For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಕಿವೀಸ್ ಬೌಲಿಂಗ್ ದಾಳಿಗೆ ಭಾರತ ತತ್ತರ: ಅಲ್ಪ ಮೊತ್ತದ ಗುರಿ ನೀಡಿದ ಕೊಹ್ಲಿ ಪಡೆ

T20 World Cup 2021, Match 28: India set 111 runs target to New Zealand

ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ಆಘಾತ ಅನುಭವಿಸಿದೆ. ಟಾಸ್ ಸೋಲು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಒದ ವಿರಾಟ್ ಕೊಹ್ಲಿ ಬಳಗ ನ್ಯೂಜಿಲೆಂಡ್ ತಂಡದ ಬೌಲರ್‌ಗಳ ಎದುರು ಕೇವಲ 110 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ. ಭಾರತದ ಅಗ್ರ ಬ್ಯಾಟಿಂಗ್ ಪಡೆ ಮತ್ತೊಮ್ಮೆ ವಿಫಲವಾಗಿದ್ದು ತಂಡ ಆಘಾತ ಅನುಭವಿಸಲು ಕಾರಣವಾಗಿದೆ. ಒಟ್ಟಾಋಎಯಾಗಿ ನ್ಯೂಜಿಲೆಂಡ್‌ನ ಬೌಲಿಂಗ್ ಬಳಗ ಭಾರತದ ಬ್ಯಾಟಿಂಗ್ ಪಡೆಯ ವಿರುದ್ಧ ಸಂಪೊಊರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.

ಭಾರತ ಹಾಗೂ ನ್ಯೂಜಿಲೆಂಡ್ ಈ ಎರಡು ತಂಡಗಳಿಗೂ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಸೆಮಿಫೈನಲ್ ಹಂತಕ್ಕೇರಲು ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡು ತಂಡಗಳಿಗೂ ಅಗತ್ಯವಾಗಿದೆ. ಆದರೆ ಭಾರತೀಯ ದಾಂಡಿಗರ ವೈಫಲ್ಯ ಕಿವೀಸ್ ಪಾಳಯಕ್ಕೆ ಸುಲಭ ಸವಾಲು ಪಡೆಯುವಂತೆ ಮಾಡಿದೆ.

ಟೀಮ್ ಇಂಡಿಯಾ ಪರವಾಗಿ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲೇ ಇಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ರಾಹುಲ್ ಜೋಡಿ ಕೇವಲ 11 ರನ್‌ಗಳ ಜೊತೆಯಾಟ ನೀಡಿದರು. 8 ಎಸೆತ ಎದುರಿಸಿ ಕೇವಲ 4 ರನ್‌ಗಳಿಸಿದ ಇಶಾನ್ ಕಿಶನ್ ನಿರಾಸೆ ಮೂಡಿಸಿದರು ಟ್ರೆಂಟ್ ಬೋಲ್ಟ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರೋಹಿತ್ ಶರ್ಮಾ 14 ರನ್‌ಗಳಿಸಿ ಇಶ್ ಸೋಧಿ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ನಾಯಕ ವಿರಾಟ್ ಕೊಹ್ಲಿ ಕೂಡ 9 ರನ್‌ಗಳಿಸಿ ಇಶ್ ಸೋಧಿ ಎಸೆತದಕ್ಕೆ ಔಟಾಗಿ ಫೆವಿಲಿಯನ್ ಸೇರಿದರು.

ನಂತರ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿಯಿಂದಲೂ ಉತ್ತಮ ಜೊತೆಯಾಟ ಬರಲಿಲ್ಲ. 19 ಎಸೆತ ಎದುರಿಸಿ 12 ರನ್‌ಗಳಿಸಿದ ಪಂತ್ ಮಿಲ್ನೆ ಎಸೆತದಲ್ಲಿ ಔಟಾದರು. ಬಳಿಕ ಹಾರ್ದಿಕ್ ಪಾಂಡ್ಯ ಟ್ರೆಂಟ್ ಬೋಲ್ಟ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಔಟಾಗುವ ವೇಳೆಗೆ ಪಾಂಡ್ತ ಖಾತೆಯಲ್ಲಿದ್ದಿದ್ದು 23 ರನ್. ಶಾರ್ದೂಲ್ ಠಾಕೂರ್ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿ ಫೆವಿಲಿಯನ್ ಸೇರಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ 19 ಎಸೆತಗಳಲ್ಲಿ 26 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 110 ರನ್‌ಗಳಿಸಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಿವೀಸ್ ಪಡೆಯ ಪ್ರಧಾನ ಬೌಲಿಂಗ್ ಅಸ್ತ್ರವಾದ ಟ್ರೆಂಟ್ ಬೋಲ್ಟ್ ಮೂರು ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು. ಸ್ಪಿನ್ನರ್ ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು. ಇನ್ನು ಟಿಮ್ ಸೌಥಿ ಹಾಗೂ ಆಡಂ ಮಿಲ್ನೆ ಈ ತಲಾ 1 ವಿಕೆಟ್ ಪಡೆದುಕೊಂಡಿದ್ದರೆ

ಭಾರತ ಪ್ಲೇಯಿಂಗ್ XI: ಇಶಾನ್ ಕಿಶನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ಬೆಂಚ್: ರವಿಚಂದ್ರನ್ ಅಶ್ವಿನ್, ರಾಹುಲ್ ಚಹಾರ್, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್

ನ್ಯೂಜಿಲೆಂಡ್ ಪ್ಲೇಯಿಂಗ್ XI : ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಜೇಮ್ಸ್ ನೀಶಮ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್

ಬೆಂಚ್: ಕೈಲ್ ಜೇಮಿಸನ್, ಟಾಡ್ ಆಸ್ಟಲ್, ಮಾರ್ಕ್ ಚಾಪ್ಮನ್, ಟಿಮ್ ಸೀಫರ್ಟ್

Story first published: Sunday, October 31, 2021, 21:43 [IST]
Other articles published on Oct 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+