೇಶಿಸಲು ಕಾರಣವಾದ 5 ಅಂಶಗಳು

ಮುಂಬೈನ ವಾಂಖೆಡೆ ಮೈದಾನದಲ್ಲಿ ಕುಳಿತಿದ್ದ ಅಭಿಮಾನಿಗಳು ಕುರ್ಚಿಯ ತುದಿಯ ಮೇಲೆ ಕುಳಿತು ಕೊಳ್ಳುವಂತೆ ಮಾಡಿದ್ದು ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯ. ನಿಜಕ್ಕೂ ಟೀಮ್ ಇಂಡಿಯಾ ಟಾಸ್‌ ಸೋತಾಗ ಎಲ್ಲರೂ ಸಪ್ಪೆ ಮುಖವನ್ನೇ ಹಾಕಿದ್ದರು. ಆದರೆ ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್‌ ಇಂಡಿಯಾ ಮೊದಲು ಬ್ಯಾಟ್ ಮಾಡಲು ಸೂಚಿಸಿದಾಗ, ಅಕ್ಷರಶಃ ಮೈದಾನದಲ್ಲಿ ಹರ್ಷ ಮನೆ ಮಾಡಿತ್ತು. ಸೂರ್ಯ ಸಹ ತಾವು ಟಾಸ್‌ ಗೆದ್ದಿದ್ದರೆ ಮೊದಲು ಬ್ಯಾಟ್ ಮಾಡುವುದಾಗಿಯೇ ತಿಳಿಸಿದ್ದರು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪದೇ ಪದೇ ರನ್‌ ಕಲೆ ಹಾಕುವಲ್ಲಿ ವಿಫಲರಾಗಿರುವ ಅಭಿಷೇಕ್ ಶರ್ಮಾ, ಸೆಮಿಫೈನಲ್ ಪಂದ್ಯದಲ್ಲೂ ತಮ್ಮ ನೀರಸ ಪ್ರದರ್ಶನ ಮುಂದುವರಿಸಿದರು. ಆದರೆ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಆಟ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಅವರ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನದಿಂದ ಟೀಮ್ ಇಂಡಿಯಾ ಸವಾಲಿನ 253 ರನ್ ಕಲೆ ಹಾಕಿತು. ಈ ಮೊತ್ತವನ್ನು ನೋಡಿದ ಮೇಲೆ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂಗ್ಲೆಂಡ್ ತಂಡದ ಜಾಕಬ್ ಬೆಥೆಲ್ ಸ್ಫೋಟಕ ಬ್ಯಾಟಿಂಗ್ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಭಾರತ ಅಹಮದಾಬಾದ್ ಫ್ಲೈಟ್ ಏರಲು ಕಾರಣವಾಗಿರುವ 5 ಅಂಶಗಳು ಇಲ್ಲಿವೆ.

T20 WC Semifinal

ಸಂಜು ಸ್ಯಾಮ್ಸನ್‌

ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್. ಇವರಿಗೆ ಈ ವಿಶ್ವಕಪ್‌ನಲ್ಲಿ ಅಂದುಕೊಂಡಷ್ಟು ಅವಕಾಶಗಳು ಸಿಗಲಿಲ್ಲ. ಆದರೆ ಅವಕಾಶ ಸಿಕ್ಕಾಗ ಎರಡೂ ಕೈಗಳಿಂದ ಬಳಸಿಕೊಂಡ ಸಂಜು ಬ್ಯಾಕ್‌ ಟು ಬ್ಯಾಕ್ ಅರ್ಧಶತಕ ಬಾರಿಸಿದರು. ತಮ್ಮ ಮೇಲೆ ಒತ್ತಡವೇ ಬೀಳದಂತೆ ಬ್ಯಾಟ್ ಮಾಡಿದ ಸಂಜು ಮತ್ತೊಮ್ಮೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದರು. 211ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದ ಸಂಜು 89 ರನ್‌ ಸಿಡಿಸಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳು ಸೇರಿವೆ.

