Ind vs Eng: ಪ್ರಮುಖ ಬೌಲರ್ ಬದಲಿಗೆ ಈತನಿಗೆ ಅವಕಾಶ ನೀಡಲು ಮುಂದಾದ ಇಂಗ್ಲೆಂಡ್

ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಗಾಯದಿಂದ ಹೊರಗುಳಿಯಲಿದ್ದಾರೆ. ಮಾರ್ಕ್‌ವುಡ್ ಬದಲಿಗೆ ಕ್ರಿಸ್ ಜೋರ್ಡಾನ್ ಪ್ಲೇಯಿಂಗ್ XIನಲ್ಲಿ ಆಡಲಿದ್ದಾರೆ.
ಇಂಗ್ಲೆಂಡ್‌ನ ಪ್ರಮುಖ ಬೌಲರ್ ಆಗಿರುವ ಮಾರ್ಕ್ ವುಡ್ ಸ್ನಾಯು ಬಿಗಿತ ಹೊಂದಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಾಗಿಲ್ಲ. ಬದಲಾಗಿ, ಕ್ರಿಸ್ ಜೋರ್ಡಾನ್ ಅವರನ್ನು ಆಡಿಸಲು ಸಿದ್ಧರಾಗಿದ್ದಾರೆ. ಮಾರ್ಕ್ ವುಡ್ ಅವರು ಫಿಟ್‌ನೆಸ್ ಡ್ರಿಲ್ ಹೊಂದಿದ್ದರಿಂದ ಅಭ್ಯಾಸದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲಿಲ್ಲ.
ತಂಡದ ಮತ್ತೊಬ್ಬ ಆಟಗಾರ ಡೇವಿಡ್ ಮಲಾನ್ ಅವರು ತೊಡೆಸಂದು ಗಾಯದಿಂದ ಬಳಲುತ್ತಿದ್ದರು, ತಮ್ಮ ಫಿಟ್‌ನೆಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಪಂದ್ಯಕ್ಕೆ ಮುನ್ನಾದಿನ ಇಂಗ್ಲೆಂಡ್ ನೆಟ್ಸ್‌ನಲ್ಲಿ ಫಿಲ ಸಾಲ್ಟ್ ಹೆಚ್ಚಿನಾಭ್ಯಾಸ ಮಾಡಿದರು.
"ನಾವು ಅವರಿಗೆ ಚೇತರಿಸಿಕೊಳ್ಳಲು ಪೂರ್ಣ ಸಮಯವನ್ನು ನೀಡುತ್ತೇವೆ. ನಾವು ಮತ್ತೆ ನಾಳೆ ಅವರನ್ನು ಪರೀಕ್ಷಿಸುತ್ತೇವೆ ಮತ್ತು ಮಲಾನ್ ಮತ್ತು ವುಡ್ ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಯೇ ಎಂದು ನೋಡುತ್ತೇವೆ. ಅದರಂತೆ ಅವರನ್ನು ಆಡುವ XIಗೆ ಸೇರಿಸಿಕೊಳ್ಳುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ನಾಯಕ ಜೋಸ್ ಬಟ್ಲರ್ ಹೇಳಿದರು.

ಇಂಗ್ಲೆಂಡ್ ಮೇಲೆ ಭಾರಿ ಪರಿಣಾಮ
ಗುರುವಾರ ನಡೆಯಲಿರುವ ಭಾರತ ವಿರುದ್ಧದ ಎರಡನೇ ಸೆಮಿಫೈನಲ್‌ನಲ್ಲಿ ಮಾರ್ಕ್ ವುಡ್ ಅಲಭ್ಯತೆ ಇಂಗ್ಲೆಂಡ್‌ಗೆ ಭಾರಿ ಹೊಡೆತ ಬೀಳಲಿದೆ. ಮೊಣಕೈ ಗಾಯದಿಂದ ಮರಳಿದ ನಂತರ ಬೌಲರ್ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಮೊಣಕೈ ಗಾಯದ ಪರಿಣಾಮ ಮಾರ್ಕ್‌ವುಡ್ ಈ ವರ್ಷದಲ್ಲಿ ಹಲವು ತಿಂಗಳು ಕ್ರಿಕೆಟ್‌ನಿಂದ ದೂರ ಇರುವಂತೆ ಮಾಡಿತು. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಮಾರ್ಕ್‌ವುಡ್ ತಮ್ಮ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ, 7.71 ಎಕಾನಮಿ ದರದಲ್ಲಿ 9 ವಿಕಟ್ ಪಡೆದಿದ್ದಾರೆ.
ಮಾರ್ಕ್‌ವುಡ್ ಬದಲಿಗೆ ಮತ್ತೊಬ್ಬ ವೇಗದ ಬೌಲರ್ ಕ್ರಿಸ್ ಜೋರ್ಡನ್ ಅವಕಾಶ ಪಡೆಯುವುದು ಖಚಿತವಾಗಿದೆ. ಕ್ರಿಸ್ ಜೋರ್ಡಾನ್ ಬ್ಯಾಟ್‌ನಿಂದಲೂ ಕೆಲ ರನ್ ಗಳಿಸುವ ಸಾಮರ್ಥ್ಯ ಇರುವುದರಿಂದ, ಇಂಗ್ಲೆಂಡ್ ಅವರನ್ನು ಆಡಿಸಲು ಸಿದ್ಧವಾಗಿದೆ.
ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಡೇವಿಡ್ ಮಲಾನ್ ಕೂಡ ಆಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಕೊನೆಯ ಕ್ಷಣದಲ್ಲಿ ಅವರ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications