ಟಿ20 ವಿಶ್ವಕಪ್ 2021: ಒಮನ್ vs ಸ್ಕಾಟ್ಲೆಂಡ್ ಪಂದ್ಯದ ಟಾಸ್ ವರದಿ, ಪ್ಲೇಯಿಂಗ್ XI ಮತ್ತು ಲೈವ್‌ ಸ್ಕೋರ್

ಸುಮಾರು 5 ವರ್ಷಗಳ ನಂತರ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮರಳಿ ಬಂದಿದ್ದು ಕಳೆದ ಭಾನುವಾರದಿಂದ ( ಅಕ್ಟೋಬರ್ 17 ) ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗುವುದರ ಮೂಲಕ ಟೂರ್ನಿ ಚಾಲನೆ ಪಡೆದುಕೊಂಡಿದೆ.

ಇನ್ನು ಪ್ರಸಕ್ತ ಸಾಲಿನ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ 10ನೇ ಪಂದ್ಯದಲ್ಲಿ ಇಂದು ( ಅಕ್ಟೋಬರ್ 21 ) ಬಿ ಗುಂಪಿನ ತಂಡಗಳಾದ ಒಮನ್ ಮತ್ತು ಸ್ಕಾಟ್ಲೆಂಡ್ ಸೆಣಸಾಟ ನಡೆಸಲಿವೆ. ಈ ಪಂದ್ಯವು ಒಮನ್ ನಗರದ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದಿರುವ ಒಮನ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.

ಸ್ಕಾಟ್ಲೆಂಡ್ ಪ್ಲೇಯಿಂಗ್ ಇಲೆವೆನ್: ಜಾರ್ಜ್ ಮುನ್ಸೆ, ಕೈಲ್ ಕೊಯೆಟ್ಜರ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್‌), ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್

ಒಮನ್ ಪ್ಲೇಯಿಂಗ್ ಇಲೆವೆನ್: ಅಕಿಬ್ ಇಲ್ಯಾಸ್, ಜತೀಂದರ್ ಸಿಂಗ್, ಕಶ್ಯಪ್ ಪ್ರಜಾಪತಿ, ಜೀಶನ್ ಮಕ್ಸೂದ್ (ನಾಯಕ), ಖಾವರ್ ಅಲಿ, ನಸೀಮ್ ಖುಷಿ, ಸೂರಜ್ ಕುಮಾರ್ (ವಿಕೆಟ್ ಕೀಪರ್‌), ಸಂದೀಪ್ ಗೌಡ್, ಮೊಹಮ್ಮದ್ ನದೀಮ್, ಫಯಾಜ್ ಬಟ್, ಬಿಲಾಲ್ ಖಾನ್

ಒಮನ್ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವಿನ ಈ ಅರ್ಹತಾ ಸುತ್ತಿನ ಪಂದ್ಯದ ಲೈವ್ ಸ್ಕೋರ್ ಮುಂದೆ ಇದೆ..

ರಿಷಬ್ ಪಂತ್ ಗೆ ಧೋನಿಯಿಂದ ಸಖತ್ ಕ್ಲಾಸ್:ವಿಡಿಯೋ ವೈರಲ್ | Oneindia Kannada
1
51673

For Quick Alerts
ALLOW NOTIFICATIONS
For Daily Alerts
Story first published: Thursday, October 21, 2021, 19:37 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X