ಟಿ20 ವಿಶ್ವಕಪ್: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯ

ಸಿಡ್ನಿ: ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ ಮೊಣಕಾಲಿನ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಮೊಣಕಾಲಿನ ಶಸ್ತ್ರ ಚಿಕಿತ್ಸೆಯಿಂದ ಫಿಂಚ್ ಗುಣಮುಖರಾಗಿದ್ದಾರೆ. ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಫಿಂಚ್ ಲಭ್ಯರಿರಲಿದ್ದಾರೆ. ಅಕ್ಟೋಬರ್ 20ರಂದು ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ನಡೆಯಲಿದೆ.
ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಟಿ20 ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ನಡೆಯಲಿವೆ. ಒಟ್ಟು 16 ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿಯ ಅಸಲಿ ಪಂದ್ಯಗಳು ಆರಂಭಗೊಳ್ಳುವುದಕ್ಕೂ ಮುನ್ನ ಹೆಚ್ಚಿನ ತಂಡಗಳಿಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ. ಆಸ್ಟ್ರೆಲಿಯಾ ಕೂಡ ಎರಡು ಅಭ್ಯಾಸ ಪಂದ್ಯ ಆಡಲಿದೆ.

ಆಸ್ಟ್ರೇಲಿಯಾಕ್ಕೆ ಎರಡು ಅಭ್ಯಾಸ ಪಂದ್ಯಗಳು
ಬಲ ಮೊಣಕಾಲಿನ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆ್ಯರನ್ ಫಿಂಚ್ ಕಳೆದ ಆಗಸ್ಟ್‌ನಲ್ಲಿ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್ ಭಾಗವಾಗಿ ಆಸ್ಟ್ರೇಲಿಯಾ ಆಡಲಿದ್ದ ಎರಡು ಅಭ್ಯಾಸ ಪಂದ್ಯಗಳಿಗೆ ಫಿಂಚ್ ಲಭ್ಯತೆ ಅನುಮಾನ ಹುಟ್ಟಿಸಿತ್ತು. ಆದರೆ ಪಿಂಚ್ ಆಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಅಕ್ಟೋಬರ್ 18ರಂದು ನ್ಯೂಜಿಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 20ರಂದು ಭಾರತದ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಫಿಂಚ್, "ಹೌದು, ಆರೋಗ್ಯ ಸ್ಥಿತಿ ಚೆನ್ನಾಗಿದೆ. ಶಸ್ತ್ರ ಚಿಕಿತ್ಸೆ ಮುಗಿದು ನಾಳೆಗೆ 9 ತಿಂಗಳು ಕಳೆಯುತ್ತಿದೆ ಎಂದು ನನಗನ್ನಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಗುಣವಾಗುತ್ತಿರುವುದು ಖುಷಿ ನೀಡಿದೆ. ಟಿ20 ವಿಶ್ವಕಪ್ ಟೂರ್ನಿ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ," ಎಂದಿದ್ದಾರೆ.

ಅಸಲಿ ಪಂದ್ಯಗಳು ಆರಂಭಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳು
* ಅಕ್ಟೋಬರ್ 18ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು
- ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (3.30 pm)
- ಪಾಕಿಸ್ತಾನ vs ವೆಸ್ಟ್ ಇಂಡೀಸ್ (3.30 pm)
- ಆಸ್ಟ್ರೇಲಿಯಾ vs ನ್ಯೂಜಿಲೆಂಡ್ (7.30 pm)
- ಭಾರತ vs ಇಂಗ್ಲೆಂಡ್ (7.30 pm)ಪಂದ್ಯ ನಡೆಯೋದು ಅನುಮಾನ
* ಅಕ್ಟೋಬರ್ 20ಕ್ಕೆ ನಡೆಯುವ ಅಭ್ಯಾಸ ಪಂದ್ಯಗಳು
- ಇಂಗ್ಲೆಂಡ್ vs ನ್ಯೂಜಿಲೆಂಡ್ (3.30 pm)
- ಭಾರತ vs ಆಸ್ಟ್ರೇಲಿಯಾ (3.30 pm)
- ದಕ್ಷಿಣ ಆಫ್ರಿಕಾ vs ಪಾಕಿಸ್ತಾನ (7.30 pm)
- ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ (7.30 pm)

ಟಿ20 ವಿಶ್ವಕಪ್ ಇಣುಕು ನೋಟ
2007ರಲ್ಲಿ ಆರಂಭಗೊಂಡಿರುವ ಟಿ20 ವಿಶ್ವಕಪ್ ಟೂರ್ನಿ ಈವರೆಗೆ ಒಟ್ಟು ಆರು ಆವೃತ್ತಿಗಳನ್ನು ಕಂಡಿದೆ. ಈ ಬಾರಿ ನಡೆಯುತ್ತಿರುವುದು 7ನೇ ಆವೃತ್ತಿ. ಭಾರತ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಗೆದ್ದಿವೆ. ಇದರಲ್ಲಿ ವೆಸ್ಟ್ ಇಂಡೀಸ್ ತಂಡ 2012 ಮತ್ತು 2016ರಲ್ಲಿ ಅಂದರೆ ಕಡೇಯ ಸೀಸನ್‌ನಲ್ಲಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಬಲಿಷ್ಠ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದಿಲ್ಲ. ಭಾರತ ಆರಂಭಿಕ ಆವೃತ್ತಿ ಅಂದರೆ 2007ರಲ್ಲಿ ಪಾಕಿಸ್ತಾನ ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಈ ಬಾರಿ ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕುತೂಹಲ ಮೂಡಿಸಿದೆ. 2020ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಕೋವಿಡ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಅದೂ ಅಲ್ಲದೆ, ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಕೋವಿಡ್ ಭೀತಿಯಿಂದಾಗಿ ಯುಎಇ ಮತ್ತು ಓಮನ್‌ನಲ್ಲಿ ನಡೆಯುತ್ತಿದೆ. ಆದರೆ ಆತಿಥ್ಯ ಈಗಲೂ ಭಾರತದ ಕೈಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications