For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್, ನಮೀಬಿಯಾ vs ಐರ್ಲೆಂಡ್, ಟಾಸ್ ರಿಪೋರ್ಟ್, Live ಸ್ಕೋರ್

T20 world cup: 11th Match,Namibia vs Ireland, Live score and Playing XI

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತು ಅಂತಿಮ ಹಂತಕ್ಕೆ ತಲುಪಿದ್ದು 11ನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಐರ್ಲೆಂಡ್ ತಂಡ ನಮೀಬಿಯಾ ವಿರುದ್ಧ ಸೆಣೆಸಾಟಕ್ಕೆ ಇಳಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಐರ್ಲೆಂಡ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇದು ಅರ್ಹತಾ ಸುತ್ತಿನಲ್ಲಿ ಎರಡು ತಂಡಗಳಿಗೂ ಅಂತಿಮ ಪಂದ್ಯವಾಗಿದ್ದು ಗೆಲುವು ಸಾಧಿಸಿದ ತಂಡ ಪ್ರಧಾನ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಐರ್ಲೆಂಡ್ ಹಾಗೂ ನಮೀಬಿಯಾ ತಂಡಗಳು ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ತಲಾ ಒಂದು ಸೋಲು ಹಾಗೂ ಒಂದು ಗೆಲುವು ಕಂಡಿದೆ. ಈ ಮೂಲಕ ಅಂಕ ಗಳಿಕೆಯಲ್ಲಿ ಸಮಬಲದಲ್ಲಿದೆ. ಹೀಗಾಗಿ ಮುಂದಿನ ಹಂತಕ್ಕೇರಲು ಈ ಒಂದ್ಯದ ಗೆಲುವು ಎರಡು ತಂಡಗಳಿಗೂ ಅನಿವಾರ್ಯವಾಗಿದೆ. ಹೀಗಾಗಿ ಸಾಕಷ್ಟು ಪೈಪೋಟಿಯ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ. ಗ್ರೂಫ್ 'ಎ'ಯಲ್ಲಿ ಶ್ರೀಲಂಕಾ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸೂಪರ್ 12 ಹಂತಕ್ಕೆ ಅರ್ಹತೆಯನ್ನು ಈಗಾಗಲೇ ಪಡೆದುಕೊಂಡಿದೆ. ನೆದರ್ಲ್ಯಾಂಡ್ಸ್ ಆಡಿದ ಎರಡು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿದ್ದು ಸೂಪರ್ 12 ಸ್ಪರ್ಧೆಯಿಂದ ಹೊರಬಿದ್ದಿದೆ.

Live ಸ್ಕೋರ್‌ಪಟ್ಟಿ ಹೀಗಿದೆ:

1
51674

ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೆಣೆಸಾಟ ನಡೆಸಿತ್ತು. ಈ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ನಂತರ ಶ್ರೀಲಂಕಾ ವಿರುದ್ಧ 70 ರನ್‌ಗಳ ಅಂತರದ ಭಾರೀ ಸೋಲು ಅನುಭವಿಸಿತು. ಮತ್ತೊಂದೆಡೆ ನಮೀಬಿಯಾ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದರೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಗೆಲವು ಸಾಧಿಸಿತ್ತು.

ಇನ್ನು ಗ್ರೂಪ್ 'ಬಿ'ಯ ಎಲ್ಲಾ ಪಂದ್ಯಗಳು ಮುಕ್ತಾಯವಾಗಿದ್ದು ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದಿರುವ ಸ್ಕಾಟ್ಲೆಂಡ್ ಅಜೇಯ ತಂಡವಾಗಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಆಡಿದ 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ಬಾಂಗ್ಲಾದೇಶ ಕೂಡ ಅರ್ಹತೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಒಮಾನ್ ಹಾಗೂ ಪಪುವಾ ನ್ಯೂಗಿನಿ ಟೂರ್ನಿಯಿಂದ ಹೊರಬಿದ್ದ ಗ್ರೂಫ್ 'ಬಿ'ಯ ಎರಡು ತಂಡಗಳಾಗಿದೆ.

ನಮೀಬಿಯಾ ತಂಡ: ಸ್ಟೀಫನ್ ಬಾರ್ಡ್, ಝೇನ್ ಗ್ರೀನ್ (ವಿಕೆಟ್ ಕೀಪರ್), ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಜೆಜೆ ಸ್ಮಿತ್, ಮೈಕೆಲ್ ವ್ಯಾನ್ ಲಿಂಗನ್, ಜಾನ್ ಫ್ರೈಲಿಂಕ್, ಜಾನ್ ನಿಕೋಲ್ ಲೋಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ಪಿಕ್ಕಿ ಯಾ ಫ್ರಾನ್ಸ್, ಮಿಚೌ ಡು ಪ್ರೀಜ್, ಕಾರ್ಲ್ ಬಿರ್ಕೆನ್‌ಸ್ಟಾಕ್, ಬೆನ್ ಶಿಕೊಂಗೊ

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್, ಕೆವಿನ್ ಒ ಬ್ರಿಯಾನ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಗರೆತ್ ಡೆಲಾನಿ, ಕರ್ಟಿಸ್ ಕ್ಯಾಂಪರ್, ಹ್ಯಾರಿ ಟೆಕ್ಟರ್, ನೀಲ್ ರಾಕ್ (ವಿಕೆಟ್ ಕೀಪರ್), ಮಾರ್ಕ್ ಅಡೈರ್, ಸಿಮಿ ಸಿಂಗ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಲೋರ್ಕನ್ ಟಕರ್, ಬೆಂಜಮಿನ್ ವೈಟ್, ಆಂಡಿ ಮೆಕ್‌ಬ್ರೈನ್, ಜಾರ್ಜ್ ಡೊಕ್ರೆಲ್

1
2-2021

Story first published: Friday, October 22, 2021, 15:25 [IST]
Other articles published on Oct 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+