ತಿಲಕ್ ವರ್ಮಾ

ಟೀಮ್ ಇಂಡಿಯಾ 254 ರನ್‌ಗಳ ಗುರಿಯನ್ನು ನೀಡುವಲ್ಲಿ ಮಿಡ್ಲ್ ಆರ್ಡರ್ ಬ್ಯಾಟರ್ ತಿಲಕ್ ವರ್ಮಾ ಅವರ ಕೊಡುಗೆ ಸಹ ಅಪಾರ. ಇವರು ಕೇವಲ 7 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 300 ಆಗಿತ್ತು.

ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 27 ರನ್ ನೀಡಿ ಬೌಲಿಂಗ್‌ನಲ್ಲಿ ಕಮಾಲ್ ಪ್ರದರ್ಶನ ಮೊದಲು ನೀಡಿದರು. ಬಳಿಕ ಬೌಲಿಂಗ್‌ನಲ್ಲಿ ಒತ್ತಡದ ಸನ್ನಿವೇಶದಲ್ಲೂ ಬೌಲಿಂಗ್ ಮಾಡಿ 2 ವಿಕೆಟ್‌ ಕಬಳಿಸಿದರು. ಈ ಎರಡಕ್ಕಿಂತಲೂ ಜಾಕಬ್ ಬೆಥೆಲ್ ಬಾರಿಸಿದ ಚೆಂಡನ್ನು ಲಾಂಗ್ ಆಫ್‌ನಲ್ಲಿ ತಡೆದು, ವಿಕೆಟ್ ಕೀಪರ್ ಬಳಿ ಚೆಂಡನ್ನು ಎಸೆದು, ರನೌಟ್‌ನಲ್ಲೂ ತಮ್ಮದೇ ಆದ ಮಹತ್ವದ ಪಾತ್ರವಹಿಸಿದರು.

ಜಸ್ಪ್ರೀತ್ ಬುಮ್ರಾ

ಟೀಮ್ ಇಂಡಿಯಾದ ಸಂಕಟ ಮೋಚಕ ಜಸ್ಪ್ರೀತ್ ಬುಮ್ರಾ ತಮ್ಮ ಅನುಭವ ಬಳಸಿಕೊಂಡು ಬೌಲಿಂಗ್ ನಡೆಸಿದರು. ಇವರು ಬ್ಯಾಟಿಂಗ್ ಫ್ರೆಂಡ್ಲಿ ಪಿಚ್‌ಗಳಲ್ಲೂ ರನ್‌ಗಳನ್ನು ನೀಡದಂತೆ ತಡೆದರು. ಆರಂಭದಲ್ಲಿ ಪವರ್‌ ಪ್ಲೇನಲ್ಲಿ 5ನೇ ಓವರ್ ಬೌಲ್ ಮಾಡಿದ ಬುಮ್ರಾ 7 ರನ್ ನೀಡಿ 1 ವಿಕೆಟ್‌ ಪಡೆದರು. ನಂತರ ಬುಮ್ರಾ 11ನೇ ಓವರ್ ಬೌಲ್ ಮಾಡಿ 12 ರನ್ ನೀಡಿದರು. ರನ್‌ಗಳಿಗೆ ಅಂಕುಶದ ಅಗತ್ಯ ಇದ್ದಾಗ 16ನೇ ಓವರ್ ಬೌಲ್ ಮಾಡಿ ಕೇವಲ 8 ರನ್‌ ನೀಡಿದರು. ಇನ್ನು 18ನೇ ಓವರ್‌ನಲ್ಲಿ 6 ರನ್‌ ನೀಡಿ ಇಂಗ್ಲೆಂಡ ತಂಡಕ್ಕೆ ಕಾಡಿದರು.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಟಾಮ್ ಬ್ಯಾಂಟಮ್‌ ಅವರ ವಿಕೆಟ್‌ ಪಡೆದರು. ಆದರೆ ಡೀಪ್ ಕವರ್‌ನಲ್ಲಿ ವಿಲ್ ಜಾಕ್ಸ್ ಅವರ ಕ್ಯಾಚ್ ಹಿಡಿದು ಪಂದ್ಯದ ಚಿತ್ರಣವನ್ನೇ ಬದಲಿಸಿದರು.

Story first published: Friday, March 6, 2026, 6:05 [IST]
Other articles published on Mar 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+