ಬುರ್ಜ್ ಖಲೀಫಾದಲ್ಲಿ ಭಾರತದ ನೂತನ ಜೆರ್ಸಿ ಪ್ರದರ್ಶನ: ವಿಡಿಯೋ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಕೊನೇ ಕ್ಷಣದಲ್ಲಿದೆ. ಅಕ್ಟೋಬರ್ 15ರಂದು ಫೈನಲ್ ಪಂದ್ಯದೊಂದಿಗೆ ಐಪಿಎಲ್ 2021ರ ಆವೃತ್ತಿ ಕೊನೆಗೊಳ್ಳಲಿದೆ. ಐಪಿಎಲ್ ಮುಗಿಯುತ್ತಲೇ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಐಪಿಎಲ್ ನಡೆಯುತ್ತಿರುವ ಅದೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ವಿಶ್ವಕಪ್ ಪ್ರಾರಂಭಗೊಳ್ಳಲಿದೆ. ಪ್ರತಿಷ್ಠಿತ ಟೂರ್ನಿಗಾಗಿ ಟೀಮ್ ಇಂಡಿಯಾ ಸಜ್ಜಾಗಿದೆ.
ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ನೂತನ ಜೆರ್ಸಿ ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಕಿಟ್ ಸ್ಪಾನ್ಸರ್ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಜಂಟಿಯಾಗಿ ಭಾರತದ ನೂತನ ಜೆರ್ಸಿಯನ್ನು ಬುಧವಾರ ಬಿಡುಗಡೆ ಮಾಡಿತ್ತು.
ಟಿಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆಯಾದ ಬೆನ್ನಲ್ಲೇ ದುಬೈಯಲ್ಲಿರುವ ವಿಶ್ವದ ಅತೀ ಎತ್ತರದ ಕಟ್ಟಡವೆಂದು ಗುರುತಿಸಿಕೊಳ್ಳಲಾದ ಬುರ್ಜ್ ಖಲೀಫಾದಲ್ಲಿ ಭಾರತದ ಜೆರ್ಸಿಯ ಚಿತ್ರ ಪ್ರದರ್ಶಿಸಲ್ಪಟ್ಟಿದೆ. ಅಕ್ಟೋಬರ್ 14ರಂದು ಭಾರತದ ನೂತನ ಜೆರ್ಸಿಯ ವಿಡಿಯೋ ಜುರ್ಜ್ ಖಲೀಫಾದಲ್ಲಿ ಪ್ರದರ್ಶನಗೊಂಡಿದೆ.
ಈ ಸಂಗತಿಯನ್ನು ಭಾರತದ ಕಿಟ್ ಸ್ಪಾನ್ಸರ್ ಎಂಪಿಎಲ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದೆ. "ಇದೇ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದ ಜೆರ್ಸಿ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲ್ಪಟ್ಟಿದೆ. ಅಭಿಮಾನಿಗಳ ಬೆಂಬಲದಿಂದ ಸ್ಫೂರ್ತಿ ಪಡೆದಿರುವ ಮಿಲಿಯನ್ ಚಿಯರ್ಸ್ ಜೆರ್ಸಿ ಈಗ ಎತ್ತರಕ್ಕೇರಿದೆ," ಎಂದು ಎಂಪಿಎಲ್ ಟ್ವಿಟರ್ ವಿಡಿಯೋ ಜೊತೆ ಬರೆದುಕೊಂಡಿದೆ.
ಈ ಬಾರಿಯ ಭಾರತದ ಜೆರ್ಸಿ ಕಡು ನೀಲಿ ಬಣ್ಣದ್ದಾಗಿದ್ದು, ಜೆರ್ಸಿ ಮಧ್ಯೆ ಅಲ್ಲಲ್ಲಿ ತಿಳಿನೀಲಿ ಬಣ್ಣದ ವಿನ್ಯಾಸದ ಗೆರೆಗಳಿವೆ. ಹಿಂದಿನ ಜೆರ್ಸಿಗಳಿಗೆ ಹೋಲಿಸಿದರೆ ನೂತನ ಜೆರ್ಸಿ ಭಿನ್ನವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಬಹುತೇಕ ಎಲ್ಲಾ ತಂಡಗಳು ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications