ಬಾಂಗ್ಲಾದೇಶ vs ಜಿಂಬಾಬ್ವೆ: ರೋಚಕ ಪಂದ್ಯದಲ್ಲಿ ಹೋರಾಡಿ ಸೋತ ಜಿಂಬಾಬ್ವೆ

ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ರೋಚಕ ಫಲಿತಾಂಶಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳ ಸೆಣೆಸಾಟದಲ್ಲಿ ಎರಡು ತಂಡಗಳು ಕೂಡ ಅದ್ಭುತ ಹೋರಾಟ ಪ್ರದರ್ಶಿಸಿದ್ದು ಅಂತಿಮವಾಗಿ ಜಿಂಬಾಬ್ವೆ ತಂಡ ಬಾಂಗ್ಲಾದೇಶಕ್ಕೆ ಶರಣಾಗಿದೆ. ಅಂತಿಮ ಓವರ್‌ನಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶವಿದ್ದರೂ ಜಿಂಬಾಬ್ವೆ ತಂಡ ಎಡವಿದ ಕಾರಣ ಕೇವಲ 3 ರನ್‌ಗಳಾ ಅಂತರದಿಂದ ಸೋಲು ಅನುಭವಿಸಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ ಭರ್ತಿ 150 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಗಿ ಸೋಲಿನ ದವಡೆಗೆ ಸಿಲುಕಿದ್ದರು ಕೂಡ ಸೀನ್ ವಿಲಿಯಮ್ಸ್ ಅದ್ಭುತ ಹೋರಾಟದ ಫಲವಾಗಿ ಚೇತರಿಸಿಕೊಂಡು ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಾಂಗ್ಲಾ ಮೇಲುಗೈ ಸಾಧಿಸಿದ್ದಯ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಸಾಧಾರಣ ಮೊತ್ತಗಳಿಸಿದ ಬಾಂಗ್ಲಾದೇಶ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ಆದರೆ ಆರಂಭಿಕ ಆಟಗಾರ ನಜ್ಮುಲ್ ಹುಸೈನ್ ಶಂತೋ ಅವರ ಅದ್ಭುತ ಪ್ರದರ್ಶನ ಬಾಂಗ್ಲಾದೇಶ ತಂಡಕ್ಕೆ ಆಸರೆಯಾಯಿತು. ಇತರ ಆಟಗಾರರಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಾರದಿದ್ದರೂ ಕೆಲ ಸಾಧಾರಣ ಜೊತೆಯಾಟಗಳಲ್ಲಿ ಭಾಗಿಯಾಗಿ ತಂಡದ ಮೊತ್ತ 150ರ ಗಡಿ ತಲುಪಲು ನಜ್ಮುಲ್ ಹುಸೈನ್ ಕಾರಣವಾದರು. 55 ಎಸೆತಗಳನ್ನು ಎದುರಿಸಿದ ನಜ್ಮುಲ್ ಹುಸೈನ್ ಶಂತೋ 71 ರನ್ ಬಾರಿಸಿದ್ದಾರೆ. ಅವರಿಗೆ 23 ರನ್‌ಗಳಿಸಿದ ನಾಯಕ ಶಕೀಬ್ ಅಲ್ ಹಸನ್ ಹಾಗೂ ಆಫಿಫ್ ಹುಸೈನ್ 29 ರನ್‌ಗಳಿಸಿ ಸಾರ್ಥ ನೀಡಿದರು. ಇನ್ನು ಜಿಂಬಾಬ್ವೆ ಪರವಾಗಿ ರಿಚರ್ಡ್ ಎನ್‌ಗರವ ಮುಜರಬಾನಿ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರೆ ಸಿಕಂದರ್ ರಾಜಾ ಹಾಗೂ ಸೀನ್ ವಿಲಿಯಮ್ಸ ತಲಾ ಒಂದು ವಿಕೆಟ್ ಕಿತ್ತು ಮಿಂಚಿದ್ದಾರೆ.

ಆರಂಭಿಕ ಆಘಾತ ಅನುಭವಿಸಿದ ಜಿಂಬಾಬ್ವೆ
ಇನ್ನು 151 ರನ್‌ಗಳನ್ನು ಬೆನ್ನಟ್ಟಲು ಆರಂಭಿಸಿದ ಜಿಂಬಾಬ್ವೆ ತಂಡದ ಅಗ್ರ ಕ್ರಮಾಂಕ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. 35 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಜಿಂಬಾಬ್ವೆ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ಪ್ರಮುಖ ಆಟಗಾರನಾದ ಸಿಕಂದರ್ ರಾಜಾ ಕೂಡ ಈ ಹಂತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರಿಂದಾಗಿ ಜಿಂಬಾಬ್ವೆ ತಂಡದ ಹೋರಾಟ ಇಲ್ಲಿಗೆ ಅಂತ್ಯವಾಯಿತು ಎಂದೇ ಬಹುತೇಕರು ಭಾವಿಸಿದ್ದರು. ಆದರೆ ಅದಾದ ನಂತರ ಸೀನ್ ವಿಲಿಯಮ್ಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡವನ್ನು ನಿಧಾನವಾಗಿ ಸಂಕಷ್ಟದಿಂದ ಪಾರು ಮಾಡುತ್ತಾ ಮುನ್ನುಗ್ಗಿದರು. ಆದರೆ ತಂಡದ ಮೊತ್ತ 136 ರನ್ ಆಗಿದ್ದಾಗ ಮಿಲಿಯಮ್ಸ್ ಔಟ್ ಆದರು. 42 ಎಸೆತಗಳಲ್ಲಿ 64 ರನ್‌ಗಳಿಸಿ ಅದ್ಭುತ ಹೋರಾಟ ಪ್ರದರ್ಶಿಸಿದರು.

ಅಂತಿಮ ಓವರ್‌ನಲ್ಲಿ ರೋಚಕ ತಿರುವು
ನಂತರ ಜಿಂಬಾಬ್ವೆ ಹೋರಾಟ ಮುಂದುವರಿಯಿತು. ಅಂತಿಮ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಈ ಮೂಲಕ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶವಿತ್ತು. ಇಂಥಾ ಸಂದರ್ಭದಲ್ಲಿ ಜಿಂಬಾಬ್ವೆ ಗೆಲುವಿನ ಅತ್ಯಂತ ಸನಿಹಕ್ಕೆ ಬಂದಿದ್ದರೂ ಗೆಲುವು ದಕ್ಕಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿತು. ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ ಸ್ಟಂಪ್ ಔಟ್ ಮಾಡಿದ್ದ ಎಸೆತ ನೋಬಾಲ್ ಆಗಿದ್ದ ಕಾರಣ ಕೊನೆಯ ಎಸೆತದಲ್ಲಿ 4 ರನ್‌ಗಳಿಸುವ ಸವಾಲು ಜಿಂಬಾಬ್ವೆಗೆ ಮುಂದಿತ್ತು. ಆದರೆ ಇದನ್ನು ಗಳಿಸುವಲ್ಲಿ ವಿಫಲವಾದ ಕಾರಣ ಜಿಂಬಾಬ್ವೆ 3 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಇತ್ತಂಡಗಳ ಆಡುವ ಬಳಗ
ಜಿಂಬಾಬ್ವೆ ಆಡುವ ಬಳಗ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಬ್ರಾಡ್ ಇವಾನ್ಸ್, ಬ್ಲೆಸಿಂಗ್ ಮುಜರಬಾನಿ
ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್(ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications