ಟಿ20 ವಿಶ್ವಕಪ್, ಮೊದಲ ಪಂದ್ಯ, ಶ್ರೀಲಂಕಾ vs ನಮೀಬಿಯಾ: Live ಸ್ಕೋರ್, ಟಾಸ್ ರಿಪೋರ್ಟ್

ಚುಟುಕು ವಿಶ್ವಕಪ್‌ಗೆ ಆಸ್ಟ್ರೇಲಿಯಾದಲ್ಲಿ ಇಂದು ಚಾಲನೆ ದೊರೆತಿದೆ. ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿದ್ದು ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಎಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ನಮೀಬಿಯಾ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಈ ಪಂದ್ಯ ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಯಾಗುತ್ತಿದೆ.
ಇನ್ನು ಈ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದ್ದರೂ ವಿಶ್ವಕಪ್‌ನಲ್ಲಿ ಶ್ರೀಲಂಕಾ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವುದು ವಿಪರ್ಯಾಸ. ಆದರೆ ಈ ವರ್ಷ ಶ್ರೀಲಂಕಾ ತಂಡದ ಒಟ್ಟಾರೆ ಪ್ರದರ್ಶನ ಗಮನಾರ್ಹವಾಗಿದ್ದು ವಿಶ್ವಕಪ್‌ನಲ್ಲಿಯೂ ಮಿಂಚುವ ವಿಶ್ವಾಸವನ್ನಿಟ್ಟುಕೊಂಡಿದೆ. ಇನ್ನು ನಮೀಬಿಯಾ ತಂಡ ಕಳೆದ ವಿಶ್ವಕಪ್‌ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಈ ಬಾರಿಯೂ ಅಂಥಾದ್ದೇ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡು ಕಣಕ್ಕಿಳಿಯುತ್ತಿದೆ.
Live ಸ್ಕೋರ್‌ಕಾರ್ಡ್ ಹೀಗಿದೆ

ಅರ್ಹತಾ ಸುತ್ತಿನಲ್ಲಿ 8 ತಂಡಗಳು
ಅರ್ಹತಾ ಸುತ್ತಿನಲ್ಲಿರುವ ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ತಮ್ಮ ಗುಂಪಿನಲ್ಲಿರುವ ಇತರ ಮೂರು ತಂಡಗಳ ಜೊತೆಗೆ ಒಂದೊಂದು ಪಂದ್ಯಗಳನ್ನು ಆಡಿ ಮುಂದಿನ ಹಂತಕ್ಕೇರುವ ಪ್ರಯತ್ನ ನಡೆಸಲಿದೆ. ಅರ್ಹತಾ ಸುತ್ತಿನಲ್ಲಿ ನಮೀಬಿಯಾ, ಶ್ರೀಲಂಕಾ, ನೆದರ್ಲೆಂಡ್ಸ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಗ್ರೂಪ್ ಎ ನಲ್ಲಿ ಸ್ಪರ್ಧಿಸಲಿದ್ದರೆ ಐರ್ಲೆಂಡ್, ಸ್ಕಾಟ್‌ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಗ್ರೂಪ್‌ಬಿನಲ್ಲಿವೆ. ಈ ಎಂಟು ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಎರಡು ಗುಂಪುಗಳಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡ ತಲಾ ಎರಡು ತಂಡಗಳು ಮಾತ್ರ ಮುಂದಿನ ಹಂತಕ್ಕೇರಲು ಯಶಸ್ವಿಯಾಗಲಿದೆ.

ಶ್ರೀಲಂಕಾ ಆಡುವ ಬಳಗ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ
ಬೆಂಚ್: ಪ್ರಮೋದ್ ಮದುಶನ್, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ, ಚರಿತ್ ಅಸಲಂಕಾ

ನಮೀಬಿಯಾ ಆಡುವ ಬಳಗ
ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಝೇನ್ ಗ್ರೀನ್ (ವಿಕೆಟ್ ಕೀಪರ್), ದಿವಾನ್ ಲಾ ಕಾಕ್, ಮೈಕೆಲ್ ವ್ಯಾನ್ ಲಿಂಗೆನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ಬೆಂಚ್: ಪಿಕ್ಕಿ ಯಾ ಫ್ರಾನ್ಸ್, ರೂಬೆನ್ ಟ್ರಂಪೆಲ್ಮನ್, ತಂಗೇನಿ ಲುಂಗಮೆನಿ, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications