ಟಿ20 ವಿಶ್ವಕಪ್ 2021: ಶ್ರೀಲಂಕಾ vs ನೆದರ್ಲೆಂಡ್ಸ್ ಟಾಸ್ ವರದಿ, ಪ್ಲೇಯಿಂಗ್ XI ಮತ್ತು ಲೈವ್ ಸ್ಕೋರ್

ಅಕ್ಟೋಬರ್ 17ರ ಭಾನುವಾರದಿಂದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಚಾಲನೆ ಪಡೆದುಕೊಂಡಿದ್ದು ಅರ್ಹತಾ ಸುತ್ತಿನ ಪಂದ್ಯಗಳು ಜರುಗುತ್ತಿವೆ. ಇಂದು ( ಅಕ್ಟೋಬರ್ 22 ) ಟೂರ್ನಿಯ ಅರ್ಹತಾ ಸುತ್ತು ಮುಗಿಯಲಿದ್ದು ನಾಳೆಯಿಂದ ( ಅಕ್ಟೋಬರ್ 23 ) ಸೂಪರ್ 12 ಸುತ್ತು ಆರಂಭಗೊಳ್ಳಲಿದೆ.
ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯ ಇಂದು ನಡೆಯಲಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವಿನ ಈ ಪಂದ್ಯ ಟೂರ್ನಿಯ 12ನೇ ಪಂದ್ಯವಾಗಿದ್ದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಎದುರಾಳಿ ನೆದರ್ಲೆಂಡ್ಸ್ ತಂಡಕ್ಕೆ ನೀಡಿದೆ.
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಂಕ, ಕುಸಲ್ ಪೆರೇರಾ (ವಿಕೆಟ್ ಕೀಪರ್), ಚರಿತ್ ಅಸಲಂಕ, ಅವಿಷ್ಕಾ ಫೆರ್ನಾಂಡೊ, ವಾನಿಂದು ಹಸರಂಗ, ಭಾನುಕ ರಾಜಪಕ್ಸೆ, ದಾಸುನ್ ಶನಕ (ನಾಯಕ), ಚಾಮಿಕ ಕರುಣರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷ್ಣ ಮತ್ತು ಲಹಿರು ಕುಮಾರ
ನೆದರ್ಲೆಂಡ್ಸ್ ಪ್ಲೇಯಿಂಗ್ ಇಲೆವೆನ್: ಮ್ಯಾಕ್ಸ್ ಒಡೌಡ್, ಸ್ಟೀಫನ್ ಮೈಬರ್ಗ್, ಬೆನ್ ಕೂಪರ್, ಕಾಲಿನ್ ಅಕೆರ್ಮನ್, ಬಾಸ್ ಡಿ ಲೀಡೆ, ಸ್ಕಾಟ್ ಎಡ್ವರ್ಡ್ಸ್ (ವಿಕೆಟ್ ಕೀಪರ್), ರಯಾನ್ ಟೆನ್ ಡೋಸ್ಚೇಟ್, ಪೀಟರ್ ಸೀಲಾರ್ (ನಾಯಕ), ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್, ಬ್ರಾಂಡನ್ ಗ್ಲೋವರ್
ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ಲೈವ್ ಸ್ಕೋರ್ ಇಲ್ಲಿದೆ:
ಇನ್ನು ಶ್ರೀಲಂಕಾ ತಂಡ ಈಗಾಗಲೇ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದು, ನೆದರ್ಲೆಂಡ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದು ಈ ಎರಡೂ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯ ಶ್ರೀಲಂಕಾ ತಂಡದ ಆಟಗಾರರಿಗೆ ಒಂದು ರೀತಿಯ ಅಭ್ಯಾಸ ಪಂದ್ಯ ಎಂದೇ ಹೇಳಬಹುದು. ಇನ್ನು ಇದಕ್ಕೂ ಮುನ್ನ ನಡೆದ ಐರ್ಲೆಂಡ್ ಮತ್ತು ನಮೀಬಿಯಾ ತಂಡಗಳ ನಡುವಿನ ಅರ್ಹತಾ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ನಮೀಬಿಯಾ ತಂಡ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸೂಪರ್ 12 ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications