T20 World cup 2021: 4 ದೇಶಗಳ ಆಕರ್ಷಕ ಜೆರ್ಸಿ ಅನಾವರಣ

ಅಬುಧಾಬಿ: ಮುಂಬರಲಿರುವ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಮುಕ್ತಾಯವಾಗುತ್ತಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಐಪಿಎಲ್ ಟೂರ್ನಿ ಅಕ್ಟೋಬರ್ 15ರಂದು ಕೊನೆಗೊಂಡರೆ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.
ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಸಂಬಂಧಿಸಿ ನಾಲ್ಕು ದೇಶಗಳು ತಮ್ಮ ಆಕರ್ಷಕ ಜೆರ್ಸಿ ಅನಾವರಣಗೊಳಿಸಿವೆ. ಅಕ್ಟೋಬರ್ 12ರ ಮಂಗಳವಾರದ ವೇಳೆ ಐರ್ಲೆಂಡ್, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ದೇಶಗಳು ಟಿ20 ವಿಶ್ವಕಪ್‌ಗಾಗಿ ತಮ್ಮ ನೂತನ ಜರ್ಸಿ ಬಿಡುಗಡೆ ಮಾಡಿವೆ.
ಐರ್ಲೆಂಡ್ ದೇಶದ ವಿಶ್ವಕಪ್ ಜೆರ್ಸಿ ತಿಳಿ ಹಸಿರು ಮತ್ತು ಕಡು ಹಸಿರು ಬಣ್ಣದಲ್ಲಿದ್ದರೆ, ನಮೀಬಿಯಾ ದೇಶದ ಆಟಗಾರರು ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ವಿನ್ಯಾಸದ ಜೆರ್ಸಿ ಧರಿಸಲಿದ್ದಾರೆ. ಸ್ಕಾಟ್ಲೆಂಡ್ ದೇಶದ ಆಟಗಾರರು ತಿಳಿ ನೇರಳೆ ಮತ್ತು ಕಡು ನೇರಳೆ ಬಣ್ಣದ ಜೆರ್ಸಿ ಧರಿಸಲಿದ್ದಾರೆ.
ನಾಲ್ಕು ದೇಶಗಳಲ್ಲಿ ಶ್ರೀಲಂಕಾ ದೇಶ ಎರಡು ಬಣ್ಣಗಳಲ್ಲಿ ವಿಭಿನ್ನ ಜೆರ್ಸಿ ಹೊರ ತಂದಿದೆ. ಇದರಲ್ಲಿ ಒಂದು ಜೆರ್ಸಿಯ ಬಣ್ಣ ನೀಲಿ ಮತ್ತು ಹಳದಿ ಬಣ್ಣದ ವಿನ್ಯಾಸ ಹೊಂದಿದ್ದರೆ, ಇನ್ನೊಂದು ಜೆರ್ಸಿ ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದಲ್ಲಿ ರಚಿಸಲ್ಪಟ್ಟಿದೆ.
ಅದ್ದೂರಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 16 ದೇಶಗಳು ಪಾಲ್ಗೊಳ್ಳಲಿವೆ. ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-1 ಮತ್ತು ಗ್ರೂಪ್-2 ಹೀಗೆ ಒಟ್ಟು ನಾಲ್ಕು ಗ್ರೂಪ್‌ಗಳ ಮೂಲಕ ಟೂರ್ನಿ ನಡೆಯಲಿದೆ. ಇದರಲ್ಲಿ ಭಾರತ ಗ್ರೂಪ್-2ರಲ್ಲಿ ಇರಲಿದೆ. ಅಂದ್ಹಾಗೆ ಅಕ್ಟೋಬರ್ 13ರ ಬುಧವಾರ ಟೀಮ್ ಇಂಡಿಯಾದ ಜೆರ್ಸಿ ಬಿಡುಗಡೆಯಾಗಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications