For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಟಿ20 ಕ್ರಿಕೆಟ್‌ಗೆ ಆಸ್ಟ್ರೇಲಿಯಾ ನೂತನ ಅಧಿಪತಿ: ನ್ಯೂಜಿಲೆಂಡ್ ರನ್ನರ್‌ಅಪ್

T20 world cup 2021: Australia new world champions of t20I, Win by 8 wickets against New zealand

ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದು ವಿಶ್ವ ಚಾಂಪಿಯನ್ ಆಗಿ ಮೆರೆದಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಚುಟುಕು ಮಾದರಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎದುರಾಳಿ ನ್ಯೂಜಿಲೆಂಡ್ ತಂಡವನ್ನು 172 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಸುಲಭವಾಗಿ ಗೆಲುವು ಕಂಡಿತು. ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್‌ಗಳ ಬೃಹತ್ ಅಂತರದಿಮದ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದೆ.

ಸವಾಲಿನ ಮೊತ್ತ ಪೇರಿಸಿದ ನ್ಯೂಜಿಲೆಂಡ್: ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಅದ್ಭುತ ಇನ್ನಿಂಗ್ಸ್‌ನ ಕಾರಣದಿಂದಾಗಿ ಸವಾಲಿನ ಗುರಿ ನೀಡಲು ಸಾಧ್ಯವಾಯಿತು. ಉತ್ತಮ ಆರಂಭ ಪಡೆಯುವಲ್ಲಿ ನ್ಯೂಜಿಲೆಂಡ್ ತಂಡ ವಿಫಲವಾದರು ಕೂಡ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗಪ್ಟಿಲ್ 2ನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವನ್ನು ನೀಡಿದರು. ಮಾರ್ಟಿನ್ ಗಪ್ಟಿಲ್ 28 ರನ್‌ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ನಾಯಕ ಕೇನ್ ವಿಲಿಯಮ್ಸನ್ ಅಬ್ಬರದಾಟ ಮುಂದುವರಿದಿತ್ತು. ಮೂರನೇ ವಿಕೆಟ್‌ಗೆ ಗ್ಲೆನ್ ಫಿಲಿಪ್ಸ್‌ ಜೊತೆಗೆ ಸೇರಿಕೊಂಡು 68 ರನ್‌ಗಳ ಜೊತೆಯಾವನ್ನು ಕೇನ್ ವಿಲಿಯಮ್ಸನ್ ನೀಡಿದರು. 18 ಎಸೆತಗಳಲ್ಲಿ 18 ರನ್‌ಗಳಿಸಿದ ಫಿಲಿಪ್ಸ್ ಬಳಿಕ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.

ಭರ್ಜರಿ ಆಟವಾಡಿದ ಕೇನ್ ವಿಲಿಯಮ್ಸನ್: ಫಿಲಿಪ್ಸ್ ವಿಕೆಟ್ ಕಳೆದುಕೊಂಡ ಬಳಿಕ ಅದೇ ಓವರ್‌ನಲ್ಲಿ ಕೇನ್ ವಿಲಿಯನ್ಸನ್ ಕೂಡ ಔಟಾದರು. ಆದರೆ ಅಷ್ಟರಲ್ಲಾಗಲೇ ಕೇನ್ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದ್ದರು. 48 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ ಭರ್ಜರಿ 85 ರನ್‌ ಗಳಸಿದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿ ಸೇರಿದೆ. 177.08ರ ಸ್ಟ್ರೈಕ್‌ರೇಟ್‌ನಲ್ಲಿ ಕೇನ್ ಬ್ಯಾಟ್ ಬೀಸಿದ್ದಾರೆ. ನಂತರ ನೀಶಮ್ 13 ರನ್‌ಗಳಿಸಿದರೆ ಸೈಫರ್ಟ್ 8 ರನ್‌ಗಳಿಸಿ ಅಜೇಯವಾಗಿ ಉಳಿದರು.

ನ್ಯೂಜಿಲೆಂಡ್ ತಂಡ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೋನ್ ಫಿಂಚ್ ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲಿಯೇ ಆಘಾತ ನೀಡಿತ್ತು ಕಿವೀಡ್ ಪಡೆ. ಆದರೆ ಬಳಿಕ ನ್ಯೂಜಿಲೆಂಡ್ ತಂಡಕ್ಕೆ ಹೇಳಿಕೊಳ್ಳಯುವಂತಾ ಯಶಸ್ಸು ದೊರೆಯಲೇ ಇಲ್ಲ. ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ 92 ರನ್‌ಗಳ ಜೊತೆಯಾಟವನ್ನು ನೀಡಿದರು. 38 ಎಸೆತಗಳ್ನನು ಎದುರಿಸಿದ ಡೇವಿಡ್ ವಾರ್ನರ್ 53 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಪರವಾಗಿ ಮತ್ತೊಂದು ಅದ್ಭುತವಾದ ಇನ್ನಿಂಗ್ಸ್ ನೀಡಿದರು.

ಈ ಜೋಡಿ ಬೇರ್ಪಟ್ಟ ನಂತರ ಶಾನ್ ಮಾರ್ಶ್‌ಗೆ ಮ್ಯಾಕ್ಸ್‌ವೆಲ್ ಸಾಥ್ ನೀಡಿದರು. ನ್ಯೂಜಿಲೆಂಡ್ ದಾಳಿಯನ್ನು ಸಮರ್ಥವಚಾಗಿ ಎದುರಿಸಿದ ಈ ದಾಂಡಿಗರು ಕಿವೀಸ್‌ಗೆ ಮತ್ತೆ ಯಾವುದೇ ಅವಕಾಶವಿಲ್ಲದಂತೆ ಪ್ರದರ್ಶನ ನೀಡಿದರು. 50 ಎಸೆತಗಳ್ನನು ಎದುರಿಸಿದ ಶಾನ್ ಮಾರ್ಶ್ 77 ರನ್ ಬಾರಿಸಿ ಅಜೇಯವಾಗುಳಿದರೆ ಮ್ಯಾಕ್ಸ್‌ವೆಲ್ 28 ರನ್‌ಗಳಿಸಿ ಅಜೇಯವಾಗಿ ಉಳಿದರು. ಈ ಮೂಲಕ ಆಸ್ಟ್ರೇಲಿಯಾ 8 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್

Story first published: Monday, November 15, 2021, 10:07 [IST]
Other articles published on Nov 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+