For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2020: ಮುಂದಿನ ತಿಂಗಳಿಗೆ ನಿರ್ಧಾರ ಮುಂದೂಡಿದ ಐಸಿಸಿ

T20 World Cup 2020: ICC postpones decision to next month

ನವದೆಹಲಿ, ಜೂನ್ 10: ಪುರುಷರ ಟಿ20 ವಿಶ್ವಕಪ್ 2020 ಅನ್ನು ನಡೆಸುವ ಬಗ್ಗೆ ಪ್ರಕಟಿಸಲಿದ್ದ ನಿರ್ಧಾರವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ತಿಂಗಳಿಗೆ ಮುಂದೂಡಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್ ಟೂರ್ನಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಐಸಿಸಿ ಹೇಳಿದೆ.

ಕೊರೊನಾವೈರಸ್ ಕಾರಣದಿಂದಾಗಿ ಸಾವರ್ಜನಿಕ ಆರೋಗ್ಯ ಸುರಕ್ಷಾ ನಿಟ್ಟಿನಲ್ಲಿ ಸೂಕ್ತ ಕ್ರಮಗಳೊಂದಿಗೆ ಟಿ20 ವಿಶ್ವಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಚಿಂತನೆ ಮುಂದುವರೆಸಿದ್ದೇವೆ. ಸ್ಟೇಕ್ ಹೋಲ್ಡರ್ಸ್ ಮತ್ತು ಸರ್ಕಾರದ ಸಲಹೆಯನ್ನೂ ಪಡೆದುಕೊಳ್ಳುತ್ತಿದ್ದೇವೆ ಎಂದು ಐಸಿಸಿ ತಿಳಿಸಿದೆ.

'ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕಿನಿಂದ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಎಲ್ಲಾ ಕ್ರೀಡೆಗಳನ್ನು ನಡೆಸುವ ಬಗ್ಗೆ ಸರಿಯಾದ ನಿರ್ಧಾರ ಪ್ರಕಟಿಸಲು ನಮಗೆ ಅವಕಾಶ ಲಭಿಸುತ್ತಿದೆ. ಪ್ರತಿಯೊಬ್ಬರ ಆರೋಗ್ಯ ಸುರಕ್ಷೆ ನಮ್ಮ ಮೊದಲ ಆದ್ಯತೆಯಾಗಿದೆ. ಉಳಿದಿದ್ದೆಲ್ಲವೂ ಆಮೇಲೆ ಬರುತ್ತದೆ,' ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸವ್ಹ್ನಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ ನಡೆಸುವ ಬಗ್ಗೆ ನಿರ್ಧಾರ ಪ್ರಕಟವಾಗದ ಹೊರತಾಗಿ ಐಪಿಎಲ್ ಬಗ್ಗೆಯೂ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಗಮನಿಸಿ, 13ನೇ ಆವೃತ್ತಿಯ ಐಪಿಎಲ್ ನಡೆಸುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ. ಒಟ್ಟಿನಲ್ಲಿ ಐಪಿಎಲ್ ಭವಿಷ್ಯ, ಟಿ20 ವಿಶ್ವಕಪ್ ಮೇಲೆ ನಿಂತಿದೆ.

Story first published: Thursday, June 11, 2020, 9:59 [IST]
Other articles published on Jun 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+